ಆಫ್ರಿಕಾ ಹುಡುಗನೊಂದಿಗೆ ಕಿಮ್ ಗಪ್ ಚಿಪ್ ಮದುವೆ
ಪಾಂಡ್ಸ್ ಬೆಡಗಿ ಲಿರಿಲ್ ಸೋಪಿನ ಸುಂದರಿ ಕಿಮ್ ಶರ್ಮ ರಹಸ್ಯವಾಗಿ ಆಫ್ರಿಕಾ ಹುಡುಗನನ್ನು ಮದುವೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಆಫ್ರಿಕನ್ ಸಫಾರಿಗೆ ಹೋಗಿದ್ದ ಈಕೆಯ ಕಣ್ಣಿಗೆ ಆಫ್ರಿಕಾದ ಹುಡುಗ ಬಿದ್ದು ಮೊದಲ ನೋಟದಲ್ಲೆ ಪ್ರೇಮ ಪಲ್ಲವಿಸಿದೆ. ಬಳಿಕ ಆತನೊಂದಿಗೆ ರಹಸ್ಯವಾಗಿ ಮದುವೆಯೂ ನಡೆದುಹೋಗಿದೆ.
ಮೂಲಗಳ ಪ್ರಕಾರ, ತಮ್ಮ ಕೈಯಲ್ಲಿ ಈಗಿರುವ ಚಿತ್ರಗಳು ಎಲ್ಲಿ ತಪ್ಪುತ್ತವೋ ಎಂಬ ಮುಂದಾಲೋಚನೆಯಿಂದ ಈಕೆ ಮದುವೆ ಸುದ್ದಿಯನ್ನು ಗೌಪ್ಯವಾಗಿಟ್ಟಿದ್ದರು ಎನ್ನಲಾಗಿದೆ. ಆದರೆ ಇದು ಹೇಗೋ ಬಾಲಿವುಡ್ ಕಿವಿಗೆ ಗುಲ್ಲಾಗಿದೆ . ಬಾಲಿವುಡ್ ನ ಯಶಸ್ವಿ ಚಿತ್ರ 'ಮೊಹಬ್ಬತೆ' ಚಿತ್ರದ ಮೂಲಕ ಗಮನಸೆಳೆದಿದ್ದ ಈಕೆ ಬಳಿಕ ತೆಲುಗು, ತಮಿಳು ಚಿತ್ರಗಳಲ್ಲು ಅಭಿನಯಿಸಿದ್ದಾರೆ.
ಈ ಹಿಂದೆ ಕ್ರಿಕೆಟಿಗೆ ಯುವರಾಜ್ ಸಿಂಗ್ ಜೊತೆ ಈ ಕೆಯ ಹೆಸರು ಕೇಳಿಬಂದಿತ್ತು. ಬಳಿಕ ಬೇರೆ ಕ್ರಿಕೆಟಿಗರೊಂದಿಗೂ ಈಕೆಯ ಹೆಸರು ತಳುಕು ಹಾಕಿಕೊಂಡಿದ್ದು ಸುದ್ದಿಯಾಗಿತ್ತು. ನಟನೆಯ ಜೊತೆ ಜೊತೆಗೆ ಪೆಪ್ಸಿ, ಪಾಂಡ್ಸ್, ಫೇರ್ ಅಂಡ್ ಲವ್ಲಿ, ಲಿರಿಲ್ ಸೇರಿದಂತೆ ಹಲವಾರು ಉತ್ಪನ್ನಗಳ ಜಾಹೀರಾತುಗಳಲ್ಲೂ ಈಕೆ ಕಾಣಿಸಿಕೊಂಡಿದ್ದಾರೆ.


Click it and Unblock the Notifications











