ನನ್ನ ಫಿಗರ್ ಗೆ ಬಿಕಿನಿ ಸರಿ ಹೊಂದಲ್ಲ : ಸೋನಮ್

By Mahesh

ಬಾಲಿವುಡ್ ನಟಿಮಣಿಯರ ಬಾಯಿಂದ ಎಂದೂ ಉದುರದಂಥ ಸಾಲುಗಳನ್ನು ಸೋನಮ್ ಎಂಬ ಬೋಲ್ಡ್ ಬಾಲೆ ಉದುರಿಸಿದ್ದಾಳೆ. ಕನ್ಫೇಷನ್ಸ್ ಆಫ್ ಎ ಸೀರಿಯಲ್ ಡಿಟೆರ್ ಕಾರ್ಯಕ್ರಮಕ್ಕೆ ಬಂದಿದ್ದ ಸೋನಮ್, 'ತಮ್ಮ ದೇಹಸಿರಿ ಬಿಕಿನಿಗೆ ಸರಿಹೊಂದುವುದಿಲ್ಲ. ನಾನಿನ್ನು ದಪ್ಪ ಇದ್ದೀನಿ. ನನ್ನ ಲುಕ್ ಎಲ್ಲಾ ನಾನು ಹಾಕುವ ವಿನ್ಯಾಸಯುಕ್ತ ವಸ್ತ್ರಗಳಿಂದ ಮಾತ್ರ ಪಡೆದಿದ್ದು' ಎಂದು ಹೇಳಿ ಎಲ್ಲರ ಹುಬ್ಬೇರಿಸಿದ್ದಾಳೆ.

26 ವರ್ಷದ ಸೋನಮ್ ಕಪೂರ್ ವಸ್ತ್ರ ವಿನ್ಯಾಸ ಅತ್ಯಂತ ಕೆಟ್ಟ ಅಭಿರುಚಿಯುಳ್ಳದ್ದು ಎಂದು ಬಾಲಿವುಡ್ ನಲ್ಲಿ ಗುಸುಗುಸು ಮಾತಿದೆ. ಈ ಸಂದರ್ಭದಲ್ಲಿ ಸೋನಮ್ ತನ್ನ ದೇಹದ ಮೈಮಾಟ ಇನ್ನೂ ಫಿಟ್ ಆಗಿಲ್ಲ ಎಂದು ಹೇಳಿದ್ದಾರೆ.

ನಾನು ಸದ್ಯಕ್ಕಂತೂ ಬಿಕಿನಿ ತೊಡುವುದಿಲ್ಲ. ಸುಮ್ಮನೆ ಬಟ್ಟೆ ಬಿಚ್ಚಿ ಕುಣಿಯುವುದರಲ್ಲಿ ಅರ್ಥವಿಲ್ಲ. ನನಗೆ ಆ ರೀತಿ ಸನ್ನಿವೇಶಗಳು ಮುಜುಗರ ತರಿಸುತ್ತದೆ ಎಂದು ಸೋನಮ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ದೆಲ್ಲಿ 6, ಪ್ಲೇಯರ್ಸ್ ಚಿತ್ರದಲ್ಲಿ ನಾಯಕಿಯಾಗಿರುವ ಸೋನಮ್ ಇಷ್ಟೆಲ್ಲ ಬೋಲ್ಡ್ ಆಗಿ ಮಾತಾಡಿದರೂ ತನ್ನ ವೃತ್ತಿಯ ಬಗ್ಗೆ ಅರಿವಿದೆ. ಚಿತ್ರರಂಗದಲ್ಲಿ ಬೇಡಿಕೆಯಲ್ಲಿರಬೇಕಾದರೆ ದೇಹ ಸೌಂದರ್ಯ ಎಷ್ಟು ಮುಖ್ಯ ಎಂಬುದು ತಿಳಿದಿದೆ.

ಒಂದು ಕಾಲದಲ್ಲಿ ದಢೂತಿ ಯುವತಿಯಾಗಿದ್ದ ಸೋನಮ್ ಈಗ ಬಳಕುವ ಬಳ್ಳಿಯಂತೆ ಆಗಿದ್ದು ಸಿನಿಮಾ ರಂಗ ಸೇರಲು ಎಂಬುದನ್ನು ಮರೆಯುವಂತಿಲ್ಲ.(ಪಿಟಿಐ)

More from Filmibeat

English summary
Sonam Kapoor says no to Bikini "I don't have the best body... I have loose skin. I look good because of the clothes I wear. I choose my clothes very carefully, which make me look thin and perfectly fit my body," Sonam told PTI.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X