ಐಶ್ವರ್ಯ ರೈ ಮಗು ಕಣ್ಣು ಥೇಟ್ ಅಮ್ಮನಂತೆಯೇ

By Rajendra

ಐಶ್ವರ್ಯ ರೈ ಬುಧವಾರ (ನ.16) ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ಅಮ್ಮನ ಯಾವ ಗುಣಗಳು ಮಗಳಲ್ಲಿ ಹೋಲಿಕೆಯಾಗುತ್ತವೆ? ಜಗತ್ತಿಗೆ ಅಡಿಯಿಟ್ಟು ಇನ್ನೂ ಒಂದು ದಿನವಾಗಿರುವ ಐಶ್ವರ್ಯ ರೈ ಬೇಬಿ ಈಗಷ್ಟೇ ಕಣ್ಣುಬಿಡುತ್ತಿದೆ. ಕಣ್ಣುಗಳು ಮಾತ್ರ ಥೇಟ್ ಅಮ್ಮನಂತೆಯೇ ಆಕರ್ಷವಾಗಿವೆ ಎಂದು ಅಮಿತಾಬ್ ಟ್ವೀಟಿಸಿದ್ದಾರೆ.

ಮಗು ಆಗಾಗ ಪಿಳಿಪಿಳಿ ಎಂದು ಕಣ್ಣು ಬಿಟ್ಟು ಎಲ್ಲರನ್ನೂ ನೋಡುತ್ತದೆ. ಆ ಕಣ್ಣುಗಳಲ್ಲಿ ಎಂಥಹಾ ಹೊಳಪು ಅಂತೀರಾ ವಾವ್ ಎಂದಿದ್ದಾರೆ ಬಿಗ್ ಬಿ. ತಾನು ತಾತನಾಗಿರುವ ಬಗ್ಗೆಯೂ ಅಮಿತಾಬ್ ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಮಗು ಕಣ್ಣುಗಳು ಅಮ್ಮನಂತೆಯೇ ಇವೆ. ಮುಂದೆ ಅವು ಬದಲಾಗಲೂ ಬಹುದು ಎಂದಿದ್ದಾರೆ.

ಮಗುವಿನ ಕಣ್ಣುಗಳು ಐಶ್ವರ್ಯ ರೈ ಕಣ್ಣುಗಳನ್ನು ಹೋಲುತ್ತಿವೆ ಎಂಬ ಮಾಹಿತಿಯನ್ನು ಬಿಗ್ ಬಿ ಕೊಟ್ಟಿದ್ದಾರೆ. ಇನ್ನು ಅಪ್ಪ ಅಭಿಷೇಕ್ ಬಚ್ಚನ್‌ನ ಯಾವ ಹೋಲಿಕೆಗಳು ಮಗುವಿಗೆ ಬಂದಿವೆ ಎಂಬುದನ್ನು ಬಿಗ್ ಬಿ ಶೀಘ್ರ ಬಹಿರಂಗಪಡಿಸಲಿ ಎಂದು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುವಂತಾಗಿದೆ.

ತಾವೀಗ ಚಿತ್ರದಲ್ಲಿ ನೋಡುತ್ತಿರುವುದು ಖ್ಯಾತ ಛಾಯಾಗ್ರಾಹಕ ಡಾಬೂ ರತ್ನಾನಿ ಅವರ ಮಗಳು ರತ್ನಾನಿಯನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಐಶ್ವರ್ಯ ರೈ ಫೈಲ್ ಫೋಟೋ. ಸದ್ಯಕ್ಕೆ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. (ಏಜೆನ್ಸೀಸ್)

More from Filmibeat

English summary
Guess what's common in the Bachchan baby girl? A day old baby have inherited her mother Aishwarya Rai Bachchan's beautiful light eyes, as tweeted by grandpa Amitabh Bachchan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X