ಕೇರಳದಲ್ಲಿ ಮಲ್ಲಿಕಾ ಶೆರಾವತ್ ನಾಗಪೂಜೆ
ಮಾದಕ ಚೆಲುವೆ ಮಲ್ಲಿಕಾ ಶೆರಾವತ್ ಕೇರಳದ ದಟ್ಟ ಕಾನನಗಳಲ್ಲಿರುವ ಶ್ರೀನಾಗರಾಜ ಮಂದಿರಕ್ಕೆ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮಂದಿರ ಕೇರಳದ ಅಲಫುಜಾ ಜಿಲ್ಲೆಯ ಮನ್ನಾರಸಾಲ ಬಳಿ ಇದೆ. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ 'ಹಿಸ್ಸ್' ಚಿತ್ರ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಈ ವಿಶೇಷ ಪೂಜೆ ಸಲ್ಲಿಸಿದ್ದಾಗಿ ತಿಳಿದುಬಂದಿದೆ.
ಇದೊಂದು ಹಾರರ್ ಚಿತ್ರವಾಗಿದ್ದು ನಾಗಕನ್ಯೆಯಾಗಿ ಮಲ್ಲಿಕಾ ಶೆರಾವತ್ ಕಾಣಿಸಲಿದ್ದಾರೆ. ವೈಜ್ಞಾನಿಕ ಉದ್ದೇಶಕ್ಕಾಗಿ ಭಾರತದ ಅರಣ್ಯಕ್ಕೆ ಬರುವ ಅಮೆರಿಕದ ವಿಜ್ಞಾನಿಯೊಬ್ಬ ಗಂಡು ನಾಗರ ಹಾವನ್ನು ಸೆರೆಹಿಡಿದು ಲ್ಯಾಬ್‌ಗೆ ತರುತ್ತಾನೆ. ಅಲ್ಲಿಂದ ಕಥೆಯ ಭಯಾನಕತೆ ಬಿಚ್ಚಿಕೊಳ್ಳುತ್ತದೆ.
ತನ್ನ ಪ್ರೇಮಿಯನ್ನು ಹುಡುಕಾಡುತ್ತಾ ನಗರಕ್ಕೆ ಬರುವ ನಾಗಕನ್ಯೆ ತನ್ನ ಸೇಡನ್ನು ತೀರಿಸುವುದಕ್ಕೆ ಹೊರಡುವುದು ಚಿತ್ರ ಕಥೆಯ ಸಾರಾಂಶ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮಲ್ಲಿಕಾ ಶೆರಾವತ್ ಅಲ್ಲದೆ ಇರ್ಫಾನ್ ಖಾನ್, ಜೆಫ್ ಡಚೆಟ್, ದಿವ್ಯಾ ದತ್ತಾ, ರಾಮನ್ ಟ್ರಿಖಾ ಮುಂತಾದವರಿದ್ದಾರೆ. ಚಿತ್ರಕ್ಕೆ ಅನು ಮಲಿಕ್ ಸಂಗೀತ ನೀಡಿದ್ದಾರೆ.
ಒಟ್ಟಿನಲ್ಲಿ ಮಲ್ಲಿಕಾ ಶೆರಾವತ್ ಮಾದಕ ಭಂಗಿಯ ಸುತ್ತಮುತ್ತ್ತ ಹೆಣೆಯುತ್ತಿರುವ ಚಿತ್ರ ಇದಾಗಿದೆ. ಈಗಾಗಲೆ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ಗಳು ಮೈನವಿರೇಳಿಸುವಂತಿವೆ. ಚಿತ್ರದಲ್ಲಿ ಮಲ್ಲಿಕಾ ಶೆರಾವತ್ ಜೀವಂತ ಹಾವಿಗೆ ಫ್ರೆಂಚ್ ಕಿಸ್ ಕೊಟ್ಟಿರುವುದು ಸುದ್ದಿಯಾಗಿತ್ತು.


Click it and Unblock the Notifications











