ಮಾಜಿ ಹಾಲಿ ಪತ್ನಿಯರೊಂದಿಗೆ ಅಮೀರ್ ಖಾನ್

By Rajendra

ಬಾಲಿವುಡ್ ನಟ ಅಮೀರ್ ಖಾನ್ ತನ್ನ ಮಾಜಿ ಪತ್ನಿ ರೀನಾ ಜೊತೆ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. 'ಲಗಾನ್' ಚಿತ್ರದ 10ನೇ ವಾರ್ಷಿಕೋತ್ಸವದಲ್ಲಿ ಅಮೀರ್ ಹಾಗೂ ರೀನಾ ಒಟ್ಟಿಗೆ ದರ್ಶನ ನೀಡಿದರು. 'ಲಗಾನ್' ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿ ರೀನಾ ಕೆಲಸ ಮಾಡಿದ್ದರು.

'ಖಯಾಮತ್ ಸೆ ಖಯಾಮತ್ ತಕ್' ಚಿತ್ರದ ಪಾಪ ಕೆಹ್ತೆ ಹೈ...ಹಾಡಿನಲ್ಲಿ ರೀನಾ ಕಾಣಿಸಿಕೊಂಡಿದ್ದರು. ಇವರಿಬ್ಬರ 15 ವರ್ಷಗಳ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳು ಜುನೈದಾ ಹಾಗೂ ಇರಾ. ಅದಾದ ಬಳಿಕ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ವಿವಾಹ ವಿಚ್ಛೇದನದಲ್ಲಿ ಅಮೀರ್ ಹಾಗೂ ರೀನಾ ಬೇರ್ಪಟ್ಟಿದ್ದರು.

'ಲಗಾನ್' ಚಿತ್ರ ಮಾಡಬೇಕಾದರೆ ರೀನಾ ಎಷ್ಟೆಲ್ಲಾ ಕಷ್ಟಪಟ್ಟರು ಎಂಬುದನ್ನು ಅಮೀರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಚಿತ್ರೀಕರಣಕ್ಕೆ ಅಮೀರ್ ತಡವಾಗಿ ಬಂದ ಕಾರಣ ಗಂಡ ಎಂಬುದನ್ನೂ ಲೆಕ್ಕಿಸದೆ ವಾಚಾಮ ಗೋಚರ ಬೈದಿದ್ದಳು. ಇದೆಲ್ಲಾ ಹಳೆ ಪುರಾಣವನ್ನು ಅಮೀರ್ ತನ್ನ ಮಾಜಿ ಪತ್ನಿಯ ಎದುರೆ ನೆನಪಿಸಿಕೊಂಡರು.

ಅಮೀರ್ ಹಾಲಿ ಪತ್ನಿ ಕಿರಣ್ ರಾವ್ 'ಲಗಾನ್' ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಲಗಾನ್ ಬಿಡುಗಡೆಯಾದ 3 ವರ್ಷಗಳ ಬಳಿಕ ಅಮೀರ್ ಹಾಗೂ ಕಿರಣ್ ರಾವ್ ಮದುವೆಯಾದರು. ಅಮೀರ್ ಮಾಜಿ, ಹಾಲಿ ಪತ್ನಿಯರು ಲಗಾನ್ 10ನೇ ವಾರ್ಷಿಕೋತ್ಸವದಲ್ಲಿ ಒಂದೇ ವೇದಿಕೆಯಲ್ಲಿದ್ದದ್ದು ವಿಶೇಷ. ಅಂದಹಾಗೆ ಅಮೀರ್‌ಗೆ ರೀನಾ ಈಗಲೂ ಪರಮಾತ್ಮ ಗೆಳತಿಯಂತೆ. (ಏಜೆನ್ಸೀಸ್)

More from Filmibeat

English summary
Aamir Khan was spotted with his ex-wife Reena in the 'Lagaan' 10th anniversary celebrations, who was the executive producer of the movie. Reena appeared in the song, Papa Kehte Hai (Qayamat Se Qayamat Tak). Aamir remembered how dedicated and supportive she was during the making of Lagaan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X