»   » ಇಂದಿರಾಗಾಂಧಿಯಾಗಿ ಮಾಧುರಿ ದೀಕ್ಷಿತ್!

ಇಂದಿರಾಗಾಂಧಿಯಾಗಿ ಮಾಧುರಿ ದೀಕ್ಷಿತ್!

Subscribe to Filmibeat Kannada

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಈಗೇನು ಮಾಡುತ್ತಿದ್ದಾರೆ? ಗಂಡ ಮಕ್ಕಳೊಂದಿಗೆ ಹಾಯಾಗಿ ವಾಷಿಂಗ್ಟನ್ ನಲ್ಲಿ ಕಾಲಕಳೆಯುತ್ತಿದ್ದಾರೆ ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಪಾತ್ರಕ್ಕಾಗಿ ಆಕೆ ಸಿದ್ಧವಾಗುತ್ತಿದ್ದಾರೆ. 'ಮದರ್ : ದ ಇಂದಿರಾ ಗಾಂಧಿ ಸ್ಟೋರಿ' ಎಂಬ ಚಿತ್ರದಲ್ಲಿ ಮಾಧುರಿ ಬಣ್ಣ ಹಚ್ಚಿಕೊಳ್ಳಲು ಮುಂದಾಗಿದ್ದಾರೆ.

ಕೃಷ್ಣ ಶಾ ನಿರ್ದೇಶಿಸುತ್ತಿರುವ ಈ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಕಾಣಲಿದೆ. ಮೊದಲ ಭಾಗ 2011ಕ್ಕೆ ಬಿಡುಗಡೆಯಾಗುತ್ತಿದ್ದು ಅದಾದ ಏಳೆಂಟು ತಿಂಗಳಲ್ಲಿ ಎರಡನೇ ಭಾಗ ತೆರೆಗೆ ಕಾಣಲಿದೆ. ಈ ಚಿತ್ರ ಬಹುಭಾಷಾ ಚಿತ್ರವಾಗಿದ್ದು ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರ ಸಿದ್ಧವಾಗಲಿದೆ ಎನ್ನುತ್ತಾರೆ ಶಾ.

ಇಂದಿರಾಗಾಂಧಿ ಅವರ ಜೀವನ ಕುರಿತು ಒಂದೇ ಒಂದು ಚಿತ್ರದಲ್ಲಿ ತೋರಿಸುವುದು ಸಾಧ್ಯವಾಗದ ಮಾತು. ಇದೊಂದು ಕುತೂಹಲ ಹಾಗೂ ನಾಟಕೀಯ ದೃಶ್ಯಗಳನ್ನು ಒಳಗೊಂಡ ಚಿತ್ರ ಎನ್ನುತ್ತಾರೆ ಶಾ. 'ಮದರ್' ಚಿತ್ರ 2010ಕ್ಕೆ ಭಾರತದಲ್ಲಿ ಚಿತ್ರೀಕರಣ ಆರಂಭಿಸಲಿದೆ. ಚಿತ್ರದ ಕೆಲವೊಂದು ಭಾಗಗಳನ್ನು ಯುಎಸ್, ಯುಕೆ ಮತ್ತು ರಷ್ಯಾಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಶಾ ವಿವರ ನೀಡಿದ್ದಾರೆ.

ಮೂಲತಃ ಚಿತ್ರಕತೆಗಾರರಾದ ಕೃಷ್ಣ ಶಾ ಅವರು ಕಳೆದ 23 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರದ ಬಜೆಟ್ ಬಗ್ಗೆ ಕೇಳಿದರೆ, ಇದೊಂದು ಭಾರಿ ಬಜೆಟ್ ಚಿತ್ರವಾಗಲಿದೆ ಎಂಬುದು ಕೃಷ್ಣ ಶಾ ಅವರ ವಿವರಣೆ. ಒಟ್ಟಿನಲ್ಲಿ ಕಾಕತಾಳೀಯ ಎಂಬಂತೆ ದಿವಂಗತ ಇಂದಿರಾ ಗಾಂಧಿ ಅವರ 92 ಜನ್ಮದಿನೋತ್ಸವದಂದೇ ಈ ಚಿತ್ರ ಪ್ರಕಟವಾಗಿರುವುದು ವಿಶೇಷ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada