For Quick Alerts
  ALLOW NOTIFICATIONS  
  For Daily Alerts

  ಶಾರುಖ್-ಪ್ರಿಯಾಂಕಾ ಲವ್ ಬ್ರೇಕ್ ಕಾಲ ಸನ್ನಿಹಿತ

  |

  ಪ್ರಿಯಾಂಕಾ ಚೋಪ್ರಾ ಹಾಗೂ ಶಾರುಖ್ ಖಾನ್ ಯೋಚಿಸಬೇಕಾದ ಕಾಲ ಬಂದಿದೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಾಗೂ ನಟಿ ಪ್ರಿಯಾಂಕಾ ಹೊಂದಿರುವ (ಅನೈತಿಕ?) ಅತಿಯಾದ ಸಂಬಂಧ, ಈಗ ಇಬ್ಬರ ಪಾಲಿಗೂ ಮುಳುವಾಗಿದೆ. ಇತ್ತೀಚಿಗೆ ಬರ್ಲಿನ್ ನಲ್ಲಿ ನಡೆದ 62ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶಾರುಖ್, ಪತ್ನಿ ಗೌರಿಯೊಂದಿಗೆ ಓಡಾಡಿಕೊಂಡಿದ್ದ, ಪ್ರಿಯಾಂಕ ಕಡೆ ಕಣ್ಣೆತ್ತಿಯೂ ನೋಡಲಿಲ್ಲ.

  ಇಬ್ಬರಿಗೂ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಇದು ಕಪ್ಪುಚುಕ್ಕಿಯಾಗಿ ಪರಿಣಮಿಸಿದೆ. ಅವರಿಬ್ಬರ ಗೆಳೆತನ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದೆ ಎನಿಸುವಂತಿದೆ. ಕಾರಣ ಶಾರುಖ್ ಇತ್ತೀಚಿಗೆ ಪ್ರಿಯಾಂಕಾರನ್ನು ಬಹಳಷ್ಟು ದೂರವೇ ಇಟ್ಟಿದ್ದಾರೆ. ಶಾರುಖ್ ಮಾತ್ರವಲ್ಲ, ಪತ್ನಿ ಗೌರಿ ಖಾನ್ ಕೂಡ. ಜೊತೆಯಲ್ಲಿ ಹೃತಿಕ್ ಪತ್ನಿ ಸೂಸನ್, ಬಾಲಿವುಡ್ ತಾರೆಗಳ ಪತ್ನಿಯರಾದ ಟ್ವಿಂಕಲ್, ಮಹೀಪ್ ಕೂಡ ಪ್ರಿಯಾಂಕಾರಿಂದ ದೂರ ಸರಿದಿದ್ದಾರೆ.

  ಮೊನ್ನೆ ನಡೆದ ಅಗ್ನಿಪಥ್ ಚಿತ್ರದ ಸಂತೋಷಕೂಟದಲ್ಲಿ ಕೂಡ ಹೃತಿಕ್ ಪತ್ನಿ ಸೂಸನ್, ಪ್ರಿಯಾಂಕಾರನ್ನು ಮಾತನಾಡಿಸಿಲ್ಲ. ಅಂದರೆ ಎಲ್ಲರೂ ಆಕೆಯನ್ನು 'ಮನೆಹಾಳಿ' ಎಂಬಂತೆ ನೋಡುತ್ತಿದ್ದಾರೆ ಎಂಬಂತಾಗಿದೆ. ಶಾರುಖ್ ಕುಟುಂಬದಲ್ಲಿ ಎದ್ದ ಬಿರುಗಾಳಿ ತಣ್ಣಗಾಗುತ್ತಿದೆ. ಒಟ್ಟಿನಲ್ಲಿ ಶಾರುಖ್-ಪ್ರಿಯಾಂಕಾ ಜೋಡಿಯ ಸರಸಸಲ್ಲಾಪಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಇಬ್ಬರೂ ಯೋಚಿಸಿ ಹೆಜ್ಜೆಯಿಡಬೇಕಾದ ಕಾಲ ಬಂದಿದೆ. (ಏಜೆನ್ಸೀಸ್)

  English summary
  Shahrukh Khan, Priyanka Chopra to end their alleged love affair as the couple are bearing the cost both in personal and professional life. Priyanka is ignored by all in Bollywood and Shahrukh shares a troubled relationship with wife Gauri Khan.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X