ಗೂಗಲ್ ಕಚೇರಿಯಲ್ಲಿ ಹುಚ್ಚೆದ್ದು ಕುಣಿದ ಡಾನ್ ಶಾರೂಖ್ ಖಾನ್

By Srinath

hyderabad-google-staff-dance-shah-rukh-don2
ಹೈದರಾಬಾದ್: ಬಾಲಿವುಡ್ ಬಾದಷಾ ಅಲಿಯಾಸ್ ಡಾನ್2 ಹೈದರಾಬಾದಿನ ಗೂಗಲ್ ಕಚೇರಿಯಲ್ಲಿ ಅಕ್ಷರಶಃ ಹುಚ್ಚೆದ್ದು ಕುಣಿದಿದ್ದಾರೆ. ತಮ್ಮ ಆರಾಧ್ಯನಟನನ್ನು ಕಣ್ಣೆದುರೇ ಕಂಡ ಕಚೇರಿಯ ಮಹಿಳಾ ಉದ್ಯೋಗಿಗಳು ಶಾರೂಕ್ ಅವರಿಗಿಂತ ಹೆಚ್ಚು ಹುಚ್ಚೆದ್ದು ಕುಣಿದಿದ್ದಾರೆ.

ಕಳೆದ ಬುಧವಾರ ರಾತ್ರಿ ಇಲ್ಲಿನ ಗೂಗಲ್ ಕಚೇರಿಯಲ್ಲಿ ಬಾಲಿವುಡ್ ಶೈಲಿಯಲ್ಲಿ ಡ್ಯಾನ್ಸ್ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಇದ್ದಕ್ಕಿಂದ್ದಂತೆ 'ಡಾನ್ ಕಿ ತಲಾಶ್ ಮುಲ್ಕೋಂ ಕಿ ಪೊಲೀಸ್ ಕರ್ ರಹಿ ಹೈ' ಎಂಬ ಆತಂಕದ ಸಂದೇಶ ಮೊಳಗುತ್ತಿದ್ದಂತೆ ಕಚೇರಿಯಲ್ಲಿ ಅರೆಕ್ಷಣ ಉದ್ವೇಗ, ಆತಂಕದ ವಾತಾವರಣ ಮೂಡಿದೆ.

ಲೈಟುಗಳನ್ನು ಆಫ್ ಮಾಡಿ, ಇಂತಹ ಗಂಭೀರ ವಾಣಿ ಕೇಳಿಬರುತ್ತಿದ್ದಂತೆ ಗೂಗಲ್ ಸಿಬ್ಬಂದಿ ಬೇಸ್ತು ಬಿದ್ದಿದ್ದಾರೆ. ಪೊಲೀಸ್ ನಾಯಿಗಳು, ಪೊಲೀಸ್ ಅಧಿಕಾರಿಗಳು ವೇದಿಕೆಯ ಮೇಲೆ ದಾಳಿಯಿಟ್ಟಾಗಲಂತೂ ಸಿಬ್ಬಂದಿ ನಿಜಕ್ಕೂ ಭಯಭೀತರಾಗಿದ್ದಾರೆ.

ಆದರೆ ಅದೇ ವೇಳೆಗೆ ಅಲೆಅಲೆಯಾಗಿ ಡಾನ್2 ಹಾಡು ಕೇಳಿಬಂದಿದೆ. ಆಗಲೇ ಡಾನ್ ಮಾರುವೇಶದಲ್ಲಿ ನಟ ಶಾರೂಖ್ ಖಾನ್ ಸ್ಟೆಪ್ಸ್ ಹಾಕುತ್ತಾ ಬಂದಾಗ ಗೂಗಲ್ ಉದ್ಯೋಗಿಗಳು ಹೋ ಎಂದು ಕೂಗು ಹಾಕಿದ್ದಾರೆ.

ಮುಂದಿನ ಒಂದು ಗಂಟೆ ಕಾಲ ಗೂಗಲ್ ಉದ್ಯೋಗಿಗಳು ಮೈಮರೆತು ತಮ್ಮ ಆರಾಧ್ಯದೈವನೊಂದಿಗೆ ಕುಣಿದುಕುಪ್ಪಳಿಸಿದ್ದಾರೆ. ಶಾರೂಖ್ ಬರ್ತಾರೆ ಅಂತ ಗೊತ್ತಿತ್ತು. ಆದರೆ ಸುಳ್ಳು ಸುದ್ದಿ ಅಂದ್ಕೊಂಡು ಸುಮ್ಮನಾಗಿದ್ದೆ. ಆದರೆ ಇಲ್ಲಿ ನೋಡಿದರೆ ಸಾಕ್ಷಾತ್ ನಟನೇ ಎದುರಿಗೆ ಬಂದ್ಬಿಟ್ಟ. ಏನು ಮಾಡಲು ತೋಚಲಿಲ್ಲ. ಆತನೊಂದಿಗೆ ಸುಮ್ಮನೆ ಸಿಕ್ಕಾಪಟ್ಟೆ ಕುಣಿದೆ ಎಂದು 25 ವರ್ಷದ ಉದ್ಯೋಗಿ ನಿಧಿ ಪಾರ್ಟಿ ನಂತರ ತಮ್ಮ ಸಂಭ್ರವನ್ನು ಹಂಚಿಕೊಂಡರು.

ಗೂಗಲ್ ವರ್ಷಾಂತ್ಯ ಪಾರ್ಟಿಯೂ ನೆರವೇರಿದಂತಾಗುತ್ತದೆ ಎಂದೆಣೆಸಿ, Don 2 ತೆಲುಗು ಅವತರಣಿಕೆಗಾಗಿ ಖುದ್ದು ಮೋಜುಮಸ್ತಿ ಮಾಡಲು ಶಾರೂಖ್ ಖಾನ್ ರನ್ನು ಆಮಂತ್ರಿಸಲಾಗಿತ್ತು. ಇಂತಹ ಅದ್ಭುತ ಅವಕಾಶ ಕಲ್ಪಿಸಿದ ಗೂಗಲ್ ಸಂಸ್ಥೆಗೂ ನಟ ಶಾರೂಖ್ ಖಾನ್ ಭಾವಪೂರ್ಣ ಅಭಿವಂದನೆಗಳನ್ನು ತಿಳಿಸಿದರು.

More from Filmibeat

English summary
Shah Rukh has Google staff dance to Don 2 : The Badshah of Bollywood, Shah Rukh Khan, who was in Hyderabad city to launch the audio of the Telugu version of Don 2 dropped in at Google’s annual party On Dec. 14 night.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X