54ನೇ ವಯಸ್ಸಿನಲ್ಲಿ ತನಗಿಂತ 17 ವರ್ಷ ಚಿಕ್ಕವಳ ಜೊತೆ ಮದ್ವೆಯಾದ ಖ್ಯಾತ ನಟ ; 2 ವರ್ಷದ ನಂತರ ಹೇಳಿದ ಸತ್ಯವೇನು?

ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಹೀಗೆ ಬೇರೂರಿದ ಪ್ರೀತಿ ಆ ನಂತರ ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಕೂಡ ಬರೆಯಬಹುದು. ಇನ್ನೂ.. ಎಲ್ಲರಿಗೆ ಗೊತ್ತಿರುವಂತೆ ಹೆಣ್ಣಿಗೆ 18 ಮತ್ತು ಗಂಡಿಗೆ 21 ಎನ್ನುವ ವಯಸ್ಸನ್ನು ನಮ್ಮ ಕಾನೂನು ನಿಗದಿ ಮಾಡಿದೆ.

ಆದರೆ .. ಈ ಹಿಂದೆ ನಮ್ಮಲ್ಲಿ ಸಾಮಾನ್ಯವಾಗಿ ಹೆಣ್ಣಿಗಿಂತ ವಯಸ್ಸಿನಲ್ಲಿ ದೊಡ್ಡವನಾದ ಹುಡುಗನ ಜೊತೆ ಮದುವೆ ಮಾಡಿಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.

17year-gap-2year-battle-inside-the-unconventional-love-story-of-bads-of-bollywoods-manish-chaudhari

ಬದಲಾದ ಈ ಕಾಲದಲ್ಲಿ ಗಂಡ-ಹೆಂಡತಿ ಸಮಾನ ವಯಸ್ಕರಾಗಿದ್ದರೆ ಅವರು ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ. ಅವರ ಅಭಿರುಚಿ ಮತ್ತು ಆಸಕ್ತಿ ಕೂಡ ಒಂದೇ ಥರ ಇರುತ್ತಾವೆ ಎನ್ನುವ ಮನೋಭಾವ ಹೆಚ್ಚಾಗಿದೆ. ಹೀಗಾಗಿ ಹೆಣ್ಣಿಗಿಂತ ಗಂಡು ಸೀನಿಯರ್ ಆಗಿದ್ದರೆ ದಾಂಪತ್ಯ ಚೆನ್ನಾಗಿರುವುದಿಲ್ಲ ಎನ್ನುವ ಧೋರಣೆಯ ತಂದೆ ತಾಯಿಗಳು ಹೆಚ್ಚಾಗುತ್ತಿದ್ದಾರೆ.

ಆದರೆ ಇದರ ನಡುವೆ ಬದುಕಿನ ಲವಲವಿಕೆಗೆ, ಪತಿ- ಪತ್ನಿ ನಡುವಿನ ಅನ್ಯೋನ್ಯತೆಗೆ, ಅವರ ನಡುವಿನ ಆತ್ಮೀಯತೆಗೆ ಯಾವ ಕೋನದಲ್ಲೂ ಕೂಡ ವಯಸ್ಸಿನ ಹಂಗಿಲ್ಲ. ಒಂದೊಳ್ಳೆ ಮನಸ್ಸು ಮತ್ತು ದಾಂಪತ್ಯದ ಕಲೆಯನ್ನು ಅರಿತಿರುವ ನೈಪುಣ್ಯತೆಯನ್ನು ಹೊಂದಿದ್ದರೆ ಇಬ್ಬರ ನಡುವೆ ವಯಸ್ಸಿನ ಅಂತರ ಎಷ್ಟೇ ಇದ್ದರೂ ಕೂಡ ಸುಖವಾಗಿ ಸಂಸಾರ ನಡೆಸಬಹುದು. ಬದುಕಿ ಬಾಳಬಹುದು ಎನ್ನುವ ವಾದವನ್ನು ಕೂಡ ಹಲವರು ಮಾಡುತ್ತಾರೆ. ಈ ವಾದಕ್ಕೆ ಪುಷ್ಠಿ ನೀಡುವಂತೆ ಸದ್ಯ 54ನೇ ವಯಸ್ಸಿನಲ್ಲಿ ತನಗಿಂತ 17 ವರ್ಷ ಚಿಕ್ಕವಳ ಜೊತೆ ಮನೀಶ್ ಚೌಧರಿ ಮದುವೆಯಾಗಿದ್ದಾರೆ.

ಹೌದು, ಮನೀಶ್ ಚೌಧರಿ.. ಬಾಲಿವುಡ್‌ನ ಖ್ಯಾತ ನಟ. ಕಳೆದ 22 ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳನ್ನು ಮಾಡಿರುವ ಮನೀಷ್ ಚೌಧರಿ ರಂಗಭೂಮಿ ನಟ ಕೂಡ ಹೌದು. ಚಿತ್ರರಂಗದಿಂದ ಚೂರು ಬಿಡುವು ಸಿಕ್ಕರೂ ಸಾಕು ಇವತ್ತು ಕೂಡ ಮನೀಷ್ ತಮ್ಮನ್ನು ತಾವು ನಾಟಕಗಳಲ್ಲಿ ತೋಡಗಿಸಿಕೊಳ್ಳುತ್ತಾರೆ.

''ಜನ್ನತ್ 2''.. ''ರಾಝ್ 3''.. ''ಬ್ಲಡ್ ಮನಿ''.. ''ಸನಮ್ ತೇರಿ ಕಸಮ್''.. ಹೀಗೆ ಹಲವು ಚಿತ್ರಗಳ ಮೂಲಕ ತಮ್ಮ ಅಭಿನಯದಿಂದ ಅನೇಕರ ಹೃದಯ ಗೆದ್ದ ಮನೀಶ್, ಶಾರುಖ್ ಖಾನ್ ಮಗ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ಚಿತ್ರ ''ದಿ ಬ್ಯಾಡ್ಸ್ ಆಫ್ ಬಾಲಿವುಡ್‌''ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಈ ಪಾತ್ರಕ್ಕೆ ಅಪಾರವಾದ ಜನಮನ್ನಣೆ ಕೂಡ ಸಿಕ್ಕಿದೆ.

17year-gap-2year-battle-inside-the-unconventional-love-story-of-bads-of-bollywoods-manish-chaudhari

ಇಂಥಾ ಮನೀಶ್ ತಮ್ಮ ಪತ್ನಿ ಶ್ರುತಿ ಅವರ ಜೊತೆ ಎರಡೂವರೆ ವರ್ಷಗಳ ಹಿಂದೆ ನಡೆದ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ. ''Hauterrfly''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮನೀಶ್, ರಂಗಭೂಮಿ ನನ್ನ ಮತ್ತು ಶ್ರುತಿ ನಡುವೆ ಸಂಬಂಧ ಬೆಸೆಯಿತು. ಮುಂಬೈನ ರಂಗಮಂದಿರದಲ್ಲಿ ಮೊದಲ ಬಾರಿ ಶ್ರುತಿಯನ್ನು ಭೇಟಿ ಮಾಡಿದಾಗ ನನ್ನಂತೆಯೇ ಆಲೋಚನೆ ಮಾಡುವ ವ್ಯಕ್ತಿ ನನಗೆ ಸಿಕ್ಕಿದ್ದಾರೆ ಎನ್ನುವ ಭಾವನೆ ನನಗೆ ಬಂತು ಎಂದು ಹೇಳಿದ್ದಾರೆ.

ನಾನು ಮೊದಲಿಂದನೇ ''ಐ ಲವ್ ಯೂ''ಎಂದು ಹೇಳುತ್ತಲೇ ಇದ್ದೇ. ಆದರೆ ಇವರು ಸ್ವಲ್ಪ ಸಮಯ ತೆಗೆದುಕೊಂಡರು ಎಂದು ಮನೀಶ್ ಹೇಳಿದ್ದಾರೆ. ಆಗ ಧ್ವನಿಗೂಡಿಸಿರುವ ಶ್ರುತಿ ನಮ್ಮ ನಡುವೆ ವಯಸ್ಸಿನ ಅಂತರ ಇದೆ ಎನ್ನುವುದು ನನಗೆ ಗೊತ್ತಿತ್ತು. 17 ವರ್ಷಗಳ ಅಂತರ ಇದೆ ಎಂದು ನನಗೆ ಗೊತ್ತಿರಲಿಲ್ಲ. ಹೀಗಾಗಿ ನಾನು ಮನೀಶ್ ಅವರಲ್ಲಿ ಅವರ ವಯಸ್ಸು ಮೊದಲು ಕೇಳಿದಾಗ ನನಗೆ ನಂಬಲು ಸಾಧ್ಯವಾಗಲೇ ಇಲ್ಲ ಎಂದು ಹೇಳಿದ್ದಾರೆ. ನಿಮ್ಮ ನಿಜವಾದ ವಯಸ್ಸು ಹೇಳ್ತಿದ್ದೀರಾ ..? ಹೇಗೆ..? ಎಂದು ನಾನು ಪ್ರಶ್ನೆ ಮಾಡಿದ್ದೇ ಎಂದಿದ್ದಾರೆ.

ನಮ್ಮ ನಡುವೆ ಇರುವ ಈ ವಯಸ್ಸಿನ ಅಂತರದಿಂದ ಶ್ರುತಿ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ ಎಂದು ಹೇಳಿರುವ ಮನೀಶ್, ನನ್ನ ಕುಟುಂಬದವನ್ನು ಒಪ್ಪಿಸಲು ನನಗೆ ಎರಡು ವರ್ಷ ಬೇಕಾಯ್ತು ಎಂದು ಹೇಳಿದ್ದಾರೆ. ನಾನು ಮದುವೆಯಾದರೆ ಮನೀಶ್ ಅವರನ್ನೇ ಮದುವೆಯಾಗುತ್ತೇನೆ ಇಲ್ಲದಿದ್ದರೆ ಯಾವತ್ತು ಮದುವೆಯಾಗುವುದಿಲ್ಲ ಎಂದು ನಾನು ಮನೆಯಲ್ಲಿ ಹೇಳಿದ್ದೇ ಎಂದು ಶ್ರುತಿ ನೆನಪು ಮಾಡಿಕೊಂಡಿದ್ದಾರೆ.

ಅಂದ್ಹಾಗೇ ಶ್ರುತಿ ಅವರನ್ನು ಮದುವೆಯಾಗುವ ಮುನ್ನ, ಮನೀಶ್ ಚೌಧರಿ ದಕ್ಷಿಣ ಆಫ್ರಿಕಾದಲ್ಲಿ ಪಿಆರ್ ಆಗಿ ಕೆಲಸ ಮಾಡುವ ಆದ್ರಿ ಹುಯ್ಸಮೆನ್ ಜೊತೆ ಪ್ರೀತಿಯ ಜಾಲದಲ್ಲಿ ಸಿಲುಕಿದ್ದರು. ಕೇಪ್ ಟೌನ್‌ನಲ್ಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೀತಿ ಮಾಡುತ್ತಿದ್ದರು. 2016ರಲ್ಲಿ ಆದ್ರಿ ಜೊತೆ ಮನೀಶ್ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದರು. ಆದರೆ ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಈ ಸಂಬಂಧ ಮುರಿದು ಬಿತ್ತು.

ಆದ್ರಿ ಜೊತೆ ಸಂಬಂಧ ಮುರಿದು ಬಿದ್ದ ನಂತರ ಹಲವು ವರ್ಷ ಏಕಾಂಗಿಯಾಗಿದ್ದ ಮನೀಶ್, 2023ರಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ಶ್ರುತಿ ಅವರ ಜೊತೆ ಮದುವೆಯಾದರು. ಮನೀಶ್ ಅವರಂತೆಯೇ ಶ್ರುತಿ ಕೂಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು ಇಬ್ಬರು ಸೇರಿ ''ಬಾದಲೋ ಕಾ ಶೆಹರ್'' ಸೇರಿ ಹಲವು ನಾಟಕಗಳನ್ನು ಮಾಡಿದ್ದಾರೆ.

More from Filmibeat

English summary
Actor Manish Chaudhari tied the knot at 54 with a bride 17 years younger! Read the inspiring love story of the Freddy Sodawallah star and his wife, Shruti Mishra.
Read more about: marriage love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X