For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬೆಡಗಿ ಯಾನಾ ಗುಪ್ತಾ ಮೂಗಿಗೆ ಡ್ಯಾಮೇಜ್

  By Rajendra
  |

  ಅಜ್ಞಾತಕ್ಕೆ ಸರಿದಿದ್ದ ಯಾನಾ ಗುಪ್ತಾ ಚಡ್ಡಿ ಪುರಾಣದಿಂದ ಮತ್ತೆ ಬೆಳಕಿಗೆ ಬಂದಿದ್ದರು. ಈಗ ಈಕೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಚಿತ್ರೀಕರಣದಲ್ಲಿ ತನ್ನ ಮೂಗಿಗೆ ಡ್ಯಾಮೇಜ್ ಮಾಡಿಕೊಂಡಿದ್ದು ಆಕೆಯ ಮೂಗಿನ ಮೂಳೆ ಮುರಿದಿದೆ. ಸದ್ಯಕ್ಕೆ ಯಾನಾ ತಮ್ಮ ಮೂಗನ್ನು ದುರಸ್ಥಿಗೊಳಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

  ಸೋನಿ ಟಿವಿಯ 'ಝಲಕ್ ದಿಖ್‌ಲಾಜಾ' ಎಂಬ ಕಾರ್ಯಕ್ರಮದಲ್ಲಿ ಕುಣಿಯುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ. ನನಗೇನು ಆಗಿಲ್ಲ ಎಂದುಕೊಂಡು ಈಕೆ ಸುಮ್ಮನಾಗಿದ್ದರಂತೆ. ಆದರೆ ಎಕ್ಸ್‌ರೇ ತೆಗೆಸಿದಾಗ ಮೂಗು ಡ್ಯಾಮೇಜ್ ಆಗಿರುವುದು ಗೊತ್ತಾಗಿದೆ. ಮೂಗಿಗೆ ಇಷ್ಟೆಲ್ಲಾ ಪೆಟ್ಟಾದರೂ ನಾನು ಕಾರ್ಯಕ್ರಮದ ಕೊನೆಯ ತನಕ ಹೇಗೆ ಕುಣಿದೆ ಎಂಬುದು ಆಕೆಗೆ ಗೊತ್ತಾಗಲಿಲ್ಲವಂತೆ.

  ಒಟ್ಟಿನಲ್ಲಿ ಯಾನಾಗೆ ಹೀಗಾಗಬಾರದಿತ್ತು. ಆದರೆ ಘಟನೆ ನಡೆದು ಹೋಗಿದೆ. ಗುರುವಾರ (ಫೆ.17) ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆಕೆಯ ಮೂಗು ಹಳೆ ಸ್ವರೂಪಕ್ಕೆ ಬರಲಿ ಎಂದು ಆಶಿಸೋಣ. ಎಷ್ಟೇ ಆಗಲಿ ಈಕೆ ಕನ್ನಡದಲ್ಲಿ ಬಿನ್ ಲಾಡೆನ್ನು ನನ್ ಮಾವ..ಬಿಲ್ ಕ್ಲಿಂಟನ್ನು ನನ್ ಭಾವ...ಎಂದು ಕುಣಿದ ಅಮ್ಮಣ್ಣಿಯಲ್ಲವೆ?

  English summary
  Bollywood actress Yana Gupta nose fractured while performing for the ‘Domestic violence’ theme on 'Jhalak Dikhhla Jaa'. At first she thought it was a minor injury but the X-ray showed otherwise. Yana Gupta tweeted about her broken nose.
  Thursday, February 17, 2011, 17:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X