For Quick Alerts
  ALLOW NOTIFICATIONS  
  For Daily Alerts

  ಗೋವಾ ತೀರದಲಿ ಅನುಷ್ಕಾ ಜೊತೆ ರಣವೀರ್ ಸಿಂಗ್!

  By Rajendra
  |

  ಬಾಲಿವುಡ್‌ನ ಹಾಟ್ ಜೋಡಿ ಮತ್ತೆ ಒಂದಾಗಿದೆ. ಈ ಬಾರಿ ಈ ಜೋಡಿ ಗೋವಾ ಸಮುದ್ರ ತೀರವನ್ನು ಆಯ್ಕೆ ಮಾಡಿಕೊಂಡಿದೆ. ಅಲ್ಲಿ ಹಾಡು, ಕುಣಿತ, ಮೋಜು ಮಸ್ತಿ ಎಲ್ಲವನ್ನೂ ಉಡಾಯಿಸಿದೆ. ಸ್ವಲ್ಪ ತಾಳಿ ಇದೆಲ್ಲಾ ನಡೆದದ್ದು ನಿಜವಾಗಿ ಅಲ್ಲ. ಮನೀಶ್ ಶರ್ಮಾ ನಿರ್ದೇಶನದ 'ಲೇಡೀಸ್ Vs ರಿಕಿ ಬಾಲ್' ಎಂಬ ಹಿಂದಿ ಚಿತ್ರಕ್ಕಾಗಿ.

  ಈ ಚಿತ್ರದಲ್ಲಿ ರಣವೀರ್ ವಂಚಕನಾಗಿ ಕಾಣಿಸಲಿದ್ದಾರೆ. ಈ ವಂಚಕನ ಬಲೆಗೆ ಅನುಷ್ಕಾ ಬೀಳುತ್ತಾಳೆ. ಮುಂದೆ ಕತೆ ಏನಾಗುತ್ತದೆ, ಏನೆಲ್ಲಾ ತಿರುವುಗಳನ್ನು ಪಡೆಯುತ್ತದೆ ಎಂಬುದು ಚಿತ್ರದ ಕಥಾಹಂದರ. ಈ ಹಿಂದೆ ಇವರಿಬ್ಬರೂ 'ಬ್ಯಾಂಡ್ ಬಾಜಾ ಬರಾತ್' ಚಿತ್ರದಲ್ಲಿ ಅಭಿನಯಿಸಿದ್ದರು. ಚಿತ್ರದ ನಿರ್ದೇಶಕರು ಈ ಹಿಂದೆ ಇವರ ಜೊತೆ ಕೆಲಸ ಮಾಡಿದ್ದರು.

  ಸದ್ಯಕ್ಕೆ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 18 ದಿನಗಳ ಚಿತ್ರೀಕರಣಕ್ಕೆ ಚಿತ್ರತಂಡ ದಕ್ಷಿಣ ಗೋವಾದಲ್ಲಿ ಬೀಡುಬಿಟ್ಟಿದೆ.ಅನುಷ್ಕಾ ಹಾಗೂ ರಣವೀರ್ ಉಳಿದುಕೊಳ್ಳಲು ಗೋವಾದ ಐಶಾರಾಮಿ ರೆಸಾರ್ಟ್‌ಗಳನ್ನು ಬುಕ್ ಮಾಡಲಾಗಿದೆ. ಇಬ್ಬರೂ ಒಂದೇ ರೂಮಿನಲ್ಲದಿದ್ದರೂ ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

  English summary
  Bollywood sources says that Anushka Sharma, Ranveer are in Goa shooting for ’Ladies vs Ricky Bahl’ and they are staying in the same hotel in South Goa. The duo are shooting in Goa for director Maneesh Sharma’s next. The couple is shooting for the film for 18 days and is staying at a luxurious resort in South Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X