»   »  ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟ ವರುಣ್ ಗಾಂಧಿ!

ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟ ವರುಣ್ ಗಾಂಧಿ!

Posted By:
Subscribe to Filmibeat Kannada

ವಿವಾದಾತ್ಮಕ ಯುವ ರಾಜಕಾರಣಿ ವರುಣ್ ಗಾಂಧಿ ಬಾಲಿವುಡ್ ಅಂಗಳಕ್ಕೆ ಅಡಿಯಿಡಲಿದ್ದಾರೆ! ಆದರೆ ವ್ಯಕ್ತಿಯಾಗಿ ಅಲ್ಲ, ಅವರ ಜೀವನ ಕತೆಯನ್ನು ಬೆಳ್ಳಿತೆರೆಗೆ ತರಲಾಗುತ್ತಿದೆ. ಸುರೇಂದ್ರ ಸೂರಿ ಎಂಬವರ ಸಹಾಯಕ ಜೆ ಡಿ ದತ್ತ ಎಂಬುವವರ ನಿರ್ದೇಶನದಲ್ಲಿ ಈ ಚಿತ್ರ ಸೆಟ್ಟೇರಲಿದೆ. ವರುಣ್ ಗಾಂಧಿ ಪಾತ್ರವನ್ನು ರಾಜನ್ ವರ್ಮ ಎಂಬುವವರು ಪೋಷಿಸಲಿದ್ದಾರೆ.

ಇಷ್ಟಕ್ಕೂ ಈ ರಾಜನ್ ವರ್ಮ ಯಾರು? 'ಟೋಟಲ್ ಟೆನ್' ಎಂಬ ಹಿಂದಿ ಚಿತ್ರದಲ್ಲಿ ಈತ ಉಗ್ರ ಕಸಬ್ ನ ಪಾತ್ರವನ್ನು ಪೋಷಿಸುತ್ತಿದ್ದಾರೆ! ಉಗ್ರನಾಗಿ ನಟಿಸಲು ಈತ ಈಗಾಗಲೇ ಸಾಕಷ್ಟು ತಯಾರಿಯನ್ನೂ ನಡೆಸಿದ್ದ. ಈಗ ವರುಣ್ ಗಾಂಧಿ ಪಾತ್ರಕ್ಕಾಗಿ 10 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ.

ವರುಣ್ ಗಾಂಧಿಯ ಹಾವಭಾವಗಳನ್ನು ಸೂಕ್ಷ್ಮವಾಗಿ ಅಧ್ಯಯನವನ್ನು ಮಾಡಿದ್ದಾನೆ. ಇದಕ್ಕಾಗಿ ದೂರದರ್ಶನದ ಮುಂದೆ ಗಂಟೆಗಟ್ಟಲೆ ವರುಣ್ ಸುದ್ದಿಗಳನ್ನು ವೀಕ್ಷಿಸಿದ್ದಾನೆ. ಅಂದಹಾಗೆ ಈ ಚಿತ್ರಕ್ಕೆ ವರುಣ್ ಗಾಂಧಿ ಸಹ ತಮ್ಮ ಒಪ್ಪಿಗೆ ಸೂಚಿಸಿದ್ದಾರಂತೆ. ವರುಣ್ ಗಾಂಧಿ ಜೀವನ, ರಾಜಕೀಯ ಅಪರಾಧಗಳ ಸುತ್ತ ಚಿತ್ರಕತೆ ಹೆಣೆಯಲಾಗಿದೆ.

ಚಿತ್ರದಲ್ಲಿ ನೈಜ ರಾಜಕಾರಣಿಗಳನ್ನು ಬಳಸಿಕೊಳ್ಳಲಾಗುತ್ತದಂತೆ. ನಟಿಸಲಿರುವ ರಾಜಕಾರಣಿಗಳು ಯಾರು ಎಂಬುದನ್ನು ಸದ್ಯಕ್ಕೆ ಬಹಿರಂಗಗೊಳಿಸಿಲ್ಲ. ಶೀಘ್ರದಲ್ಲೇ ತಾರಾಗಣದ ಆಯ್ಕೆ ಹಾಗೂ ಚಿತ್ರೀಕರಣದ ದಿನಾಂಕವನ್ನುಅಂತಿಮಗೊಳಿಸಲಿದ್ದೇವೆ ಎನ್ನುತ್ತಾರೆ ದತ್ತ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada