ರಾ ಒನ್ ಚಿತ್ರದ ಗಳಿಕೆ ಹಿಂದಿಕ್ಕಿದ ರಾಕ್ ಸ್ಟಾರ್
ಇತ್ತೀಚಿಗೆ ಬಿಡುಗಡೆಯಾದ 'ರಾಕ್ ಸ್ಟಾರ್' ಚಿತ್ರ, ರಾ ಒನ್ ಗಳಿಕೆಯನ್ನು ಮೊದಲ ವಾರದಲ್ಲಿಯೇ ಹಿಂದಿಕ್ಕಿದೆ. ಎರಡು ವಾರಗಳಿಂದ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದ ರಾ ಒನ್ ಇದೀಗ ರಾಕ್ ಸ್ಟಾರ್ ಬಿಡುಗಡೆಯ ನಂತರ ಬಾಕ್ಸ್ ಆಫೀಸ್ ವರದಿಯಲ್ಲಿ ಕೆಳಕ್ಕಿಳಿದಿದೆ.
ರಣಬೀರ್ ಕಪೂರ್ ಹಾಗೂ ನರ್ಗೀಸ್ ಫಕ್ರಿ ಅಭಿನಯದ ಚಿತ್ರ ರಾಕ್ ಸ್ಟಾರ್, ಬಿಡುಗಡೆಯಾದ ಮೊದಲ ವಾರದಲ್ಲಿ ಡೊಮೆಸ್ಟಿಕ್ ಕಲೆಕ್ಷನ್ ಸೆಂಟರ್ ಗಳಲ್ಲಿ ಶೇ. 50 ನಿವ್ವಳ ಲಾಭ ಗಳಿಸಿದೆ. ವೀಕೆಂಡ್ ಹೊರತುಪಡಿಸಿ ಉಳಿದ ದಿನಗಳ ಗಳಿಕೆಯೇ ರು. 33.6 ಕೋಟಿಗಳಷ್ಟಿದೆ. ಸಲ್ಮಾನ್ ಖಾನ್ 'ರೆಡಿ' ಸಿನಿಮಾದ ನಂತರ ಅತೀ ಹೆಚ್ಚಿನ ದಾಖಲೆ ಇದಾಗಿದೆ.
ಜೊತೆಗೆ ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ರು. 11 ಕೋಟಿ ಗಳಿಸಿದೆ. ಈ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ರಣಬೀರ್ ಕಪೂರ್ ಅಭಿನಯ ಹಾಗೂ ಸಂಗೀತ ಮಾಂತ್ರಿಕ ರೆಹಮಾನ್ ಸಂಗೀತ. ಒಟ್ಟಿನಲ್ಲಿ ಪ್ರೇಕ್ಷಕರು ರಾಕ್ ಸ್ಟಾರ್ ಚಿತ್ರಕ್ಕೆ ಮನಸೋತಿದ್ದಾರೆ. ರಣಬೀರ್ ಹಾಗೂ ನರ್ಗೀಸ್ ಫುಲ್ ಖುಷ್. (ಏಜೆನ್ಸೀಸ್)
More from Filmibeat
English summary
Bollywood Movie Rockstar has topped the Indian Box Office chart by beating Shahrukh Khan movie Ra.One. Ranbir Kapoor and Nargis Fakhri starrer movie has earned Rs 50 net in domestic collection centres in first week of its release.


Click it and Unblock the Notifications










