ಅಮೀಶಾ ಪಟೇಲ್ ಗೆ ಡೆಂಗೆ ಜ್ವರ; ಅಯ್ಯೋ ಪಾಪ!
ಬಾಲಿವುಡ್ ನಟಿ ಅಮೀಶಾ ಪಟೇಲ್ ಡೆಂಗೆ ಜ್ವರದಿಂದ ಬಳಲುತ್ತಿದ್ದಾರೆ. ಇದೀಗಷ್ಟೆ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದ್ದು ತನ್ನ ಈ ಸ್ಥಿತಿಗೆ ಕಾರಣವಾದ ಮುಂಬೈ ಮಹಾನಗರ ಪಾಲಿಕೆ ಹಾಗೂ ಮುಂಬೈನ ನಾಗರಿಕರ ವಿರುದ್ಧ ಹರಿಹಾಯ್ದಿದ್ದಾರೆ. ಸೊಳ್ಳೆಗಳನ್ನು ನಿಯಂತ್ರಿಸದೆ ಕ್ರಮ ಕೈಗೊಳ್ಳದ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಹಾಸಿಗೆ ಹಿಡಿದಿರುವ ಆಕೆಯನ್ನು ಡೆಂಗೆ ಜ್ವರ ಹೈರಾಣ ಮಾಡಿದೆ. ಸಾಕಪ್ಪ ಸಾಕು ಈ ನರಳಾಟ, ಹಾಸಿಗೆ ಬಿಟ್ಟು ಏಳಲಾಗದ ಪರಿಸ್ಥಿತಿ ನನ್ನ ಶತ್ರುವಿಗೂ ಬೇಡ ಎಂದು ಅಲವತ್ತುಕೊಂಡಿದ್ದಾರೆ. ಈ ಹಿಂದೆ ನಾನು ಯಾವತ್ತೂ ಈ ರೀತಿಯ ನರಕ ಅನುಭವಿಸಿಲ್ಲ ಎಂದು ಹೇಳುತ್ತಾ ರಗ್ಗು ಹೊದ್ದುಕೊಂಡಿದ್ದಾಗಿ ಮುಂಬೈ ಪತ್ರಿಕೆಗಳು ಸುದ್ದಿ ಬಿತ್ತರಿಸಿವೆ.
ಪಾಲಿಕೆ ನಿರ್ಲಕ್ಷದ ಕಾರಣ ಮುಂಬೈನಲ್ಲಿ ಡೆಂಗೆ ಮಾರಿ ವಿಸ್ತರಿಸುತ್ತಿದೆ. ಮುಂಬೈನ ಜನಕ್ಕೆ ನಾಗರಿಕೆ ಪ್ರಜ್ಞೆಯೇ ಇಲ್ಲ. ಎಲ್ಲೆಂದರೆ ಅಲ್ಲಿ ಉಗಿಯುತ್ತಾರೆ. ನೀರು ನಿಲ್ಲುವಂತೆ ಮಾಡಿ ಸೊಳ್ಳೆಗ ಸಂತತಿಯನ್ನು ಹೆಚ್ಚಿಸಲು ಕಾರಣವಾಗಿದ್ದಾರೆ. ಇನ್ನೊಮ್ಮೆ ಯಾರಾದರೂ ರಸ್ತೆಯಲ್ಲಿ ಉಗಿಯುವವರನ್ನು ಕಂಡರೆ ಅಲ್ಲೆ ನಿಲ್ಲಿಸಿ ಬೆಂಡೆತ್ತುತ್ತೇನೆ ಎಂದಿದ್ದಾರೆ.


Click it and Unblock the Notifications











