For Quick Alerts
  ALLOW NOTIFICATIONS  
  For Daily Alerts

  ತೆರೆಯ ಮೇಲೆ ನೋಡಿ ದೀಪಿಕಾ ರಿಯಲ್ ಲವ್ ಸ್ಟೋರಿ

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ರಿಯಲ್ ಲವ್ ಸ್ಟೋರಿ ತೆರೆಗೆ ಬರಲಿದೆ. ರಣಬೀರ್ ಕಪೂರ್ ಹಾಗೂ ದೀಪಿಕಾರದ್ದು ಎಂದು ನೀವು ಅಂದುಕೊಂಡಿರಬಹುದು. ಇದು ಅದಲ್ಲಾರೀ, ಇನ್ನೊಂದು. ದೀಪಿಕಾಗೆ ಒಂದೇ ಲವ್ ಸ್ಟೋರಿ ಇರಬೇಕೆಂದು ನಿಮಗ್ಯಾರು ಹೇಳಿದ್ದು? ಸಾಕಷ್ಟಿರಬಹುದು. ದೀಪಿಕಾರ ಮೊದಲ ಲವ್ ಕಹಾನಿಯನ್ನು ತೆರೆಗೆ ತರಲು ನಿರ್ದೇಶಕರೊಬ್ಬರು ಪ್ರಯತ್ನಿಸುತ್ತಿದ್ದಾರೆ.

  ಅಂದುಕೊಂಡಂತೆ ನಡೆದರೆ, ಬಾಲಿವುಡ್ ನಿರ್ದೇಶಕ ಪ್ರಶಾಂತ್ ಛಡ್ಡಾ, ದೀಪಿಕಾರ ಮೊದಲ ಪ್ರೇಮಕಥೆಯನ್ನು ತೆರೆಗೆ ತರುತ್ತಾರಂತೆ. ದೀಪಿಕಾ ಹಾಗೂ ಅವರ ಮೊದಲ ಬಾಯ್ ಫ್ರೆಂಡ್ ನಿಹಾರ ಪಾಂಡ್ಯ ಅವರ ಪ್ರೇಮಕಥೆಯನ್ನು ಆಧಾರವಾಗಿಟ್ಟುಕೊಂಡು ಪಾತ್ರಗಳಿಗೆ ಅವರದೇ ಹೆಸರನ್ನೂ ಇಟ್ಟು ಸಿನಿಮಾ ಮಾಡಲಿದ್ದಾರೆ. ಆದರೆ ಇದಕ್ಕೆ ದೀಪಿಕಾ ಹಾಗೂ ನಿಹಾರ್ ಅವರ ವಿರೋಧ ವ್ಯಕ್ತವಾದರೆ?

  ಈ ಕುರಿತು ಯೋಚಿಸಿರುವ ಪ್ರಶಾಂತ್ ಛಡ್ಡಾ, ದೀಪಿಕಾರ ಕಾರ್ಯಗಳನ್ನು ನಿರ್ವಹಿಸುವ ಮ್ಯಾನೇಜ್ ಮೆಂಟ್ ಕಂಪನಿಯ ಮುಖ್ಯಸ್ಥ ಅನಿರ್ಬಾನ್ ಬ್ಲಾಹ್ ಸಲಹೆ ಕೇಳಿದ್ದಾರೆ. ಅವರು "ಸಾಮಾನ್ಯವಾಗಿ ದೀಪಿಕಾ ಯಾವ ವಿಚಾರದಲ್ಲೂ ಮಧ್ಯ ಪ್ರವೇಶ ಮಾಡುವುದಿಲ್ಲ. ಆಕೆಯ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಚಿತ್ರಿಸಿದರೆ ಮಾತ್ರ ದೀಪಿಕಾ ಪ್ರತಿಕ್ರಿಯೆ ನೀಡುತ್ತಾರಷ್ಟೇ" ಎಂದಿದ್ದಾರಂತೆ.

  ಇಷ್ಟು ಗೊತ್ತಾಗಿದ್ದೇ ತಡ, ಪ್ರಶಾಂತ್ ದೀಪಿಕಾ ಲವ್ ಸ್ಟೋರಿಯ ಸಿನಿಮಾ ಕನಸನ್ನು ಕಾಣತೊಡಗಿದ್ದಾರೆ. ಪ್ರಶಾಂತ್, ದೀಪಿಕಾರ ಮೊದಲ ಪ್ರೇಮ್ ಕಹಾನಿಯನ್ನು ತೆರೆಯ ಮೇಲೆ ಹೇಳಲಿದ್ದಾರೆಂಬುದುದನ್ನು ಕೇಳಿ ಪ್ರೇಕ್ಷಕರು ಕನಸು ಕಾಣುವುದು ಖಾತ್ರಿ. ಹಾಗಾದರೆ ಸಿನಿಮಾ ಬರುವುದು ಯಾವಾಗ? ಅದಕ್ಕುತ್ತರ ಹೇಳಲಿದ್ದಾರೆ ಸದ್ಯದಲ್ಲೇ ಛಡ್ಡಾ. (ಏಜೆನ್ಸೀಸ್)

  English summary
  Bollywood director Prshanth Chadda is to direct Deepika Padukone's First Live Story very shortly. 
 
  Saturday, February 18, 2012, 16:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X