For Quick Alerts
  ALLOW NOTIFICATIONS  
  For Daily Alerts

  ನಾನೊಬ್ಬ ಕೆಟ್ಟ ನಟ ಎಂದ ಹೃತಿಕ್ ರೋಶನ್

  |

  ತಮ್ಮ ಸುದೀರ್ಘ ಬಾಲಿವುಡ್ ವೃತ್ತಿಜೀವನದಲ್ಲಿ ನಟ ಹೃತಿಕ್ ರೋಶನ್ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಮೊದಲ ಚಿತ್ರ 'ಕಹೋನಾ ಪ್ಯಾರ್ ಹೈ' ಇರಬಹುದು ಅಥವಾ ನಂತರ ಬಂದ ಕೋಯಿ ಮಿಲ್ ಗಯಾ, ಕ್ರಿಷ್, ಜೋಧಾ ಅಕ್ಬರ್, ಧೂಮ್, ಗುಜಾರಿಶ್ ಹಾಗೂ ಜಿಂದಗಿ ನ ಮಿಲೇಗಿ ದುಬಾರಾ ಇರಬಹುದು. ಚಿತ್ರ ಯಾವುದೇ ಇರಲಿ, ಹೃತಿಕ್ ನಟನೆ ಚೆನ್ನಾಗಿಯೇ ಇರುತ್ತದೆ ಎಂಬುದು ಪ್ರೇಕ್ಷಕರು ಹಾಗೂ ವಿಮರ್ಶಕರ ಅನಿಸಿಕೆ.

  ಆದರೆ ಸ್ವತಃ ಹೃತಿಕ್ ಅಭಿಪ್ರಾಯವೇ ಬೇರೆ. ಅವರ ಪ್ರಕಾರ ಅವರೊಬ್ಬ ಕೆಟ್ಟ ನಟನಂತೆ. ಕಾರಣವನ್ನು ಅವರ ಮಾತುಗಳಲ್ಲೇ ಕೇಳಿ. "ಇಂದಿಗೂ ನನಗೆ ನಟನೆ ಒಲಿದಿಲ್ಲ. ನಾನು ಪಾತ್ರವಾಗಿಯೇ ಬದುಕಬೇಕು, ಆಗ ಮಾತ್ರ ನನಗೆ ಚೆನ್ನಾಗಿ ನಟಿಸಲು ಸಾಧ್ಯವಾಗುತ್ತದೆ. ಆದರೆ ಅದು ನನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಇನ್ನೂ ನಾನು ಯಶಸ್ವಿಯಾಗಿಲ್ಲ" ಎಂದಿದ್ದಾರೆ.

  ಅಮಿತಾಬ್ ನಟನೆಯ ಅಗ್ನಿಪಥ್ ರೀಮೇಕ್ ಚಿತ್ರದಲ್ಲಿ ಸದ್ಯ ನಟಿಸುತ್ತಿರುವ ಹೃತಿಕ್, ವಿಜಯ್ ದೀನನಾಥ್ ಚವ್ಹಾನ್ ಅವರ ಪಾತ್ರವನ್ನು ಪೋಷಿಸುತ್ತಿದ್ದಾರೆ. ಮೂಲ ಪಾತ್ರವನ್ನು ಪೋಷಿಸಿದ ಅಮಿತಾಬ್ ನಿಜವಾಗಿಯೂ ಗ್ರೇಟ್ ಅಂದಿದ್ದಾರೆ ಹೃತಿಕ್. ಈ ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ನಾಯಕಿ. ರಿಷಿ ಕಪೂರ್ ಕೂಡ ನಟಿಸಿದ್ದಾರೆ. (ಏಜೆನ್ಸೀಸ್)

  English summary
  In his 12-year-long career, actor Hrithik Roshan has played myriad roles. Despite taking everyone by surprise with his power-packed acts, Bollywood star, who is set to release his new film Agneepath, still feels that he is a bad actor.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X