ಶಾರುಖ್ ಖಾನ್ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಬಂದಿದ್ದ ಫ್ಯಾನ್ಸ್‌ನ 17 ಮೊಬೈಲ್ ಫೋನ್ ಕಳ್ಳತನ

ನವೆಂಬರ್ 2 ರಂದು ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ 58 ನೇ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆದಿದೆ. ಮಧ್ಯರಾತ್ರಿ, ಮುಂಬೈನ ಬಾಂದ್ರಾದಲ್ಲಿರುವ ಮನ್ನತ್ ಬಂಗಲೆ ಹೊರಗೆ ಅವರನ್ನು ನೋಡಲು ಅಭಿಮಾನಿಗಳ ಸಮುದ್ರವೇ ಸೇರಿತ್ತು. ಬಾಲ್ಕನಿಯಲ್ಲಿ ನಿಂತು ಫ್ಲೈಯಿಂಗ್ ಕಿಸ್ ನೀಡುತ್ತಿದ್ದ ನಟನನ್ನು ಒಂದು ಬಾರಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.

ಸಾವಿರಾರು ಮಂದಿ ಸೇರಿದ್ದ ಕಾರಣ ಮುಂಬೈ ಪೊಲೀಸರು ಭಾರಿ ಭದ್ರತೆ ಒದಗಿಸಿದ್ದರು.ಇದರ ನಡುವೆಯೂ ಉಪನಗರ ಬಾಂದ್ರಾದಲ್ಲಿರುವ ಮನ್ನತ್ ಮುಂದೆ ನೆರೆದಿದ್ದ ಶಾರುಖ್ ಖಾನ್ ಅಭಿಮಾನಿಗಳ ಕನಿಷ್ಠ 17 ಮೊಬೈಲ್ ಫೋನ್‌ಗಳನ್ನು ಕಳ್ಳರು ಕದ್ದಿದ್ದಾರೆ ಎಂದು ಮುಂಬೈ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

17 fans phones stolen outside Mannat on Shah Rukh Khan birthday celebration

ಹುಟ್ಟುಹಬ್ಬ ಆಚರಣೆಗೆ ಬಂದು ಮೊಬೈಲ್ ಕಳೆದುಕೊಂಡ ಅಭಿಮಾನಿಗಳು

ಗುರುವಾರ ಮುಂಜಾನೆ ಕಿಂಗ್ ಖಾನ್ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಬಂದಿದ್ದ ವೇಳೆ ಕಲ್ಳತನ ನಡೆದಿದೆ. ಎಸ್‌ಆರ್‌ಕೆ ಅಭಿಮಾನಿಗಳ ಸಮುದ್ರವೇ ಅವರ ಮನೆ ಮನ್ನತ್ ಹೊರಗೆ ಅವರನ್ನು ನೋಡಲು ಪ್ರಯತ್ನಿಸುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊಬೈಲ್ ಕಳ್ಳತನದ ಸಂಬಂಧ ಗುರುವಾರ ಬಾಂದ್ರಾ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ರಾಷ್ಟ್ರೀಯ ಪತ್ರಿಕೆಯೊಂದರ 23 ವರ್ಷದ ಫೋಟೋಗ್ರಾಫರ್ ಮೊದಲ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಫೋಟೋಗ್ರಾಫರ್ ದೂರಿನ ಪ್ರಕಾರ, ಅವರು ಸ್ನೇಹಿತರೊಂದಿಗೆ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ಗೆ ಬಂದು ಮನ್ನತ್‌ನ ಹೊರಗೆ ಸೇರಿದ್ದ ಗುಂಪಿನ ಜೊತೆಗೆ ಸೇರಿಕೊಂಡಿದ್ದರು. ರಾತ್ರಿ 12.30 ರ ಸುಮಾರಿಗೆ ದೂರುದಾರರು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಫೋನ್ ಕಾಣೆಯಾಗಿದೆ ಎಂದು ತಿಳಿಯಿತು ಎಂದು ದೂರಿನಲ್ಲಿ ಹೇಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಮ್ಮ ಮೊಬೈಲ್ ಕಾಣೆಯಾಗುತ್ತಿದ್ದಂತೆ ಅನೇಕರು ತಮ್ಮ ಫೋನ್‌ಗಳನ್ನು ಕಳೆದುಕೊಂಡಿದ್ದಾರೆ ಎಂದು ದೂರುದಾರನಿಗೆ ತಿಳಿಯಿತು. ಕಳ್ಳತನದ ಬಗ್ಗೆ ದೂರು ನೀಡಲು ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿದ್ದರು. ನಂತರ ಫೋನು ಕಳೆದುಕೊಂಡ ಅನೇಕ ಅಭಿಮಾನಿಗಳು ಇದೇ ರೀತಿಯ ದೂರುಗಳನ್ನು ಸಲ್ಲಿಸಲು ಠಾಣೆಗೆ ಬಂದರು. ಪೊಲೀಸರು ದೂರುಗಳನ್ನು ಒಟ್ಟುಗೂಡಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಳ್ಳತನಕ್ಕಾಗಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

17 fans phones stolen outside Mannat on Shah Rukh Khan birthday celebration

ಸೆಂಟ್ರಲ್ ಮುಂಬೈನ ಪರೇಲ್‌ನಲ್ಲಿ ವಾಸಿಸುವ 24 ವರ್ಷದ ಯುವಕನ ದೂರಿನ ಮೇರೆಗೆ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟಾರೆ 17 ಅಭಿಮಾನಿಗಳ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರತಿ ವರ್ಷ, ಸಾವಿರಾರು ಅಭಿಮಾನಿಗಳು ನವೆಂಬರ್ 2 ರಂದು ಅವರ ಹುಟ್ಟುಹಬ್ಬಕ್ಕೆ ಶುಭ ಕೋರಲು ಮನ್ನತ್ ಬಳಿ ಬರುತ್ತಾರೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮನ್ನತ್ ಹೊರಗೆ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಭದ್ರತಾ ವ್ಯವಸ್ಥೆಗಳ ಹೊರತಾಗಿಯೂ, ಕಳ್ಳರು ಭಾರಿ ಜನಸಂದಣಿಯ ಲಾಭ ಪಡೆದುಕೊಂಡು ಫೋನ್‌ಗಳನ್ನು ಕದ್ದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶಾರುಖ್ ಖಾನ್ ಅವರು 2023ರ ವರ್ಷವನ್ನು 'ಪಠಾಣ್' ಎಂಬ ಬ್ಲಾಕ್ಬಸ್ಟರ್ ಹಿಟ್ ನೀಡುವ ಮೂಲಕ ಹೊಸ ವರ್ಷವನ್ನು ಆರಂಭಿಸಿದ್ದರು. ಬಳಿಕ ಸೆಪ್ಟೆಂಬರ್‌ನಲ್ಲಿ ಅವರ ಎರಡನೇ ಚಿತ್ರ 'ಜವಾನ್' ಬಿಡುಗಡೆಯಾಯಿತು. ಅದೊಂದು ದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗಿದೆ. ಇದೀಗ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಮುಂದಿನ ಚಿತ್ರ 'ಡಂಕಿ' ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇದು ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.

More from Filmibeat

English summary
Fans' phones stolen outside Mannat on Shah Rukh Khan birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X