ಅಮೀರ್ ಖಾನ್ ವಿದ್ಯಾರ್ಥಿಯಾಗಲು ಅನುರಾಗ್ ರೆಡಿ

ಪ್ರತಿಭಾವಂತ ನಿರ್ದೇಶಕ ಅನುರಾಗ್ ಕಶ್ಯಪ್ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ಅವರನ್ನು ಅಪಾದಮಸ್ತಕ ಹೊಗಳಿದ್ದಾರೆ. ಅಮೀರ್ ಖಾನ್ ಅವರ ಮಾರ್ಕೆಟಿಂಗ್ ಸ್ಕಿಲ್ಸ್ ಬಗ್ಗೆ ಮಾರುಹೋಗಿರುವ ಕಶ್ಯಪ್, ತನ್ನ ಸಿನಿಮಾವನ್ನು ಮಾರ್ಕೆಟಿಂಗ್ ಮಾಡಲು ಈ ಲಗಾನ್ ನಟನಿಗೆ ನೀಡಬೇಕೆಂದು ಯೋಚಸಿದ್ದೇನೆ ಎಂದಿದ್ದಾರೆ.

ಮುಂಬೈನ ಸಮಾರಂಭವೊಂದರಲ್ಲಿ ಈ ಬಗ್ಗೆ ಹೇಳಿರುವ ಅನುರಾಗ್ ಕಶ್ಯಪ್, "ನಾನು ಈವರೆಗೆ ಅಮೀರ್ ಖಾನ್ ರಷ್ಟು ಪಕ್ಕಾ ಮಾರ್ಕೆಟಿಂಗ್ ಮಾಡುವ ವ್ಯಕ್ತಿಗಳನ್ನು ನೋಡೇ ಇಲ್ಲ. ಅವರೇ ನಮ್ಮ ಸಿನಿಮಾವನ್ನು ಮಾರ್ಕೆಟ್ ಮಾಡಿದರೆ ನಾನು ನಿಜವಾದ ಅದೃಷ್ಟಶಾಲಿ. ಅದಾಗದಿದ್ದರೆ ಆತನ ಸಲಹೆಯ ಮೇರೆಗೆ ನಾನು ಮಾಡುವಂತಾದರೂ ನನಗೆ ಖುಷಿಯೇ" ಎಂದಿದ್ದಾರೆ.

ನೀವು ಅಮೀರ್ ಖಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ನಿರ್ಧರಿಸಿಲ್ಲವೇ ಎಂಬ ಪ್ರಶ್ನೆಗೆ "ಅದನ್ನು ನಾನೊಬ್ಬನೇ ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಆ ಸಮಯ ಬಂದರೆ ಖಂಡಿತವಾಗಿಯೂ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ" ಎಂದಿದ್ದಾರೆ. ಒಟ್ಟಿನಲ್ಲಿ ಅಮೀರ್ ಖಾನ್ ಅವರ ಸಾಕಷ್ಟು ಗುಣಗಳು ಬಹಳಷ್ಟು ಜನರಿಂದ ಪ್ರಶಂಸೆ ಪಡೆಯುತ್ತಿವೆ. (ಏಜೆನ್ಸೀಸ್)

More from Filmibeat

English summary
Ace director Anurag Kashyap is the latest one to admire Aamir Khan's profound marketing skills. The filmmaker of many critically-acclaimed films has said that he wish to employee the Lagaan actor for marketing his movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X