ಬೆತ್ತಲೆ ಬೆನ್ನು ತೋರುವುದೇ ಲೇಸು ಎಂದು ಲಿಸಾ
ಐಷಾ ಸಿನಿಮಾ ಮೂಲಕ ಬಾಲಿವುಡ್ ಗಮನ ಸೆಳೆದಿದ್ದ ಇಂಡೋ ಆಸ್ಟ್ರೇಲಿಯನ್ ಬ್ಯೂಟಿ ಲಿಸಾ ಹೇಡನ್ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ.
ಕಾಮಿಡಿ ಚಿತ್ರಗಳ ಕಿಂಗ್ ಡೇವಿಡ್ ಧವನ್ ನಿರ್ದೇಶನದ ರ್‍ಯಾಸ್ಕಲ್(rascal) ಚಿತ್ರದಲ್ಲಿ ಲಿಸಾ ಅವರ ಕೈಲಿ ಒಂದು ಹಾಟ್ ಐಟಂ ನಂಬರ್ ಮಾಡಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಲಿಸಾ ಬೆನ್ನ ಮೇಲೆ ನೂಲೆಳೆ ಬಟ್ಟೆ ಕೂಡಾ ಇಲ್ಲದೆ 'ಬೇರ್ ಬ್ಯಾಕ್ ' ಪ್ರದರ್ಶನ ವೀಕ್ಷಕರಿಗೆ ಲಭ್ಯವಾಗಲಿದೆಯಂತೆ.
ಸಂಜಯ್ ದತ್ ಹಾಗೂ ಅಜಯ್ ದೇವಗನ್ ಜೋಡಿಯ ಈ ಚಿತ್ರದಲ್ಲಿ ಲಿಸಾ ಭಂಗಿ, ಕುಣಿತ ನೋಡಿದ ಬಾಲಿವುಡ್ ಮಂದಿ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ನನ್ನ ಬೆನ್ನು ಸೂಪರ್: ನಗ್ನ ಬೆನ್ನು ತೋರಿದ ನೀರೆಯನ್ನು ಈ ಬಗ್ಗೆ ಪ್ರಶ್ನಿಸಿದರೆ, 'ಮಾಡೆಲಿಂಗ್ ಹಿನ್ನೆಲೆಯಿಂದ ಬಂದ ನನಗೆ ಕಂಫರ್ಟಬಲ್ ಎನಿಸಿದ್ದನ್ನು ಮಾತ್ರ ಮಾಡುತ್ತೇನೆ, ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕುಣಿಯುವುದು ನಮ್ಮ ಕೆಲಸ, ನಗ್ನತೆ ನೋಡುಗನ ಕಣ್ಣಲ್ಲಿರುತ್ತದೆ, ಕಳಚುವ ಬಟ್ಟೆಯಿಂದ ಕಾಣುವ ದೇಹ ಸಿರಿಯಲ್ಲಲ್ಲ ಎಂದು ತಮಿಳು ಪೊಣ್ಣು ಲಿಸಾ ಹೇಳುತ್ತಾಳೆ.
ಹೊಸ ಗ್ಲ್ಯಾಮರ್ ಲುಕ್ ಪಡೆದು ಮೈಚಳಿ ಬಿಟ್ಟು ಕುಣಿಯುವಂತೆ ಮಾಡಿದ ಟಾಪ್ ನೃತ್ಯ ಸಂಯೋಜಕರಾದ ಬಾಸ್ಕೋ ಹಾಗೂ ಸೀಜರ್ ಥ್ಯಾಂಕ್ಸ್ ಹೇಳುವುದನ್ನು ಲಿಸಾ ಮರೆಯಲಿಲ್ಲ.
ಅಕ್ಕ ಪಕ್ಕದಲ್ಲಿ ಸಂಜಯ್, ಅಜಯ್ ಜೊತೆಗೆ ಡೇವಿಡ್ ಧವನ್ ನಿರ್ದೇಶನ ಇರುವ ಚಿತ್ರದಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ನನ್ನ ಐಟಂ ನಂಬರ್ 'shake it saiyaan' ತಪ್ಪದೇ ನೋಡಿ ಎಂದು ಲಿಸಾ ಮನವಿ ಮಾಡಿದ್ದಾಳೆ. ಅಂದ ಹಾಗೆ ಈ ಚಿತ್ರದಲ್ಲಿ ಪಡ್ಡೆಗಳಿಗೆ ಕಂಗನಾ ಬಿಕಿನಿ ಷೋ ಬೋನಸ್ ಕೂಡಾ ಸಿಗಲಿದೆ.


Click it and Unblock the Notifications











