ಸೌಂದರ್ಯ ಸಾಬೂನು ಲಕ್ಸ್‌ಗೆ ಸಿಕ್ಕಿದಳು ಹೊಸ ಬ್ಯೂಟಿ
ಕನಸಿನ ಕನ್ಯೆ ಹೇಮಾ ಮಾಲಿನಿ, ಕೃಷ್ಣ ಸುಂದರಿ ರೇಖಾ, ಮೋಹಕ ಸುಂದರಿ ಶ್ರೀದೇವಿ, ನೆರೆಮನೆ ಹುಡುಗಿ ಮಾಧುರಿ ದೀಕ್ಷಿತ್, ಸೌಂದರ್ಯದ ಖನಿ ಐಶ್ವರ್ಯ ರೈ, ಬಳುಕುವ ಬಳ್ಳಿ ಕತ್ರಿನಾ ಕೈಫ್ ತಾರೆಗಳ ಜೊತೆಗೆ ಮಲ್ಲು ಬೆಡಗಿ ಅಸಿನ್ ಹೆಸರು ಬೆರೆತು ಹೋಗಿದೆ.
ಕಾರಣ ಸ್ಪಷ್ಟವಾಗಿದೆ, ಸೌಂದರ್ಯ ರಹಸ್ಯದ ಸಾಬೂನು ಲಕ್ಸ್ ರಾಯಭಾರಿಯಾಗಿ ಅಸಿನ್ ಕಾಣಿಸಲಿದ್ದಾರೆ. ಈಗಾಗಲೆ ಹಲವು ಉತ್ಪನ್ನಗಳ ರಾಯಭಾರಿಯಾಗಿ ಅಸಿನ್ ಹಲವಾರು ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ಇದೀಗ ಲಕ್ಸ್ ಸೊಪ್‌ನ ತಾಜಾ ಜಾಹೀರಾತಿನಲ್ಲಿ ಅಸಿನ್ ಶೀಘ್ರದಲ್ಲೆ ದರ್ಶನ ನೀಡಲಿದ್ದಾರೆ.
ಅಸಿನ್ ಅಭಿನಯಿಸಿರುವ ಲಕ್ಸ್ ಸೋಪಿನ ಜಾಹೀರಾತು ಶೀಘ್ರದಲ್ಲೆ ಪ್ರಸಾರವಾಗಲಿದೆ. ಅಮೀರ್ ಖಾನ್ ಜೊತೆ 'ಗಜಿನಿ' ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದರು. ಬಳಿಕ ಆಕೆ ದಕ್ಷಿಣ ಭಾರತದಲ್ಲೂ ಮನೆಮಾತಾದ ನಟಿ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಲಕ್ಸ್ ಕಂಪನಿ ಅಸಿನ್ ಅವರನ್ನು ಉತ್ಪನ್ನ ರಾಯಭಾರಿಯಾಗಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದೆ.
ಆಕೆ ಅಭಿನಯಿಸಿದ ಬಾಲಿವುಡ್ ಚಿತ್ರ 'ಲಂಡನ್ ಡ್ರೀಮ್ಸ್' ಚಿತ್ರ ಪ್ರೇಕ್ಷಕರನ್ನು ನಿರಾಸೆಗೊಳಿಸಿತ್ತು. ಈ ಚಿತ್ರದ ಬಳಿಕ ಹಿಂದಿಯಲ್ಲಿ ಅಸಿನ್ ಹವಾ ಕೊಂಚ ಕಡಿಮೆಯಾಯಿತು. ಈಗ ಎರಡು, ಮೂರು ಚಿತ್ರಗಳಲ್ಲಿ ನಟಿಸುತ್ತಿರುವ ಅಸಿನ್ ತನ್ನ ಸಾಮರ್ಥ್ಯವನ್ನು ತೋರಿಸಲು ಮುಂದಾಗಿದ್ದಾರೆ.


Click it and Unblock the Notifications











