ಬಾಲಿವುಡ್‌ಗೆ ಲಂಗರು ಹಾಕಿದ ಕಾಜಲ್ ಅಗರವಾಲ್
ತೆಲುಗಿನ 'ಮಗಧೀರ' ಚಿತ್ರದ ಮೂಲಕ ಮನೆಮಾತಾದ ಬೆಡಗಿ ಕಾಜಲ್ ಅಗರವಾಲ್. ಈಗ ಈಕೆ ಬಾಲಿವುಡ್‌ಗೆ ಲಂಗರು ಹಾಕಿದ್ದಾರೆ. ಅಜಯ್ ದೇವಗನ್ ಚಿತ್ರದಲ್ಲಿ ತೆರೆಹಂಚಿಕೊಳ್ಳಲು ಕಾಜಲ್ ಈಗಾಗಲೆ ಸಹಿ ಹಾಕಿಯಾಗಿದೆ. ತಮ್ಮ ಪತ್ನಿಯ ಹೆಸರು ಕಾಜೋಲ್ ಎಂಬ ಕಾರಣಕ್ಕೆ ಅಜಯ್ ದೇವಗನ್ ಈಕೆಯನ್ನು ಬಾಲಿವುಡ್‌ಗೆ ಕರೆಸಿಕೊಂಡರೋ ಏನೋ ಗೊತ್ತಿಲ್ಲ.
ಈಕೆ ಅಭಿನಯಿಸಲಿರುವ ಚಿತ್ರ ತಮಿಳಿನ 'ಸಿಂಗಂ' ರೀಮೇಕ್. ಇದೇ ಚಿತ್ರ ಈಗಾಗಲೆ ತೆಲುಗಿನಲ್ಲಿ 'ಯಮುಡು 'ಎಂದು ರೀಮೇಕ್ ಆಗಿದೆ. ಕನ್ನಡದಲ್ಲಿ 'ಕೆಂಪೇಗೌಡ'ನ ರೂಪದಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ದಕ್ಷಿಣದಲ್ಲಿ ಒಂದು ಸುತ್ತಿಹಾಕಿರುವ 'ಸಿಂಗಂ' ಚಿತ್ರ ಈಗ ಉತ್ತರ ಭಾರತದ ಕಡೆ ಪಾದ ಬೆಳೆಸಿದೆ.
ಈ ಹಿಂದೆ ಕಾಜಲ್ ಅಗರವಾಲ್ ಕನ್ನಡಕ್ಕೆ ಬರುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಆ ಸುದ್ದಿ ನಿಜವಾಗುವಷ್ಟರಲ್ಲಿ ಈಕೆ ಬಾಲಿವುಡ್‌ಗೆ ಹಾರಿದ್ದಾರೆ. 'ಎಕೆ 97' ಮತ್ತು 'ತಥಾಸ್ತು' ಎಂಬ ಕನ್ನಡ ಚಿತ್ರಗಳಲ್ಲಿ ಕಾಜಲ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇನ್ನೂ ಜೀವಂತವಾಗಿದೆ.
More from Filmibeat
English summary
Southern Siren Kajal Agarwal will be made her Bollywood debut as full fledged heroine against Ajay Devgan. Directed by Rohit Shetty, this is the remake of a Tamil movie. The film is a remake of the Suriya-Anushka super hit Tamil film Singam.


Click it and Unblock the Notifications











