ನನ್ನ ತಾಯಿ ಕನ್ನಡ ಮಾತನಾಡುತ್ತಾರೆ: ಶಾರುಖ್ ಖಾನ್

By Rajendra

ಬಾಲಿವುಡ್ ನಟ ಶಾರುಖ್ ಖಾನ್ ಮೂಲತಃ ಎಲ್ಲಿನವರು? ಬಹುಶಃ ಅವರು ಎಲ್ಲೋ ಉತ್ತರ ಭಾರತದ ಕಡೆಯವರಿರಬಹುದು ಎಂದುಕೊಳ್ಳುವುದು ಸಹಜ. ಆದರೆ ಅವರು ಕರ್ನಾಟಕದ, ಅದರಲ್ಲೂ ಬೆಂಗಳೂರು ಮೂಲದವರು ಎಂಬ ವಿಷಯ ಬಹಳಷ್ಟು ಮಂದಿಗೆ ತಿಳಿಯದ ಸಂಗತಿ.

ತಮ್ಮ ನೆನಪುಗಳನ್ನು ಶಾರುಖ್ ಇತ್ತೀಚೆಗೆ ಅಭಿಮಾನಿಗಳೊಂದಿಗೆ ಬೆಂಗಳೂರಿನಲ್ಲಿ ಹಂಚಿಕೊಂಡರು. ಅವರು ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ರಾ.ಒನ್' ಚಿತ್ರದ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದರು. ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಾವು ಬೆಂಗಳೂರು ಮೂಲದವರು ಎಂದು ಹೇಳಿ ಚಕಿತಗೊಳಿಸಿದರು.

"ನನ್ನ ಬಾಲ್ಯವೆಲ್ಲಾ ಕಳೆದದ್ದು ಬೆಂಗಳೂರಿನಲ್ಲೆ. ಪ್ಯಾಲೇಸ್ ರಸ್ತೆ, ಜಯಮಹಲ್ ಬಡಾವಣೆ, ನಂದಿದುರ್ಗ ರಸ್ತೆ ನನ್ನ ಜೀವನದ ಅವಿಭಾಜ್ಯ ಅಂಗವೇ ಆಗಿತ್ತು. ನನ್ನ ಅಜ್ಜ ಇಂಜಿನಿಯರ್ ಆಗಿ ಇಲ್ಲೇ ಕೆಲಸ ಮಾಡುತ್ತಿದ್ದರು. ನಮ್ಮ ತಾಯಿ ಕನ್ನಡ ಮಾತನಾಡುತ್ತಾರೆ." ಎಂದು ಶಾರುಖ್ ತಮ್ಮ ನೆನಪುಗಳನ್ನು ಬಿಚ್ಚಿಟ್ಟಾರೆ.

"ಬಾಲ್ಯದಿಂದಲೂ ನಾನು ನಟನಾಗಬೇಕೆಂಬ ಕನಸು ಕಂಡಿದ್ದೆ. ಇದಕ್ಕಾಗಿ ಫೋಟೋ ತೆಗೆಸಿದ್ದು ಬೆಂಗಳೂರಿನಲ್ಲೇ. ಅದನ್ನೇ ಮುಂಬೈಗೆ ಕಳುಹಿಸಿದ್ದೆ. ಆ ಫೋಟೋ ಇನ್ನೂ ನನ್ನ ಆಲ್ಬಂನಲ್ಲಿದೆ." ಎಂದು ಬನ್ನೇರುಘಟ್ಟ ರಸ್ತೆಯ ರಾಯಲ್ ಮೀನಾಕ್ಷಿ ಮಾಲ್‌ನಲ್ಲಿ ಕಿಕ್ಕಿರಿದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರೆ ಅಭಿಮಾನಿಗಳು ಚಪ್ಪಾಳೆ,ಶಿಳ್ಳೆಗಳ ಮೂಲಕ ಸ್ವಾಗತಿಸಿದರು. (ಏಜೆನ್ಸೀಸ್)

More from Filmibeat

English summary
Bollywood actor Shahrukh Khan visits Bangalore on Sunday to promote his upcoming movie Ra.One. He remembered his childhood days. He spent in Bangalore Nandidurga Road, Jayamahal Extension, Palace Road. my mother spoke Kannada said the actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X