ಸಲ್ಮಾನ್ ಗೆ ಹಾರ್ಟ್ ಪ್ರಾಬ್ಲಂ ಅಂತೆ ಹೌದೇ?
ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹೃದಯ ತೊಂದರೆ ಉಂಟಾಗಿದೆ. ಗುರುವಾರ ರಾತ್ರಿ ಮುಂಬೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ ಎಂದು ಹಿಂದಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಸಲ್ಮಾನ್‌ಗೆ ಏಂಜಿಯೋಗ್ರಫಿ(Angiography or arteriography) ಕೂಡ ಮಾಡಲಾಗುತ್ತದೆ. ಹೃದಯದ ರಕ್ತನಾಳದಲ್ಲಿ ತೊಂದರೆ ಉಂಟಾದ ಕಾರಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಆದರೆ ಇದನ್ನು ನಿರಾಕರಿಸಿರುವ ಸಲ್ಮಾನ್ ಖಾನ್ ಸೋದರ ಸೊಹೇಲ್ ಖಾನ್, ಸಲ್ಮಾನ್ ದೊಡ್ಡ ಮಟ್ಟದ ಚಿಕಿತ್ಸೆ ಏನು ನೀಡಲಾಗುತ್ತಿಲ್ಲ. ಅವರ ಆರೋಗ್ಯಕ್ಕೇನೂ ಸಮಸ್ಯೆಯಿಲ್ಲ ಎಂದಿದ್ದಾರೆ.
ಬಾಡಿಗಾರ್ಡ್ ಚಿತ್ರದ ನಿರ್ಮಾಪಕ, ಸಲ್ಮಾನ್ ತಂಗಿ ಗಂಡ ಅತುಲ್ ಅಗ್ನಿಹೋತ್ರಿ ಮಾತನಾಡಿ, ಸಲ್ಮಾನ್ ಆರೋಗ್ಯದ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸುವುದು ಬೇಡ. ಹೃದಯ ತೊಂದರೆ ಇದ್ದರೂ ರಕ್ತನಾಳ, ಕವಾಟಗಳ ಇಮೇಜಿಂಗ್ ನಡೆಸಿ ಪರೀಕ್ಷಿಸಲಾಗುತ್ತದೆ ಇದು ಸಾಮಾನ್ಯವಾಗಿ ನಡೆಯುವ ಪರೀಕ್ಷೆಗಳು, ಅಭಿಮಾನಿಗಳು ಗಾಬರಿಯಾಗಬೇಕಿಲ್ಲ ಎಂದಿದ್ದಾರೆ.
ದಿನವಿಡೀ ಯಶ್ ರಾಜ್ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಸಲ್ಮಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲದಿರುವುದು ಅಭಿಮಾನಿಗಳ ಆತಂಕ ಇನ್ನಷ್ಟು ಹೆಚ್ಚಿಸಿತ್ತು. ಆದರೆ, ಸಲ್ಮಾನ್ ಗೆ ಏನು ಆಗಿಲ್ಲ ಇದು ಗಾಳಿಸುದ್ದಿ ಎಂದು ಅವರ ಸೋದರರು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











