For Quick Alerts
ALLOW NOTIFICATIONS  
For Daily Alerts

ನಾಟ್ ಎ ಲವ್ ಸ್ಟೋರಿ ಕಥೆ ನಕಲು, ಕೇಸ್ ದಾಖಲು

By Mahesh
|

ನೀರಜ್ ಗ್ರೋವರ್ ಹತ್ಯಾಕಾಂಡ, ಮೈಸೂರು ಮೂಲದ ನಟಿ ಮಾರಿಯಾ ಮೋನಿಕಾ ಸುಸೈರಾಜ್ ಕೊಲೆ ಸಂಚು ಕುರಿತ ಚಿತ್ರಕಥೆಯುಳ್ಳ ರಾಮ್ ಗೋಪಾಲ್ ವರ್ಮಾ ಅವರ ಚಿತ್ರಕ್ಕೆ ಮತ್ತೊಂದು ಆತಂಕ ಎದುರಾಗಿದೆ.

ಮುಂಬೈನ ಸಿವಿಲ್ ಕೋರ್ಟ್ ನಲ್ಲಿ ಶರೀಫ್ ಝುಬೇರಿ ಎಂಬ ನಿರ್ಮಾಪಕ, ಈ ಚಿತ್ರದ ಕಥೆಯನ್ನು ನಕಲು ಮಾಡಲಾಗಿದೆ. ಲವ್ ಅಫೇರ್ ಎಂಬ ಹೆಸರಿನಲ್ಲಿ ನಾನು ನಿರ್ಮಿಸುತ್ತಿರುವ ಚಿತ್ರದ ಕಥೆಯ ಐಡಿಯಾ ಕದ್ದಿರುವ ರಾಮ್ ಗೋಪಾಲ್ ವರ್ಮಾ ದಿಢೀರ್ ಎಂದು ನಾಟ್ ಎ ಲವ್ ಸ್ಟೋರಿ ಚಿತ್ರ ನಿರ್ಮಿಸಿ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ನನಗೆ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ನ್ಯಾಯಾಲಯದ ಮೊರೆ ಹೊಕ್ಕಿದ್ದಾರೆ.

ನನ್ನ ಚಿತ್ರಕಥೆಯನ್ನು ಚಲನಚಿತ್ರ ಕಥೆಗಾರರ ಸಂಘದಲ್ಲಿ ನೋಂದಾಯಿಸಿದ್ದೇನೆ. ಲವ್ ಅಫೇರ್ ಚಿತ್ರದ ಚಿತ್ರೀಕರಣ ಶೇ.70ರಷ್ಟು ಮುಗಿದಿದ್ದು, ಮುಂದಿನ 45 ದಿನಗಳಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ.

ಸುಮಾರು 70 ಲಕ್ಷ ರು ಬಂಡವಾಳ ಹೂಡಿ ಚಿತ್ರ ನಿರ್ಮಿಸಲಾಗಿದೆ. ಈಗ ವರ್ಮಾ ಅವರ ಚಿತ್ರ ಬಿಡುಗಡೆಯಾದರೆ ನನ್ನ ಚಿತ್ರದ ಗತಿ ಅಷ್ಟೇ. ನನ್ನ ಕಥೆಯನ್ನು ವರ್ಮಾ ಕದ್ದಿರುವುದರಿಂದ ನನಗಾದ ನಷ್ಟವನ್ನು ಭರಿಸಬೇಕು ಎಂದು ನಿರ್ಮಾಪಕ ಝುಬೇರಿ ಮನವಿ ಮಾಡಿದ್ದಾರೆ.

ವರ್ಮಾ ಅವರ ನಾಟ್ ಎ ಲವ್ ಸ್ಟೋರಿ ಚಿತ್ರ ಆ.19ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಈಗಾಗಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಂಡಿದೆ. ನಿರ್ಮಾಪಕ ಝುಬೇರಿ ಆರೋಪಗಳನ್ನು ಅಲ್ಲಗೆಳೆದಿರುವ ವರ್ಮಾ, ಚಿತ್ರ ಬಿಡುಗಡೆ ಸಿದ್ಧತೆ ನಡೆಸಿದ್ದಾರೆ.

English summary
Producer Shareef Zuberi yesterday filed a suit in a City Civil Court of Mumbai, seeking a direction to restrain film maker Ram Gopal Verma from releasing his forthcoming film Not a Love Story claiming that movie is copy of his under-production film based on the similar plot.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more