ಶಾರುಖ್ ಮಾವನವರಿಗೆ ತೀವ್ರ ಹೃದಯಾಘಾತ
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಕುಟುಂಬಕ್ಕೆ ಸುದ್ದಿಯೊಂದು ಬರಸಿಡಿಲಿನಂತೆ ಎರಗಿದೆ. ಶಾರುಖ್ ಅವರ ಪತ್ನಿ ಗೌರಿ ಖಾನ್ ಅವರ ತಂದೆ ಆರ್ ಪಿ ಚಿಬ್ಬ ಅವರಿಗೆ ಹೃದಯಾಘಾತವಾಗಿದ್ದು ಅವರನ್ನು ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಶಾರುಖ್ ಮತ್ತು ಗೌರಿ ದೆಹಲಿಗೆ ದೌಡಾಯಿಸಿದ್ದಾರೆ.
ಶಾರುಖ್ ಖಾನ್ ಕುಟುಂಬ ಮೂಲಗಳ ಪ್ರಕಾರ, ಶಾರುಖ್ ಅವರ ಮಾವನವರಿಗೆ ತೀವ್ರ ಹೃದಯಾಘಾತವಾಗಿದ್ದು ಅವರನ್ನು ಚಿಕಿತ್ಸೆಗಾಗಿ ದೆಹಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಶಾರುಖ್ ಖಾನ್ ತಮ್ಮ ಮಾವನವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.ಬರಸಿಡಿಲಿನಂತೆ ಎರಗಿದ ಈ ಸುದ್ದಿಯಿಂದ ಶಾರುಖ್ ಮತ್ತು ಗೌರಿ ಇಬ್ಬರೂ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ದೆಹಲಿಯ ಆಸ್ಪತ್ರೆಗೆ ಶಾರುಖ್ ದಂಪತಿಗಳು ಭೇಟಿ ನೀಡಿ ಚಿಬ್ಬ ಅವರ ಆರೋಗ್ಯವನ್ನು ಪರಿಶೀಲಿಸುತ್ತಿರುವುದಾಗಿ ತಿಳಿದುಬಂದಿದೆ.
ಶಾರುಖ್ ಖಾನ್ ಗೌರಿ ಖಾನ್ ಬಾಲಿವುಡ್ ಹೃದಯಾಘಾತ ದೆಹಲಿ shahrukh khan gauri khan heart attack delhi sharukh khan father in law r p chhiba


Click it and Unblock the Notifications