For Quick Alerts
ALLOW NOTIFICATIONS  
For Daily Alerts

ನಟಿ ಶಿಲ್ಪಾ ಶೆಟ್ಟಿಗೆ ಯಕ್ಕಾ ಮಕ್ಕಾ ಲಾಸ್ಸೋ ಲಾಸ್

By Shilpa To Open A Restaurant
|

ಲಂಡನ್ನಿನ ರೆಸ್ಟೋರೆಂಟೊಂದರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಉದ್ಯಮಿ ಪತಿ ರಾಜ್ ಕುಂದ್ರ ತೊಡಗಿಸಿದ ಶೇ 33ರಷ್ಟು ಹಣ ಇದೀಗ ಮಣ್ಣು ಪಾಲಾಗಿದೆ. ಲಂಡನಿನಲ್ಲಿ ಕಾರ್ಯಾಚರಿಸುತ್ತಿರುವ 'ವಿ8 ಗೌರ್ ಮೆಟ್" ಎಂಬ ಹೆಸರಿನ ರೆಸ್ಟೋರೆಂಟಿನಲ್ಲಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಬಂಡವಾಳ ಹೂಡಿದ್ದು ವ್ಯರ್ಥವಾಗಿದೆ. ಎರಡು ಮೂರು ಕಂಪೆನಿಗಳ ಕಿತ್ತಾಟ ಬಗೆ ಹರಿಯದೆ ಶಿಲ್ಪಾಳ ಹಣ ಹೂಡಿಕೆ ನೀರುಪಾಲಾಗಿದೆ.

ಹಾಲಿ ರೆಸ್ಟೊರೆಂಟ್ 'ಬಾಂಬೆ ಬೈಸಿಕಲ್ ಕ್ಲಬ್" ಹಾಗೂ 'ವಾಮ ಬೈಟ್ ಮತ್ತು ಟಿಫಿನ್ ಬೈಟ್" ಮುಖಾಂತರ ಕಾರ್ಯ ನಿರ್ವಹಿಸುತ್ತಿದ್ದಾರೆ. ವ್ಯಾಪಾರ ದೃಷ್ಟಿಯಿಂದ ರಾಜ್ ಕುಂದ್ರಾರನ್ನು ಪುಸಲಾಯಿಸಿದ ನಟಿ ಕಳೆದ 2009ರಲ್ಲಿ 6 ಮಿಲಿಯನ್ ಪೌಂಡ್ ಹಣ ತೊಡಗಿಸುವಂತೆ ಮಾಡಿದ್ದರು. ಬಿಗ್ ಬ್ರದರ್ ನಲ್ಲಿ ಬಂದಿದ್ದ ಹಣವೆಲ್ಲಾ, ಜೇಡ್ ಗೂಡಿ ಜೊತೆ ಕಿತ್ತಾಟದಿಂದ ಬಂದಿದ್ದ ಜನಪ್ರಿಯತೆ ಎಲ್ಲಾ ಈಗ ಮಣ್ಣುಗೂಡಿದೆ. ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಶೇ 12ರಷ್ಟು ಷೇರು ಹೊಂದಿರುವ ಶಿಲ್ಪಾ, ಅಲ್ಲೂ ಕೂಡಾ ಸೋಲು ಕಂಡಿದ್ದಾರೆ.

ಇದೀಗ ವ್ಯವಹಾರ ನಿರ್ವಹಿಸುತ್ತಿದ್ದ ಆಡಳಿತ ಮಂಡಳಿ V8 ರೆಸ್ಟೋರೆಂಟಿನ ಸಂಪೂರ್ಣ ಪಾಲು ಪಡೆಯಲು ಮುಂದಾಗಿದೆ. ಇದರಿಂದಾಗಿ ಶಿಲ್ಪಾ ಶೆಟ್ಟಿ ಬರಿಗೈಯಲ್ಲಿ ಮರಳಬೇಕಾಗಿ ಬಂದಿದೆ. ವಿ8 ಗೌರ್ ಮೆಟ್ ಸಿದ್ಧಗೊಳಿಸಿದ ಖಾದ್ಯಗಳನ್ನು ತಯಾರಿಸಿ ಸೂಪರ್ ಮಾರ್ಕೆಟ್ ಸೇರಿದಂತೆ ವಾಯುಯಾನ ಮುಂತಾದೆಡೆ ಪ್ರಚಾರಗೊಳಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಅಡಳಿತ ಮಂಡಳಿ ಕಿತ್ತಾಟ ದಿಂದ ಭಾರಿ ಲಾಸ್ ಆಗಿದ್ದು, ಶಿಲ್ಪಾಳ ಆಸೆಗೆ ಭಗ್ನವಾಗಿದೆ.

English summary
London Curry House owner wipes out. The Company in which Bollywood actress Shilpa Shetty of Big Brother fame had 30% of stake. Bombay Bicycle Club and Tiffinbites trouble made company owner V8 Gourmet to cancel the deal.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more