For Quick Alerts
  ALLOW NOTIFICATIONS  
  For Daily Alerts

  ಮಾಜಿ ಬಾಯ್‌ಫ್ರೆಂಡ್‌ನನ್ನು ಅಪ್ಪಿ ಮುದ್ದಾಡಿದ ಕತ್ರಿನಾ!

  By Rajendra
  |

  ಇದು ಅಪ್ಪಿ ತಪ್ಪಿ ಮುದ್ದಾಡಿದ ಪ್ರಸಂಗವಲ್ಲ. ಅಪ್ಪಿ ತಬ್ಬಿ ಮುದ್ದಾಡಿದಘಟನೆ. ಬಳಹ ದಿನಗಳ ಬಳಿಕ ಹಳೆಯ ಲವಿ ಡವಿ ಜೋಡಿ ಬಿಗಿದಪ್ಪಿದ ರೋಚಕ ಪ್ರಸಂಗವಿದು. ಬಾಲಿವುಡ್‌ನ ಅಪ್ಸರೆ ಕತ್ರಿನಾ ಕೈಫ್ ತನ್ನ ಮಾಜಿ ಬಾಯ್‌‍ಫ್ರೆಂಡ್‌ನನ್ನು ತಬ್ಬಿ ಬೀಳ್ಕೊಟ್ಟಿದ್ದಾರೆ. ಆ ಬಾಯ್‌ಫ್ರೆಂಡ್ ಇನ್ಯಾರು ಅಲ್ಲ, ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್!

  ಈ ಘಟನೆ ನಡೆದದ್ದು "Enterainment Ke liye Kuch Bhi Karega" ಸೆಟ್ಸ್‌ನಲ್ಲಿ. ಅಲ್ಲೆ ಇದ್ದ ಫರಾ ಖಾನ್ ಮತ್ತು ಅನು ಮಲಿಕ್ ಅವರಿಗೆ ವಿಷ್ ಮಾಡಿದ ಕತ್ರಿನಾ ಬಳಿಕ ಸಲ್ಲುನನ್ನು ಕಂಡು ಸೀದಾ ಅವನ ಬಳಿಗೆ ಹೋಗಿ ಅಪ್ಪಿಕೊಂಡು ಮುದ್ದಾಡಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ನಡುವೆ ಇನ್ನೂ ಪ್ರೇಮಭಗ್ನವಾಗಿಲ್ಲ ಎಂಬುದು ಸಾಬೀತಾಗಿದೆ.

  ವೈಯಕ್ತಿಕವಾಗಿ ಇವರಿಬ್ಬರೂ ನಾನೊಂದು ತೀರಾ ನೀನೊಂದು ತೀರ ಎಂಬಂತಿದ್ದರೂ, ವೃತ್ತಿ ವಿಷಯದಲ್ಲಿ ತುಂಬಾ ಪ್ರೊಫೆಷನಲ್ ಆಗಿ ಕಾಣುತ್ತಾರೆ. ಚಿತ್ರೀಕರಣದಲ್ಲೋ ಇನ್ಯಾವುದೋ ಕಾರ್ಯಕ್ರಮದಲ್ಲೋ ಒಬ್ಬರನ್ನೊಬ್ಬರು ಭೇಟಿ ಆದಾಗ ಗುಡುಗು ಮಿಂಚು ಸಮೇತ ಪ್ರೇಮದ ಮಳೆಗರೆಯುತ್ತಾರೆ. (ಏಜೆನ್ಸೀಸ್)

  English summary
  Bollywood lovey-dovey couple, Salman Khan and Katrina Kaif shared pleasantries and greeted each other with a hug on the set of Entertainment Ke liye Kuch Bhi Karega. On seeing Sallu, the actress came forward and gave him a warm hug.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X