ವಿಮಾನದಲ್ಲಿ ತಾರೆ ಶಿಲ್ಪಾ ಶೆಟ್ಟಿಗೆ ಕಹಿ ಘಟನೆ

By Rajendra

ಇತ್ತೀಚೆಗೆ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿಗೆ ವಿಮಾನದಲ್ಲಿ ಉತ್ಕಂಠಭರಿತ ಕ್ಷಣಗಳು ಎದುರಾಗಿದ್ದವು. ಆ ಶಾಕ್‌ನಿಂದ ಆಕೆ ಇನ್ನೂ ಹೊರಬಂದಿಲ್ಲ. ಆಕೆ ಪ್ರಯಾಣಿಸುತ್ತಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಪ್ರತಿಕೂಲ ವಾತಾವರಣದ ಕಾರಣ ವಿಮಾನ ಅಲ್ಲಿ ಲ್ಯಾಂಡ್ ಆಗದೆ ಜೈಪುರ್ ನಲ್ಲಿ ಲ್ಯಾಂಡ್ ಆಗಿತ್ತು.

ಈ ಕ್ಷಣಗಳಲ್ಲಿ ಶಿಲ್ಪಾ ಶೆಟ್ಟಿ ಥರಗುಟ್ಟಿ ಹೋಗಿದ್ದಾಗಿ ತಿಳಿಸಿದ್ದಾರೆ. ವಿಮಾನ ಲ್ಯಾಂಡ್ ಆಗುವವರೆಗೂ ಜೀವ ಬಾಯಿಗೆ ಬಂದಂತಾಗಿತ್ತು. ವಿಮಾನ ಸುರಕ್ಷಿತವಾಗಿ ಕೆಳಗಿಳಿಯಲಿ ಎಂದು ದೇವರಿಗೆ ಮೊರೆ ಹೋಗಿದ್ದೆ. ನನ್ನೊಂದಿಗೆ ಕೆಲವು ಪ್ರಯಾಣಿಕರು ದೇವರನ್ನು ಪ್ರಾರ್ಥಿಸುತ್ತಿದ್ದರು ಎಂದು ತಮ್ಮ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

ಪ್ರತಿಕೂಲ ವಾತಾವರಣ ಕಾರಣ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗುತ್ತಿಲ್ಲ ಎಂದು ಪ್ರಕಟಿಸಿದಾಗ ನಾನು ತುಂಬಾ ಭಯಭೀತಳಾಗಿದ್ದೆ. ಜೈಪುರದಲ್ಲಿ ಲ್ಯಾಂಡ್ ಆದ ವಿಮಾನ ಬಳಿಕ ದೆಹಲಿಗೆ ವಾಪಾಸಾಯಿತು. ವಿಮಾನದಿಂದ ಕೆಳಗಿಳಿಯುವ ತನಕ ನನಗೆ ಸಮಾಧಾನವಾಗಲಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X