ಐಶೂ ಬೇಬಿಗೆ ಅಜ್ಜ ಮತ್ತಜ್ಜನ ಹೋಲಿಕೆ: ಪಾಪ, ಅಪ್ಪ!

ಇದೀಗ ಯಾರನ್ನು ಹೋಲುತ್ತದೆ ಈ ಬೇಬಿ ಎಂಬ ವಿಷಯವಾಗಿ ಸುತ್ತಲಿದ್ದವರೆಲ್ಲಾ ತಲೆಕೆಡಿಸಿಕೊಳ್ಳುತ್ತಿದ್ದಾರೆ. ಕಣ್ಣು ಥೇಟ್ ಅಮ್ಮನಂತಿದೆ. ಆದರೆ ರೂಪ್ ಯಾರಂತೆ ಎಂಬುದು ಯಕ್ಷಪ್ರಶ್ನೆ ಆಗಿದೆ. ಒಬ್ಬೊಬ್ಬರೂ ಒಂದೊಂದು ರೀತಿ ಹೇಳುತ್ತಿದ್ದಾರೆ. ಬಹಳಷ್ಟು ಜನ ಅಜ್ಜ ಅಮಿತಾಬ್ ಹೋಲಿಕೆ ಇದೆ ಎಂದಿದ್ದರೆ ಸಾಕಷ್ಟು ಜನ, ಅಜ್ಜಿ ಜಯಾ ಬಚ್ಚನ್ ತರಹ ಅಂದಿದ್ದಾರೆ. ಇನ್ನೂ ಕೆಲವರಿಗೆ ಐಶೂ ತಾಯಿ ಬೃಂದಾ ರೈ ಹೋಲಿಕೆ ಕಾಣಿಸುತ್ತಿದೆ.
ಮುತ್ತಜ್ಜ ಹರಿವಂಶರಾಯ್ ಬಚ್ಚನ್ ಹೋಲಿಕೆ ಕಂಡವರೂ ಇದ್ದಾರೆ. ಆದರೆ ಒಬ್ಬರಾದರೂ ಅಪ್ಪ ಅಭಿಷೇಕ್ ಬಚ್ಚನ್ ಹೆಸರು ಹೇಳಿದರೆ ಕೇಳಿ! ಐಶೂ ಅಥವಾ ಅಮಿತಾಬ್ ಹೋಲಿಕೆ ಕಾಣುವುದರಲ್ಲೇ ಎಲ್ಲರಿಗೂ ತೃಪ್ತಿ. ಎಲ್ಲೆಲ್ಲೂ ಅಜ್ಜ ಅಮಿತಾಬ್ ಹಾಗೂ ಅಮ್ಮ ಐಶೂ ಬಗ್ಗೆಯೇ ಮಾತು. ಈ ನಡುವೆ ಛೋಟಾ ಬಚ್ಚನ್, ವಿಶ್ವಸುಂದರಿಯ ಗಂಡ, ಬೇಬಿಯ ಅಪ್ಪ ಅಭಿಷೇಕ್ ಹೆಸರು ಮೂಲೆ ಸೇರಿದೆ. ಯಾಕೆ ಎಂಬುದು ಜಾಣರಾದ ನಿಮಗೆ ತಿಳಿದಿದೆ. ಎಲ್ಲಾ ಪ್ರಸಿದ್ಧಿಯ ಮಹಿಮೆ. ಇಷ್ಟಕ್ಕೂ ಇದೆಲ್ಲಾ ಗಾಸಿಪ್ ತಾನೇ? ಪಾಪ, ಐಶೂ ಬೇಬಿ ಅಪ್ಪ... (ಏಜೆನ್ಸೀಸ್)
More from Filmibeat
English summary
Aishwarya Rai new baby girl have failed to inherit father Abhishek Bachchan traits and features.
ಬಾಲಿವುಡ್ ಐಶ್ವರ್ಯ ರೈ ಬಚ್ಚನ್ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ aishwarya rai bachchan abhishek bachchan amitabh bachchan


Click it and Unblock the Notifications











