ತಾರೆ ಕತ್ರಿನಾ ಕೈಫ್ ಸ್ನಿಗ್ಧ ಸೌಂದರ್ಯ ವಿವಸ್ತ್ರ!
ಬಾಲಿವುಡ್ ತಾರೆ ಕತ್ರಿನಾ ಕೈಫ್ ಇದೇ ಮೊದಲ ಬಾರಿಗೆ ತೆರೆ ಮೇಲೆ ಬಟ್ಟೆ ಕಳಚಲು ಸನ್ನದ್ಧರಾಗಿದ್ದಾರೆ! ಈ ಅಸಾಧ್ಯವಾದ ಈ ಕೆಲಸವನ್ನು ಸಾಧ್ಯವಾಗಿಸಿದ ಶ್ರೇಯಸ್ಸು ಫರಾ ಖಾನ್ ಅವರಿಗೆ ಸಲ್ಲುತ್ತದೆ. 'ತೀಸ್ ಮಾರ್ ಖಾನ್' ಚಿತ್ರದಲ್ಲಿ ಕತ್ರಿನಾ ಬೆತ್ತಲಾಗಲಿದ್ದಾರೆ. ಚಿತ್ರದಲ್ಲಿ ಬಟ್ಟೆ ಕಳಚಲಿರುವ ಕತ್ರಿನಾ ಪಾರದರ್ಶಕ ಉಡುಪಿನಲ್ಲಿ ತಮ್ಮ ಸೌಂದರ್ಯವನ್ನು ಅನಾವರಣಗೊಳಿಸಲಿದ್ದಾರಂತೆ.
'ತೀಸ್ ಮಾರ್ ಖಾನ್' ಚಿತ್ರದಲ್ಲಿ ಭೋಜ್ ಪುರಿ ಶೈಲಿಯ ಹಾಡೊಂದನ್ನು ಪರಿಚಯಿಸುತ್ತಿದ್ದೇವೆ. ಈ ಹಾಡಿನಲ್ಲಿ ಕತ್ರಿನಾ ಹಿಂದೆಂದಿಗಿಂತಲೂ ಹೆಚ್ಚು ಹಾಟ್ ಮತ್ತು ಸ್ಪೈಸಿಯಾಗಿ ಕಾಣಿಸಲಿದ್ದಾರೆ. ಈ ಹಾಡಿನ ಮಹತ್ವವನ್ನು ತಿಳಿಸಿದ ಮೇಲೆ ಕತ್ರಿನಾ ಮರು ಮಾತನಾಡದೆ ಒಪ್ಪಿಕೊಂಡರು ಎನ್ನುತ್ತಾರೆ ಫರಾ ಖಾನ್.
ಈ ಸ್ಪೈಸಿ ಹಾಡನ್ನು ಒಟ್ಟು ಐದು ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಆಕೆಗೆ ಎಲ್ಲೂ ತೂಕ ಕಡಿಮೆ ಮಾಡಿಕೊಳ್ಳಲು ನಾನು ಸೂಚಿಸಲಿಲ್ಲ. ಹಾಗಿದ್ದೂ ಈ ಹಾಡಿನಲ್ಲಿ ಆಕೆ ಸ್ನಿಗ್ಧ ಸೌಂದರ್ಯ ಅದ್ಭುತವಾಗಿ ಮೂಡಿಬಂದಿದೆ ಎಂದು ಫರಾ ಖಾನ್ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಕತ್ರಿನಾರ ವೃತ್ತಿ ಜೀವನದಲ್ಲಿ ಈ ಹಾಡು ಅಚ್ಚಳಿಯದೆ ಉಳಿಯಲಿದೆ ಎಂಬ ಮಾತುಗಳು ಕೇಳಿಬಂದಿವೆ.


Click it and Unblock the Notifications











