ಅಂತರ್ಜಾಲ ಅಶ್ಲೀಲ ತಾಣ : ಪ್ರೀತಿ ದೇಸಾಯಿ
ಅಂತರ್ಜಾಲದಲ್ಲಿ ತನ್ನ ಅರೆ ಬೆತ್ತಲೆಯ ಚಿತ್ರಗಳು ಯಾವುದೇ ಎಗ್ಗಿಲ್ಲದೆ ಹರಿದಾಡುತ್ತಿರುವುದನ್ನು ಕಂಡು ಸೌಂದರ್ಯ ಸ್ಪರ್ಧೆ ವಿಜೇತೆ, ನವ ನಟಿ ಪ್ರೀತಿ ದೇಸಾಯಿ 'ಅಂತರ್ಜಾಲದಲ್ಲಿ ಜಾಲಾಡುತ್ತಿರುವುದೆಲ್ಲ ಶಾಂತಂ ಪಾಪಂ, ನಾನು ನೋಡಬಾರದ್ದೆಲ್ಲ ಅಲ್ಲಿ ಕಾಣಿಸುತ್ತಿದೆ' ಎಂದು ಮೂಗೆಳೆದಿದ್ದಾಳೆ. 2006ರ ಮಿಸ್ ಗ್ರೇಟ್ ಬ್ರಿಟನ್ ವಿಜೇತೆ ಜತೆಗೆ ಪ್ರೀತಿ ರೂಪದರ್ಶಿಯೂ ಹೌದು.
ನಟಿಮಣಿಯರ ವಸ್ತ್ರಾಪಹರಣ ಇಂದು ನಿನ್ನೆಯದ್ದಲ್ಲ. ಅದು ಕತ್ರಿನಾ ಕೈಫ್ ಆದರೂ ಆಗಿರಬಹುದು ಮಲ್ಲಿಕಾ ಶೆರಾವತ್ ಆದರೂ ಆಗಿರಬಹುದು ಈ ರೀತಿ ನೆಟ್ ಕರಚಳಕ್ಕೆ ಯಾರು ಬೇಕಾದರೂ ಆಹಾರವಾಗಬಹುದು. ಹಲವರು ಇದರ ಬಗ್ಗೆ ಕಿಡಿಕಾರಿದರೆ ಕೆಲವರು ಬಿಟ್ಟಿ ಪ್ರಚಾರ ಆಯ್ತಲ್ಲ ಎಂದು ಒಳಗೊಳಗೇ ಸಂತಸ ಪಡುವುದೂ ಉಂಟು.
ಇದೀಗ, ಅಭಯ್ ಡಿಯೋಲ್ ಗೆಳತಿಯಾಗಿ ಗಾಸಿಫ್ ಕಾಲಂಗಳಿಗೆ ಆಹಾರವಾಗಿದ್ದ ಪ್ರೀತಿ ದೇಸಾಯಿ ಎಂಬ ಬೆಡಗಿ, ಒಂದೆರಡು ದಿನದಿಂದ ತನ್ನ ಬೆತ್ತಲೆಯ ಚಿತ್ರಗಳು ಹರಿದಾಡುತ್ತಿರುವುದನ್ನು ಕಂಡು ದಂಗಾಗಿದ್ದಾಳೆ. ನಾನು ಅಪ್ಪಿ ತಪ್ಪಿಯೂ ಇಂತಹ ಚಿತ್ರಗಳಿಗೆ ಪೋಸ್ ಕೊಟ್ಟವಳಲ್ಲ. ಇದೆಲ್ಲ ಏನು? ಎಂದು ಗೋಳಾಡಿದ್ದಾಳೆ. ಅಂದಹಾಗೆ ಪ್ರೀತಿ, 'ಶೋರ್ ಇನ್ ದಿ ಸಿಟಿ' ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾಳೆ. ಸೆಂಥಿಲ್ ರಾಮಮೂರ್ತಿಯ ಎದುರು ಶಾಲ್ಮಲಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.
;

Click it and Unblock the Notifications











