ಕಾಕ್‌ಟೈಲ್‌ನಲ್ಲಿ ಒಂದಾದ ಸೈಫ್ ಮತ್ತು ದೀಪಿಕಾ ಪಡುಕೋಣೆ

By Rajendra

ಇದು ಸೈಫ್ ಆಲಿಖಾನ್ ಮತ್ತು ದೀಪಿಕಾ ಪಡುಕೋಣೆಯ ಕಾಕ್‌ಟೈಲ್ ಕತೆ. ಅರೆರೆ ಆಗಲೆ ಇಬ್ಬರೂ ತಮ್ಮ ಲವರ್‌ಗಳನ್ನು ಬದಲಾಯಿಸಿಬಿಟ್ಟರೆ ಎಂದು ಕೇಳಬೇಡಿ.ಅವರವರ ಲವರ್‌ಗಳ ಜೊತೆ ಅವರವರು ಸೇಫ್ ಆಗಿಯೇ ಇದ್ದಾರೆ. ಈಗ ಇವರಿಬ್ಬರೂ ಒಂದಾಗುತ್ತಿರುವುದು 'ಕಾಕ್‌ಟೈಲ್' ಚಿತ್ರಕ್ಕಾಗಿ.

'ಆರಕ್ಷಕನ್' ಮತ್ತು 'ರೇಸ್ 2' ಚಿತ್ರಗಳ ಸೈಫ್ ಮತ್ತು ದೀಪಿಕಾ ಕೈಗೆತ್ತಿಕೊಳ್ಳುತ್ತ್ತಿರುವ ಹೊಸ ಪ್ರಾಜೆಕ್ಟ್ 'ಕಾಕ್‌ಟೈಲ್‌'. "ದೀಪಿಕಾ ಮತ್ತು ನಾನು ಈ ವರ್ಷ ಮೂರು ಚಿತ್ರಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದೇವೆ. ಈ ಎಲ್ಲಾ ಚಿತ್ರಗಳಲ್ಲೂ ವಿಭಿನ್ನವಾಗಿ ಕಾಣಿಸಲಿದ್ದೇವೆ. ಈ ಸವಾಲನ್ನು ಆಸಕ್ತಿಕರವಾಗಿಯೇ ಸ್ವೀಕರಿಸಿದ್ದೇವೆ" ಎಂದಿದ್ದಾರೆ ಸೈಫ್.

'ಕಾಕ್‌ಟೈಲ್' ಚಿತ್ರದ ಚಿತ್ರೀಕರಣ ಇನ್ನೊಂದು ವಾರದಲ್ಲಿ ಶುರುವಾಗುತ್ತದೆ. ಹೋಮಿ ಅದಾಜಾನಿಯಾ ನಿರ್ದೇಶಿಸುತ್ತಿರುವ ಚಿತ್ರ ಇದು. ಈ ಹಿಂದೆ 'ಲವ್ ಆಜ್ ಕಲ್'(2009) ಎಂಬ ಚಿತ್ರದಲ್ಲಿ ದೀಪಿಕಾ ಮತ್ತು ಸೈಫ್ ಕೆಮಿಸ್ಟ್ರಿ ವರ್ಕ್‌ಔಟ್ ಆಗಿತ್ತು. ಈ ಚಿತ್ರವನ್ನು ಇಲ್ಯುಮಿನಟಿ ಫಿಲಂಸ್ ನಿರ್ಮಿಸಿತ್ತು. ಈಗ 'ಕಾಕ್‌ಟೈಲ್' ಚಿತ್ರವನ್ನೂ ಅದೇ ಸಂಸ್ಥೆ ನಿರ್ಮಿಸುತ್ತಿದೆ. ಈ ಬಾರಿ ಇವರಿಬ್ಬರ ನಡುವಿನ ಕೆಮಿಸ್ಟ್ರಿ ವರ್ಕ್‌ಔಟ್ ಆಗುತ್ತದೋ ಇಲ್ಲವೋ ಕಾದುನೋಡಬೇಕು. (ಏಜೆನ್ಸೀಸ್)

More from Filmibeat

English summary
Actress Deepika Padukone and Saif Ali Khan will work together again in Cocktail. This film made under Illuminati Films, the love story will start shooting next week and Homi Adajania will direct it.Earlier Deepika and Saif’s chemistry rocked in the Imtiaz Ali-directed 2009 hit movie 'Love Aaj Kal'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X