ಅಮೀರ್, ಸಲ್ಮಾನ್ ತಮಾಷೆ ಮಾಡಿ ನಕ್ಕ ರಣವೀರ್
ರಣವೀರ್ ಗ್ರಹಚಾರ ನೆಟ್ಟಗಿದ್ದಂಗಿಲ್ಲ. ಈಗ ತಾನೇ ಬಾಲಿವಡ್ ನಲ್ಲಿ ಯಶಸ್ಸಿನ ಬಾಗಿಲು ತಟ್ಟುತ್ತಿರುವ ನಟ. ಆದ್ರೆ ಯಾಕೋ ತಲೆ ಕತ್ತಿನ ಮೇಲೆ ನಿಲ್ಲುತ್ತಿಲ್ಲ. ಹಿರಿಯ 'ಖಾನ್' ಗಳಿಬ್ಬರನ್ನು ಕುರಿತು ತಮಾಷೆ ಮಾಡಿ ನಗುತ್ತಿದ್ದಾನೆ. ಅಮೀರ್ ಹಾಗೂ ಸಲ್ಮಾನ್ ಬಗ್ಗೆ ಸಹನಟಿ ಸೋನಾಕ್ಷಿಯಲ್ಲಿ ಹೇಳಿಕೊಂಡು ನಗುತ್ತಿದ್ದಾನಂತೆ. ಶಾರುಖ್ ಯಾಕೆ ಬಿಟ್ನೋ!
ನಾನು "ಇನ್ಮುಂದೆ ಅಮೀರ್ ಖಾನ್ ತರಹ ಪ್ಯಾಂಟ್ ಹಾಕ್ಕೋತ್ತೀನಿ. ಜೊತೆಗೆ ಅದು ಹೇಗೆಂದು ಮಿಮಿಕ್ರಿ ಮಾಡಿ ತೋರಿಸುತ್ತಾನಂತೆ. ಸಲ್ಲು ಮಿಯಾ ದಬಾಂಗ್ ನಲ್ಲಿ ಹೇಳಿದ್ದ ಡೈಲಾಗ್ ಹೇಳಿ ಅವನನ್ನೇ ಅನುಕರಿಸಿ ನಗುತ್ತಾನಂತೆ. ಇದೆಲ್ಲಾ ಸುದ್ದಿಯಾಗಿ ಖಾನ್ ಗಳಿಗೆನಾದರೂ ಗೊತ್ತಾದರೆ ಗತಿಯೇನು ಎಂದು ಬಾಲಿವುಡ್ ಬೆಚ್ಚಿದೆ.
ಅಲ್ಲ, ಹೋಗಿ ಹೋಗಿ ಸಲ್ಲು ಸುದ್ದಿಗೆ ಯಾಕೆ ರಣವೀರ್ ಹೋಗಿದ್ದು? ಅಮೀರ್ ಖಾನ್ ಬಿಡಿ, ಅವರು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಮೂರ್ಖರ ಕಂಡರೆ ಮಾರುದೂರದಲ್ಲೇ ಅವರ ಮಾತು. ಆದರೆ ಸಲ್ಲು ಹಾಗಲ್ಲವಲ್ಲ. 'ನೋಡಿದರೇ ನೆಟ್ಟಗಿರಲ್ಲ' ಅನ್ನೋ ಪೈಕಿ. ಇನ್ನು ತಮಾಷೆ ಮಾಡಿದರೆ ತಪ್ಪಿದ್ದಲ್ಲ ಒದೆ. ಯಾವುದಕ್ಕೂ ಹುಶಾರ್ ರಣವೀರ್...(ಏಜೆನ್ಸೀಸ್)


Click it and Unblock the Notifications











