For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಮಿನಿ ಬ್ಲೌಸ್ ನೋಡಿ ಕಿಲಕ್ ಎಂದ ಜೂಹಿ

  By Rajendra
  |

  'ಪ್ರೇಮಲೋಕ'ದ ಬೆಡಗಿ ಜೂಹಿ ಚಾವ್ಲಾ ಸೈಲೆಂಟ್‌ಗೆ ಹೆಸರಾದವರು. ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ತುಟಿಪಿಟಕ್ ಎನ್ನಲ್ಲ. ಯಾರ ಬಗ್ಗೆಯೂ ಕಾಮೆಂಟ್ ಮಾಡಲ್ಲ. ಆದರೆ ಮೊನ್ನೆ ನಡೆದ ಕಲರ್ಸ್ ಸ್ಕ್ರೀನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಉಕ್ಕಿಬಂದ ನಗುವನ್ನು ತಡೆಯಲಾಗದೆ ಕಿಲಕ್ ಎಂದಿದ್ದಾರೆ.

  ಆಕೆ ಕಿಲಕ್ ಎಂದ ಸುದ್ದಿ ಬಾಲಿವುಡ್‌ನಲ್ಲಿ ದೊಡ್ಡ ಸುದ್ದಿಯಾಗಿದೆ. ಜೂಹಿ ನಗುವಿಗೆ ಕಾರಣವಾಗಿರುವುದು ಪ್ರಿಯಾಂಕಾ ಚೋಪ್ರಾ ಮಿನಿ ಬ್ಲೌಸ್‌. ಇದು ಅಚ್ಚರಿ ಅನ್ನಿಸಿದರೂ ನಿಜ. ಈ ಬಗ್ಗೆ ಜೂಹಿ ಚಾವ್ಲಾ ತನ್ನ ಟ್ವಿಟ್ಟರ್ ಖಾತೆಯಲ್ಲೂ ಹೇಳಿಕೊಂಡಿದ್ದಾರೆ.

  "ನಾನು ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ. ಸ್ಕ್ರೀನ್ ಅವಾರ್ಡ್ಸ್ ದೊಡ್ಡ ಜಾಹೀರಾತು ಕಿಲಕ್ ಅಂತ ನಗು ಬಂತು. ಫಲಕದಲ್ಲಿ ಪ್ರಿಯಾಂಕಾರನ್ನು ಮಿನಿ ಬ್ಲೌಸ್‌ನಲ್ಲಿ ತೋರಿಸಲಾಗಿತ್ತು. ಪ್ರತಿಷ್ಠಿತ ಪ್ರಶಸ್ತಿಗಳಿಗೆ ಈ ರೀತಿಯ ಚೀಪ್ ಗಿಮ್ಮಿಕ್ ಬೇಕಾಗಿರಲಿಲ್ಲ" ಎಂದು ಟ್ವೀಟಿಸಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಕಿಲಕ್ಕೂ ಎಂದಿಲ್ಲ ಕಿಸಕ್ಕೂ ಎಂದಿಲ್ಲ. (ಏಜೆನ್ಸೀಸ್)

  English summary
  Actress Juhi Chawla usually remains very silent and doesn’t comment badly about anybody. But the hoarding of Screen Awards could not stop Juhi Chawla to pass a remark on Priyanka Chopra who sported a small blouse during one of her performances at Colors Screen Awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X