ಅಗ್ನಿಪಥ್ ಚಿತ್ರದಲ್ಲಿ ಹೃತಿಕ್-ಪ್ರಿಯಾಂಕಾ ಬಿಸಿಬಿಸಿ!

hruthik-priyanka
ಹೃತಿಕ್ ರೋಶನ್ ಮತ್ತು ಪ್ರಿಯಾಂಕಾ ಚೋಪ್ರಾ ಬಾಲಿವುಡ್ ನ ಅತ್ಯಂತ ಸೆಕ್ಸಿ ಲುಕ್ ಹೊಂದಿರುವ ನಟ-ನಟಿ. ಇಬ್ಬರೊಲ್ಲಬ್ಬರಿದ್ದರೂ ಪ್ರೇಕ್ಷಕರಿಗೆ ಸಾಕಷ್ಟು ಕಚಗುಳಿ. ಅಂಥದ್ದರಲ್ಲಿ ಇಬ್ಬರೂ ಒಟ್ಟಿಗಿರುವ "ಅಗ್ನಿಪಥ್" ನೋಡಲು ಜನ ಮುಗಿಬೀಳುವುದು ಗ್ಯಾರಂಟಿ ಎನ್ನುತ್ತಿವೆ ಬಾಲಿವುಡ್!

ಈ ಹಿಂದೆ 2006 ರಲ್ಲಿ ಬಿಡುಗಡೆಯಾದ "ಕ್ರಿಶ್" ಚಿತ್ರದಲ್ಲಿ ಅವರಿಬ್ಬರು ಪರಸ್ಪರ ಚುಂಬಿಸಿದ್ದನ್ನು ನೋಡಿ ಬೆಚ್ಚಗಾಗಿದ್ದ ಪ್ರೇಕ್ಷಕರಿಗೆ ಬರಲಿರುವ ಅಗ್ನಿಪಥ್ ನಲ್ಲಿ ಆ ಭಾಗ್ಯ ಸಿಗಲಿಕ್ಕಿಲ್ಲ ಎನ್ನಲಾಗದೆ. ಆದರೆ ಅಗ್ನಿಪಥ್ ಈ ಜೋಡಿಯನ್ನು, ಅವರ ದೇಹಸಿರಿಯನ್ನು ಬೇರೆ ಕೋನದಿಂದ ಬಳಸಿಕೊಂಡು ನಿರ್ದೇಶಕ ಕರಣ್ ಮಲ್ಹೋತ್ರಾ ಗೆಲ್ಲಲಿದ್ದಾರೆ ಎನ್ನಲಾಗಿದೆ. ಇಬ್ಬರ್ ಕೆಮೆಸ್ಟ್ರಿ ಸಖತ್ ವರ್ಕ್ಔಟ್ ಆಗಿದೆಯಂತೆ.

"ಕಥೆ ಹೆಣೆಯುವಾಗಲೇ ಅವರನ್ನೇ ಮನದಲ್ಲಿಟ್ಟುಕೊಂಡು ಕಥೆ ಹೆಣೆದೆ. ಆದರೆ ಅವರು ನನ್ನ ಸಿನಿಮಾ ಒಪ್ಪಿ ನಟಿಸಿದ್ದು ನನ್ನ ಅದೃಷ್ಟ" ಎನ್ನುತ್ತಿದ್ದಾರೆ ನಿರ್ದೇಶಕ ಕರಣ್ ಮಲ್ಹೋತ್ರಾ. ಒಟ್ಟಿನಲ್ಲಿ ಕರಣ್ ಚಿತ್ರದಲ್ಲಿ ಅವರಿಬ್ಬರೂ ಒಟ್ಟಿಗಿರುವುದು ಕರಣ್ ಅದೃಷ್ಟ ಮಾತ್ರವಲ್ಲ, ಪ್ರೇಕ್ಷಕರದೂ ಅನ್ನೋದು ಸತ್ಯ!

ಬರುವ ವರ್ಷದ ಆರಂಭ, ಜನವರಿ 26 ರಂದು ತೆರೆಗೆ ಬರಲಿರುವ ಅಗ್ನಿಪಥ್, ಈಗಿನಿಂದಲೇ ಜನರಿಗೆ ಬೆಚ್ಚನೆಯ ಸುಖ ನೀಡುತ್ತಿರುವುದು ಹೃತಿಕ್-ಪ್ರಿಯಾಂಕಾನಾಣೆಗೂ ಸತ್ಯ ಎನ್ನುತ್ತಿದೆ ಬಾಲಿವುಡ್ ಅಂಗಳ...

More from Filmibeat

English summary
Priyanka Chopra and Hrithik Roshan are two of Bollywood’s sexiest actors. Hrithik Roshan and Priyanka Chopra, who seen smooching each other in the 2006 release Krissh will not kiss each other in debutant director Karan Malhotra’s Agneepath. According to sources, Priyanka and Hrithik will not lock lips in Agneepath.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X