For Quick Alerts
  ALLOW NOTIFICATIONS  
  For Daily Alerts

  ಅಕ್ಕಿ ಜೊತೆ ಕರೀನಾ ಕಪೂರ್ ಜಿಂತಾತಾ ಚಿತಾ ಚಿತಾ

  By Rajendra
  |

  "ಕಾಲೇಜು ಕನ್ಯೆಯರ ಬಸ್ಸು ಯಾವ್ ಸೀಟು ನೋಡು ರಷ್ಶು, ಬ್ರೇಕು ಬಿದ್ರೆ ದೊಡ್ಡ ಇಷ್ಯೂ ಹುಡುಗರಿಗೆ ಡಿಶ್ಯುಂ ಡಿಶ್ಯು....ಜಿಂತಾತ ಚಿತ ಚಿತ ಜಿಂತಾತತ" ಎಂದು ನಮ್ಮ ಕಿಚ್ಚ ಸುದೀಪ್ 'ವೀರಮದಕರಿ' ಚಿತ್ರದಲ್ಲಿ ಚಿತ್ತೆಬ್ಬಿಸಿದ್ದರು. ಈಗ್ಯಾಗೆ ಆ ವಿಷಯ ಅಂತೀರಾ...

  ಇದೇ ರೀತಿ ಜಿಂತಾತಾ ಚಿತಾ ಚಿತಾ ಮಾಡಲಿದ್ದಾರೆ ಬಾಲಿವುಡ್ ತಾರೆ ಕರೀನಾ ಕಪೂರ್. ಬಾಲಿವುಡ್‌ನಲ್ಲಿ 'ವೀರಮದಕರಿ' (ತೆಲುಗು ವಿಕ್ರಮಾರ್ಕುಡು ರೀಮೇಕ್) ಚಿತ್ರ 'ರೌಡಿ ರಾಥೋರ್' ಎಂದು ರೀಮೇಕ್ ಆಗುತ್ತಿದೆ. ಹಿಂದಿ ಚಿತ್ರದಲ್ಲೂ ಜಿಂತಾತಾ ಚಿತಾ ಚಿತಾ ಹಾಡನ್ನು ಬಳಸಿಕೊಳ್ಳುತ್ತಿದ್ದಾರೆ.ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದು ಪ್ರಭುದೇವ ಆಕ್ಷನ್ ಕಟ್ ಹೇಳಿದ್ದಾರೆ.

  ಜಿಂತಾತಾ ಚಿತಾ ಚಿತಾ ಹಾಡಿಗೆ ಅಕ್ಕಿ ಜೊತೆ ಕರೀನಾ ಕಪೂರ್ ಹೆಜ್ಜೆ ಹಾಕಲಿದ್ದಾರೆ. "ಈ ಚಿತ್ರಕ್ಕೆ ನಿರ್ಮಾಪಕರಾದ ಸಂಜಯ್ ಲೀಲಾ ಬನ್ಸಾಲಿ, ಸಬೀನಾ ಖಾನ್ ಅವರೊಂದಿಗೆ ನನಗೆ ಆತ್ಮೀಯತೆ ಇದೆ. ಈ ಆತ್ಮೀಯತೆಯ ಕಾರಣ ಚಿತ್ರದ ಹಾಡೊಂದರಲ್ಲಿ ಅಭಿನಯಿಸಲು ಒಪ್ಪಿದ್ದೇನೆ " ಎಂದಿದ್ದಾರೆ ಕರೀನಾ. ಅಲ್ಲಿಗೆ ಜಿಂತಾತ ಚಿತಾ ಚಿತಾ ಗ್ಯಾರಂಟಿ ಅಂದಂಗಾಯ್ತು. (ಒನ್‌ಇಂಡಿಯಾ ಕನ್ನಡ)

  English summary
  Actress Kareena Kapoor will be appearing in a song in bollywood film Rowdy Rathore with Akshay Kumar. The song is like in Sudeep Kannada movie Veeramadakari's "Jintata chita chita Jintata..."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X