»   » ಐಶ್ವರ್ಯ ರೈಗರ್ಭವತಿಯಾಗದಿರಲು ಕಾರಣ?

ಐಶ್ವರ್ಯ ರೈಗರ್ಭವತಿಯಾಗದಿರಲು ಕಾರಣ?

Posted By:
Subscribe to Filmibeat Kannada

ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಒಂದಾದ ನಂತರ ಒಂದು ವಿವಾದಗಳಲ್ಲಿ ಸಿಲುಕುತ್ತಲೆ ಇದ್ದಾರೆ. ಮುಖ್ಯವಾಗಿ ಆಕೆ ತಾಯಿಯಾಗುವ ಬಗ್ಗೆ ಬಾಲಿವುಡ್ ವಲಯದಲ್ಲಿ ಇಲ್ಲಸಲ್ಲದ ಸುದ್ದಿಗಳು ವರದಿಯಾಗುತ್ತಲೇ ಇವೆ. ಇದೀಗ ಮತ್ತೆ ಆಕೆ ತಾಯ್ತನದ ಕ್ಯಾತೆ ಶುರುವಾಗಿದೆ.

ಮೊಮ್ಮಗನನ್ನು ನೋಡಬೇಕೆಂದು ಬಿಗ್ ಬಿ ಕನವರಿಸುತ್ತಿದ್ದಾರೆ. ಶೀಘ್ರದಲ್ಲೇ ಮುದ್ದಾದ ಮಗುವೊಂದನ್ನು ಮಾವ ಅಮಿತಾಬ್ ಕೈಗೆ ಕೊಡುವ ಭರವಸೆಯನ್ನು ಐಶ್ವರ್ಯ ರೈ ನೀಡಿದ್ದರು. ಆದರೆ ಸದ್ಯಕ್ಕೆ ಈ ಆಸೆ ಈಡೇರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಾರಣ ಐಶ್ವರ್ಯ ರೈ ಅವರು ಹೊಟ್ಟೆಯ ಕ್ಷಯರೋಗದಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಕಾಯಿಲೆ ವಾಸಿಯಾಗುವವರೆಗೂ ಆಕೆ ಗರ್ಭವತಿಯಾಗುವಂತಿಲ್ಲ ಎಂಬುದು ಸುದ್ದಿ.

ಈ ಸುದ್ದಿಗೆ ಪುಷ್ಠಿ ನೀಡುವಂತೆ ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಕ್ಷಯರೋಗದ ಬಗ್ಗೆ ಬರೆದುಕೊಂಡಿದ್ದಾರೆ. ಉತ್ತಮ ಆರೈಕೆ, ಪೌಷ್ಠಿಕ ಆಹಾರದ ಕೊರತೆ ಹಾಗೂ ಕ್ಷಯರೋಗಿಗಳ ಸಂಪರ್ಕದಿಂದ ಕ್ಷಯರೋಗ ಬರುತ್ತದೆ. ಪ್ರಪಂಚದ ನಾನಾ ಕಡೆ ಈ ಮಾರಿ ಇನ್ನೂ ಜನರನ್ನು ಭಯಪಡಿಸುತ್ತಿದೆ. ಬಡವ, ಬಲ್ಲಿದ ಎನ್ನದೆ ಎಲ್ಲರನ್ನೂ ಕಾಡುತ್ತಿದೆ. ಶುದ್ಧವಾದ ಗಾಳಿಯ ಕೊರತೆ ಸಹ ಕ್ಷಯಕ್ಕೆ ಕಾರಣವಾಗಬಹುದು ಎಂದು ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಇನ್ನೂ ಏನೇನೋ ಬರೆದುಕೊಂಡಿದ್ದಾರೆ.

ಅಮಿತಾಬ್ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಕ್ಕೂ ಐಶ್ವರ್ಯ ರೈಗೂ ಸಂಬಂಧ ಕಲ್ಪಿಸಿ ಕೆಲವರು ಕತೆ ಕಟ್ಟಿರಬಹುದು ಎಂಬ ಗುಮಾನಿಯೂ ಇದೆ. ಇಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎಂಬುದು ಗಾಸಿಪ್ ಸುದ್ದಿಗಳಿಗೆ ಅಪಥ್ಯ. ಆದರೆ ಐಶ್ವರ್ಯ ರೈಗೆ ಈಗಾಗಲೇ 37ರ ವಯಸ್ಸು ಮೀರುತ್ತಿದೆ. ಮಕ್ಕಳನ್ನು ಹೆರಲು ಇನ್ನು ತಡಮಾಡುವುದರಲ್ಲಿ ಅರ್ಥವಿಲ್ಲ ಎಂಬುದು ಕಠೋರ ಸತ್ಯ ಎನ್ನುತ್ತವೆ ಬಾಲಿವುಡ್ ಮೂಲಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada