ಕರೀನಾ ಕಪೂರ್ ಹೇಳ್ತಾರೆ ಸೈಫ್ ಅಲಿ ಖಾನ್ ದಿ ಬೆಸ್ಟ್

ಆದರೆ ಈ ಕರೀನಾ ಮಾತ್ರ ಹೀಗೇಕೆ? ಆಶ್ಚರ್ಯವೇನೂ ಇಲ್ಲ ಅಂತೀರಲ್ವೇ. ಎಷ್ಟಾದರೂ ಅವರಿಬ್ಬರು ಲವ್ ಮಾಡ್ತಿದಾರೆ. ಸೈಫ್ ಬಿಡೋಕಾಗುತ್ಯೇ? ಅವರೆಲ್ಲರಿಗಿಂತ ಮೇಲ್ಗಡೆ ಹತ್ತಿಸೋಕೆ ನೋಡಿದಾಳೆ ಅಷ್ಟೇ ಅಂತ ನಗ್ತಿದಾರಂತೆ ಬಾಲಿವುಡ್ ಮಂದಿ. ಇದಕ್ಕೇ ಇರ್ಬೇಕು 'ಪ್ರೀತಿಗೆ ಕಣ್ಣಿಲ್ಲ' ಅಂದಿದ್ದು. ಪ್ರೀತಿಗೆ ಕಿವಿಯೂ ಇಲ್ಲ ಅಂತ ಸೇರ್ಸ್ಕೋಂಡ್ಬಿಡಿ ಇನ್ಮೇಲೆ. ಕರೀನಾಗೆ ಬೇಜಾರಾಗ್ಬಾರ್ದು ಅಲ್ವೇ?
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಈ ಬೇಬೊ,"ಖಯಾಮತ್ ಸೆ ಖಯಾಮತ್ ನ ಎಂಟ್ರಿಯಲ್ಲೇ ಅಮೀರ್ ಸಖತ್ ಇಷ್ಟವಾದ್ರು, ಅವರ ಜೊತೆ ಇದ್ರೆ ಸುರಕ್ಷಾ ಭಾವ ಮೂಡುತ್ತೆ. ಸಲ್ಮಾನ್ ಖಾನ್ ಯಾವಾಗಲೂ ಫನ್ನಿಯಾಗಿರ್ತಾರೆ. ಆದ್ರೆ ಶಾರುಖ್ ಬಗ್ಗೆ ಭಕ್ತಿ, ಗೌರವ ಉಕ್ಕಿ ಹರಿಯುತ್ತದೆ." ಎಂದಿದ್ದಾರೆ
ಇನ್ನು ತನ್ನ ಲವರ್ ಸೈಫ್ ಬಗ್ಗೆ ಹೇಳುವಾಗ ಕರೀನಾ ನಗುವಾಗಿದ್ದಾರೆ. "ಸೈಫ್ ಎಲ್ಲರಿಗಿಂತ ಬೆಸ್ಟ್, ಎಲ್ಲರಿಗಿಂತ ಭಿನ್ನ. ಆತ ಸ್ವಂತ ವ್ಯಕ್ತಿತ್ವ ಹೊಂದಿರುವ ಜ್ಞಾನವಂತ. ಸೈಫ್ ಹಳೆಯ ಮದ್ಯದಂತೆ, ಕಾಲ ಕಳೆದಂತೆ ಆತ ಹೆಚ್ಚು ಫ್ರೌಢನಾಗುತ್ತಾನೆ, ಇಷ್ಟವಾಗುತ್ತಾನೆ" ಎಂದಿದ್ದಾರೆ.
ಅವಳ ಮಾತು ಕೇಳಿ ಸೈಫ್ ಆಕಾಶದಲ್ಲಿ ತೇಲಾಡುತ್ತಿದ್ದರೆ ಉಳಿದ ಮೂರು ಖಾನ್ ಗಳು ಇಲ್ಲದ ಮೀಸೆಯಡಿ ನಗುತ್ತಿದ್ದಾರಂತೆ (ಏಜೆನ್ಸೀಸ್)


Click it and Unblock the Notifications











