For Quick Alerts
  ALLOW NOTIFICATIONS  
  For Daily Alerts

  ತ್ರಿಡಿಯಲ್ಲಿ ತಾರೆ ಮನಿಷಾ ಕೋಯಿರಾಲ ಭೂತ

  By Rajendra
  |

  ಪ್ರೇಕ್ಷಕರನ್ನು ಹೇಗಾದರೂ ಮಾಡಿ ಬೆಚ್ಚಿ ಬೀಳಿಸಬೇಕು ಎಂಬುದು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಉದ್ದೇಶ. ಆರಂಭದಿಂದಲೂ ಅವರು ದೆವ್ವ,ಭೂತ, ಪಿಶಾಚಿಯ ಕಥೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಲೇ ಇದ್ದಾರೆ. ವರ್ಮಾ ನಿರೀಕ್ಷಿಸಿದ ಮಟ್ಟದಲ್ಲಿ ಜನ ಭಯ ಬೀಳುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಭಯ ಬೀಳಿಸಲೇಬೇಕು ಎಂದು ಈ ಈ ಬರಿ ಅವರು ಪಣತೊಟ್ಟಿದ್ದಾರೆ.

  2003ರಲ್ಲಿ ತೆರೆಕಂಡಿದ್ದ ಹಿಂದಿಯ 'ಭೂತ್' ಚಿತ್ರದ ಎರಡನೇ ಭಾಗವನ್ನು ತೆರೆಗೆ ತರಲು ಮುಂದಾಗಿದ್ದಾರೆ. ಚಿತ್ರಕ್ಕೆ 'ಭೂತ್ 2' ಎಂದು ಹೆಸರಿಡಲಾಗಿದೆ. ಆದರೆ ಈ ಬಾರಿ 3D ತಂತ್ರಜ್ಞಾನದಲ್ಲಿ ಚಿತ್ರವನ್ನು ತೆರೆಗೆ ತರುತ್ತಿರುವುದು ವಿಶೇಷ. ಮನಿಷಾ ಕೋಯಿರಾಲಾ ಹಾಗೂ ಜೆಡಿ ಚಕ್ರವರ್ತಿ ಚಿತ್ರದ ಮುಖ್ಯಭೂಮಿಕೆಯಲ್ಲಿರುತ್ತಾರೆ.

  ಆರು ವರ್ಷದ ಪುಟ್ಟ ಪೋರಿಯ ಸುತ್ತ ಕಥೆ ಸುತ್ತುತ್ತದೆ. ಇತ್ತೀಚೆಗೆ ಮುಂಬೈನಲ್ಲಿ ಚಿತ್ರೀಕರಣ ಆರಂಭವಾಗಿದ್ದು ಮನಿಷಾ, ಜೆಡಿ ಚಕ್ರವರ್ತಿ ಅಭಿನಯದ ಸನ್ನಿವೇಶಗಳನ್ನು ಚಿತ್ರಿಸಿ ಕೊಳ್ಳಲಾಯಿತು. ಹಿಂದಿ ಸೇರಿದಂತೆ ತೆಲುಗು, ತಮಿಳು ಭಾಷೆಗಳಲ್ಲೂ ಈ ಚಿತ್ರ ತೆರೆಕಾಣಲಿದೆ. ಈ ಚಿತ್ರದ ಮೂಲಕ ಮನಿಷಾ ಕೋಯಿರಾಲ ಎರಡನೇ ಇನ್ನಿಂಗ್ಸ್ ಆರಂಭಿಸುವ ಸೂಚನೆಗಳಿವೆ. (ಏಜೆನ್ಸೀಸ್)

  English summary
  Bollywood actress Manisha Koirala has replaced Urmila Matondkar in the sequel of Bhoot. The actress who was last seen in the National Award winning film I Am, has now been signed on by Ram Gopal Varma to star in Bhoot 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X