ಚಳ್ಳೆಹಣ್ಣು ತಿನ್ನಿಸುವ ಹೊಸ ವಿದ್ಯೆ ಕಲಿತ ಅಮೀರ್ ಖಾನ್
ಬಾಲಿವುಡ್ ನ ಮಿ. ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳುವ ಅಮೀರ್ ಖಾನ್, ಈಗ ಇನ್ನೂ ಹೆಚ್ಚು ಪರ್ಫೆಕ್ಟ್ ಆಗಲು ಹೊರಟಿದ್ದಾರೆ. 'ಧೂಮ್ 3' ಚಿತ್ರಕ್ಕಾಗಿ ಹೊಸ ಕೈಚಳಕ ಕಲಿಯಲು ತೊಡಗಿರುವ ಅಮೀರ್, ಅದಕ್ಕಾಗಿ ಸಾಕಷ್ಟು ಶ್ರಮ ಪಡುತ್ತಿದ್ದಾರಂತೆ. ಆ ವಿದ್ಯೆಯ ಹೆಸರು ಪಾರ್ಕೌರ್. ಅದು ಮಾಡಲು ಕಷ್ಟ, ನೋಡಲು ಚೆಂದ.
ಅತಿ ವೇಗವಾಗಿ ಹೋಗುತ್ತಿರುವಾಗ ಅಡೆತಡೆಗಳು ಬಂದರೆ ಅದನ್ನು ಸಮರ್ಥವಾಗಿ ಎದುರಿಸುವ ಅಥವಾ ಅದನ್ನು ದಾಟುವ ವಿಶೇಷ ವಿದ್ಯೆ. ನಟರಿಗೆ ಸಿನಿಮಾದಲ್ಲಿ ವಿಲನ್ ಗಳನ್ನು ಚೇಸಿಂಗ್ ಮಾಡುವಾಗ ಈ ವಿದ್ಯೆಯ ಬಳಕೆ ನೆರವಾಗುತ್ತದೆ. ತಪ್ಪಿಸಿಕೊಳ್ಳಲು ನೂರೆಂಟು ತಂತ್ರ ಮಾಡುವ ವಿಲನ್ ಪ್ರಯತ್ನವನ್ನೆಲ್ಲಾ ಈ 'ಪಾರ್ಕೌರ್' ವಿದ್ಯೆಯಿಂದ ನಾಯಕ ಮಟ್ಟಹಾಕಬಹುದು.
ಇಂತಿಪ್ಪ ಈ ವಿದ್ಯೆಯನ್ನು ಈಗಾಗಲೇ 'ಕ್ರಿಷ್' ಗಾಗಿ ಹೃತಿಕ್, ಹಾಗೂ 'ಚಾಂದನಿ ಚೌಕ್ ಟು ಚೈನಾ' ಹಾಗೂ 'ಸಿಂಗ್ ಈಸ್ ಕಿಂಗ್' ಚಿತ್ರಕ್ಕಾಗಿ ಚಿತ್ರಕ್ಕಾಗಿ ಅಕ್ಷಯ್ ಪ್ರದರ್ಶಿಸಿದ್ದಾರೆ. ಆದರೆ ಈ ವಿದ್ಯೆಯಿಂದ ಇಷ್ಟು ದಿನ ಅಮೀರ್ ದೂರವಿದ್ದರು. ಈಗ ಹೊಸ ವರಸೆ ತೋರಿಸುವ ಕಾಲ ಕೂಡಿ ಬಂದಿದೆ. ಧೂಮ್ 3 ನಲ್ಲಿ ಅಮೀರ್, ವಿಲನ್ ಗೆ ಚಳ್ಳೆಹಣ್ಣು ತಿನ್ನಿಸಲು ಕಾದಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











