ಐಶ್ವರ್ಯ ಆಕ್ಷನ್ ಕಟ್‌ನಲ್ಲಿ ಅಭಿಷೇಕ್ ಬಚ್ಚನ್ ಸಿನಿಮಾ
ಅಪ್ಪನಾಗಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್‌ಗೆ ನಿರ್ದೇಶಕಿಯೊಬ್ಬರ ಜೊತೆ ಕೆಲಸ ಮಾಡುವ ಅಪೂರ್ವ ಅವಕಾಶ ಸಿಕ್ಕಿದೆ. ಇದೇ ಮೊದಲ ಬಾರಿ ಐಶ್ವರ್ಯ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಅಭಿಷೇಕ್ ಅಭಿನಯಿಸಲಿದ್ದಾರೆ. ಆದರೆ ಈಕೆ ಐಶ್ವರ್ಯ ರೈ ಅಲ್ಲ, ರಜನಿಕಾಂತ್ ಮಗಳು ಐಶ್ವರ್ಯ ಧನುಷ್.
ಧನುಷ್ ಹಾಡಿರುವ "ಕೊಲವೆರಿ ಡಿ" ಹಾಡು ಕೇಳಿ ಸಂತಸ ತಡೆಯಲಾಗದೆ ಕೂಡಲೆ ಐಶ್ವರ್ಯಗೆ ಫೋನ್ ಹಾಯಿಸಿದರಂತೆ ಅಭಿ. ಐಶ್ವರ್ಯ ನಿರ್ದೇಶಿಸುತ್ತಿರುವ ತಮಿಳು '3' ಚಿತ್ರದ ಬಗ್ಗೆ ಕೇಳಿ ತಿಳಿದುಕೊಂಡ ಅಭಿ ಹಿಂದಿಯಲ್ಲೂ ಈ ಚಿತ್ರ ನಿರ್ದೇಶಿಸಿ ಅಂದಿದ್ದಾರಂತೆ. ಹಾಗೆಯೇ ಒಂದು ಕಂಡೀಷನ್ನೂ ಹಾಕಿದ್ದಾರಂತೆ.
ಅದೇನೆಂದರೆ ಹಿಂದಿ ಚಿತ್ರದಲ್ಲೂ "ಕೊಲವೆರಿ ಡಿ" ಧಾಟಿಯ ಹಾಡಿರಬೇಕು ಎಂದು. ಓ ಅಷ್ಟೇನಾ ಎಂದು ಐಶ್ವರ್ಯ ನಕ್ಕು ಸುಮ್ಮನಾಗಿದ್ದಾರಂತೆ. ತಮಿಳಿನ '3' ಚಿತ್ರ ಮುಗಿಸಿದ ಕೂಡಲೆ ಹಿಂದಿ ಚಿತ್ರವನ್ನು ಕೈಗೆತ್ತಿಕೊಳ್ಳಲಿರುವುದಾಗಿ ಐಶ್ವರ್ಯ ಘೊಷಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
There are reports coming in that Aishwarya Dhanush is soon to direct a Hindi film with Abhishek Bachchan in the lead. The star is so enamored with the Kolaveri di song that he immediately called Aishwarya to discuss the 3 story.


Click it and Unblock the Notifications











