ಕಿಸ್ಸಿಂಗ್ ಸ್ಟಾರ್ ಹಶ್ಮಿಗೆ ತುಟಿ ಚುಂಬನ ಇಷ್ಟವಿಲ್ವಂತೆ!

By Mahesh

ಮುಂಚೆ ಎಲ್ಲಾ ಸೀರಿಯಲ್ ಕಿಸ್ಸರ್ ಎಂದು ಯಾರದ್ದು ಕರೆದರೆ ಹಶ್ಮಿ ಮುಖ ನಾಚಿಕೆಯಿಂದ ಕೆಂಪಗಾಗುತ್ತಿತ್ತು. ಈಗ ಯಾರದ್ರೂ ಆ ರೀತಿ ಕರೆದರೆ ಹಶ್ಮಿ ಮುಖ ಕೋಪದಿಂದ ಕೆಂಪಾಗುತ್ತಿದೆ. ಮರ್ಡರ್ 2 ಚಿತ್ರದ ಪೋಸ್ಟರ್ ಗಳಲ್ಲಿ ಶ್ರೀಲಂಕಾ ಬೆಡಗಿ ಜಾಕ್ವಲಿನ್ ಫರ್ನಾಂಡಿಸ್ ಜೊತೆ ಮಾದಕವಾಗಿ ಕಾಣಿಸಿಕೊಂಡಿರುವ ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಟ್ಯಾಕ್ ಕಿತ್ತು ಎಸೆಯುವ ಚಿಂತೆಯಲ್ಲಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡುತ್ತಾ, ಸೀರಿಯಲ್ ಕಿಸ್ಸರ್ ಎಂದು ಪದೆ ಪದೇ ಕೇಳೋಕೆ ಹಿಂಸೆ ಆಗ್ತಾ ಇದೆ. ಸೀರಿಯಲ್ ಕಿಸ್ಸರ್ ಗಿಂತ ಸೀರಿಯಲ್ ಕಿಲ್ಲರ್ ಅಂದ್ರೂ ಓಕೆ ಎಂದು ತಮ್ಮ ಹಲ್ಲು ಕಿರಿದಿದ್ದಾರೆ. ಹಶ್ಮಿ ಮಾತು ಕೇಳಿದ ಮುಂಬೈನ ಪತ್ರಕರ್ತರು ಎಲಾ ಇವನಾ ಎಂದು ತಲೆ ಕೆರೆದು ಕೊಂಡಿದ್ದಾರೆ.

ಸೀರಿಯಲ್ ಕಿಸ್ಸರ್ ಟ್ಯಾಕ್ ಬೇಡ ಅಂಥಾ ಮಾತ್ರ ಹಶ್ಮಿ ಹೇಳ್ತಾ ಇರೋದು, ಮಾದಕ, ಪ್ರಚೋದನಕಾರಿ ಚಿತ್ರಗಳಲ್ಲಿ ಜೀವನ ಪರ್ಯಂತ ಗುತ್ತಿಗೆ ಪಡೆದಂತೆ ನಟಿಸಲು ಯಾವುದೇ ಮುಜುಗರವಾಗಲಿ ಅಡ್ಡಿ ಆತಂಕವಾಗಲಿ ಇಲ್ಲವಂತೆ. ಮರ್ಡರ್ ನಲ್ಲಿ ಮಲ್ಲಿಕಾಳಿಗೆ ಮುತ್ತಿಟ್ಟ ಹಶ್ಮಿ ತುಟಿಗಳು ನಂತರ ಜಹೇರ್, ಅಕ್ಸರ್, ಕ್ರೂಕ್, ಗ್ಯಾಂಗ್ ಸ್ಟರ್ ನಲ್ಲಿ ವಿವಿಧ ನಟಿಯರ ತುಟಿ ಚುಂಚಿಸಿದ್ದವು. ಹಶ್ಮಿ ಅಭಿನಯ ಹೊಚ್ಚ ಹೊಸ ಚಿತ್ರ ಮರ್ಡರ್ 2, ಜುಲೈ 8 ರಂದು ತೆರೆಕಾಣಲಿದ್ದು, ಸಿನಿ ರಸಿಕರು ಕಾತುರದಿಂದ ಕಾದಿದ್ದಾರೆ.

More from Filmibeat

English summary
Actor Emraan Hashmi, who is busy with his upcoming film Murder 2 opposite Jacqueline Fernandez says that he is irritated with his serial kisser tag. The actor who shot to fame because of his non-stop kisses and love making on-screen with his actresses says that he no more enjoys the image.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X