Just In
Don't Miss!
- News
ಭಾರತದ ಗಡಿಯಲ್ಲಿ ಚೀನಾ ಹಳ್ಳಿ: ಇದು ಬಾಹ್ಯಕಾಶದ ಚಿತ್ರ ತೆರೆದಿಟ್ಟ ಸತ್ಯ!
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Sports
ಐಪಿಎಲ್ ಆಟಗಾರರ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಕ್ಕಿ ಮಗನ ಪೃಷ್ಠ ಚಿವುಟಿದ ಸೆಕ್ಯುರಿಟಿಗೆ ಗೇಟ್ ಪಾಸ್
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ತನ್ನ ಮಗ ಆರವ್ ಎಂದರೆ ಎಲ್ಲಿಲ್ಲದ ಅಕ್ಕರೆ. ತನ್ನ ಮಗನಿಗೆ ಒಂಚೂರು ಹೆಚ್ಚು ಕಡಿಮೆಯಾದರೂ ಅಕ್ಕಿ ಉಗ್ರ ಪ್ರತಾಪಿಯಾಗಿ ಬಿಡುತ್ತಾರೆ. ಅಂತಹದಲ್ಲಿ ಅಕ್ಕಿ ಮನೆಯ ಸೆಕ್ಯುರಿಟಿಗಾರ್ಡ್ ಯಾರೂ ಇಲ್ಲದ ಸಮಯ ನೋಡಿ ಆರವ್ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎನ್ನಲಾಗಿದೆ.
ಮಗನನ್ನು ಸೆಕ್ಯುರಿಟಿ ಜೊತೆ ಬಿಟ್ಟು ಅಕ್ಕಿ ಮತ್ತು ಆತನ ಪತ್ನಿ ಟ್ವಿಂಕಲ್ ಖನ್ನಾ ಮುಂಬೈನ ಜುಹು ಪ್ರದೇಶದಲ್ಲಿರುವ ಗೆಳೆಯನ ಮನೆಗೆ ಹೋಗಿದ್ದರು. ಅವರು ಹಿಂತಿರುಗಿದ ಬಳಿಕ ಮಗನ ಪೃಷ್ಠಕ್ಕೆ ಚಿವುಟಿ ಗಾಯಗೊಳಿಸಿರುವ ಸಂಗತಿ ಗಮನಕ್ಕೆ ಬಂದಿದೆ. ಕೆಂಡಾಮಂಡಲವಾದಅಕ್ಕಿ, ಸೆಕ್ಯುರಿಟಿಗಾರ್ಡ್‌ನನ್ನು ಕರೆದು ಆತನ ಕೆನ್ನೆಗೆ ನಾಲ್ಕು ಬಿಗಿದಿದ್ದಾರೆ. ಸೆಕ್ಯುರಿಟಿಗಾರ್ಡ್‌ದೇ ಈ ಕೆಲಸ ಎಂಬುದು ಅಕ್ಕಿಯ ಆರೋಪ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸೆಕ್ಯುರಿಟಿಗಾರ್ಡ್, ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದಿದ್ದಾನೆ. ಮೀಟರ್ ರೂಮಿಗೆ ಆರವ್ ನುಗ್ಗಲು ಹೊರಟಿದ್ದ. ಅವನನ್ನು ನಾನು ತಡೆದೆ ಅಷ್ಟೆ ಎಂದಿದ್ದಾನೆ. ಅಕ್ಕಿಯ ಆಪ್ತ ಕಾರ್ಯದರ್ಶಿ ಕೂಡಲೆ ಸೆಕ್ಯುರಿಟಿ ಗಾರ್ಡ್‌ನನ್ನು ಕರೆದು ಕೆಲಸದಿಂದ ವಜಾಗೊಳಿಸಿದ್ದಾನೆ.
ಸೆಕ್ಯುರಿಟಿಯನ್ನು ನೇಮಿಸಿದ್ದ ಏಜೆನ್ಸಿ ಕೂಡ ಇದರಲ್ಲಿ ಆತನದೇನು ತಪ್ಪಿಲ್ಲ. ಆತನ ಕರ್ತವ್ಯ ಆತ ನಿರ್ವಹಿಸಿದ್ದಾಬೆ ಎಂದು ವಾದಿಸಿದೆ.ಆದರೆ ಅಕ್ಕಿ ಮಾತ್ರ ಇವರ ಮಾತುಗಳನ್ನು ಕೇಳಲು ಸುತಾರಾಂ ಸಿದ್ಧನಿಲ್ಲ. ಕೆಲಸ ಕಳೆದುಕೊಂಡಿರುವ ಸೆಕ್ಯುರಿಟಿಗಾರ್ಡ್ ಸದ್ಯಕ್ಕೆ ಭೇಲ್‌ಪುರಿ ಮಾರುತ್ತಿದ್ದಾನೆ ಎನ್ನಲಾಗಿದೆ. [ಟ್ವಿಂಕಲ್ ಖನ್ನಾ]