33ವರ್ಷದ ವಜ್ರದ ವ್ಯಾಪಾರಿ ಹಿಂದೆ ಬಿದ್ದ ಮಲೈಕಾ ಅರೋರಾ?19ವರ್ಷ ಚಿಕ್ಕವನ ಜೊತೆ ಸಲ್ಮಾನ್ ಖಾನ್ ಮಾಜಿ ಅತ್ತಿಗೆಯ ಮದುವೆ?

ಚಿತ್ರರಂಗದಲ್ಲಿ ಲವ್ವು ಮತ್ತು ಬ್ರೇಕಪ್ಪು ತುಂಬಾನೇ ಕಾಮನ್ನು. ಇವತ್ತು ಅಂಟಿಕೊಂಡು ತಿರುಗೋರು, ನಾಳೆ ದಿನ ಮುಖ ಗಂಟಾಕಿಕೊಂಡು ಓಡಾಡುತ್ತಾರೆ. ಅದರ ಮಾರನೇ ದಿನ ಮತ್ತೊಬ್ಬರ ಸಾಂಗತ್ಯವನ್ನೂ ಬೆಳಿಸಿಕೊಳ್ಳುತ್ತಾರೆ. ಈ ಸಾಲಿನಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುವ ಏಕೈಕ ವ್ಯಕ್ತಿ ಅಂದರೆ ಅದು ಮಲೈಕಾ ಅರೋರಾ ಅಂದರೆ ಅದು ತಪ್ಪಾಗಲಿಕ್ಕಿಲ್ಲ. ಯಾಕೆಂದರೆ.. ಮಲೈಕಾ ಒಂದು ದಿನ ಪ್ರೇಮದ ಅಮಲಿನಲ್ಲಿ ತೂರಾಡಿದರೆ...

ಮತ್ತೊಂದು ದಿನ ಬ್ರೇಕಪ್ ನೋವಲ್ಲಿ ವಾಲಾಡುತ್ತಾರೆ. ಹೌದು.. ಅರ್ಜುನ್ ಕಪೂರ್‌ಗಾಗಿ ಅರ್ಬಾಜ್ ಖಾನ್‌ಗೆ ತಲಾಖ್ ನೀಡಿದ್ದ ಮಲೈಕಾ, ಆ ನಂತರ ಅರ್ಜುನ್ ಕಪೂರ್ ಅವರಿಂದ ದೂರವಾದರು. ಆರು ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟರು. ಅರ್ಜುನ್ ಕಪೂರ್ ನಿರ್ಗಮನದಿಂದ ಮತ್ತೆ ಬಿಳಿ ಹಾಳೆಯಂತೆ ಆಗಿದ್ದ ಮಲೈಕಾ ಬದುಕಿನಲ್ಲಿ ಮತ್ತೆ ಪ್ರೀತಿಯ ಬಣ್ಣ ತುಂಬುವ ಪ್ರಯತ್ನವನ್ನು ಹಲವಾರು ಜನ ಮಾಡಿದರು.

19-Year Gap Malaika Arora Finds New Love With Harsh Malhotra Viral Video Sparks Dating Rumours

ಇದಕ್ಕೆ ಪುರಾವೆ ಎನ್ನುವಂತೆ ಕೆಲ ದಿನಗಳ ಹಿಂದೆ ಅನಾಮಿಕ ವ್ಯಕ್ತಿಯ ಜೊತೆ ಮಲೈಕಾ ಹೆಸರು ತಳಕು ಹಾಕಿಕೊಂಡಿತ್ತು. ಸ್ಪೇನ್‌ ನಲ್ಲಿ ಇಬರಿಬ್ಬರ ಖಾಸಗಿ ಕ್ಷಣದ ಫೋಟೊಗಳು ವೈರಲ್ ಅಗಿದ್ದವು. ಸಾಕ್ಷಾತ್ ಮಲೈಕಾ ಅರೋರಾ ಅವರೇ ತಮ್ಮ ಈ ಫೋಟೋಗಳನ್ನು ಹಂಚಿಕೊಂಡಿದ್ದರು.

ಆ ನಂತರ ಶ್ರೀಲಂಕಾ ಕ್ರಿಕೆಟ್ ತಂಡದ ದಂತಕಥೆ ಕುಮಾರ್ ಸಂಗಕ್ಕಾರ ಮತ್ತು ಮಲೈಕಾ ಅರೋರಾ ಯಗಳ ಗೀತೆ ಹಾಡುತ್ತಿದ್ದಾರೆ ಎನ್ನುವ ಸುದ್ದಿ ಬಂತು. ಇಬ್ಬರು ಅಕ್ಕ ಪಕ್ಕ ಕುಳಿತು ಮ್ಯಾಚ್ ನೋಡುತ್ತಿದ್ದ ಫೋಟೊ ಕೂಡ ವೈರಲ್ ಆಯ್ತು.

ಇದರ ನಡುವೆ ವೃತ್ತಿಯಲ್ಲಿ ಸ್ಟೈಲಿಸ್ಟ್. ಫ್ಯಾಷನ್ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ರಾಹುಲ್ ವಿಜಯ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಪೂರಕವಾಗಿ ಮುಂಬೈನಲ್ಲಿ ನಡೆದ ಪಂಜಾಬಿ ಗಾಯಕ ಎ.ಪಿ. ದಿಲ್ಲೋನ್ ಅವರ ಸಂಗೀತ ಸಂಜೆಗೆ ರಾಹುಲ್ ವಿಜಯ್ ಜೊತೆ ಮಲೈಕಾ ಅರೋರಾ ಹೋಗಿದ್ದರು. ಹಾಡು ಕೇಳುತ್ತಾ ಕುಣಿದಿದ್ದರು. ಸಖತ್ ಎಂಜಾಯ್ ಮಾಡಿದ್ದರು.

ಹೀಗೆ ಕಾಲ ಕಾಲಕ್ಕೆ ಹಲವರ ಜೊತೆ ಕೇಳಿ ಬಂದ ಮಲೈಕಾ ಅರೋರಾ ಹೆಸರು ಸದ್ಯ ಹರ್ಷ್ ಮೆಹ್ತಾ ಜೊತೆ ಓಡಾಡುತ್ತಿದೆ. ಹರ್ಷ್ ಮೆಹ್ತಾ ಅವರನ್ನು ಮಲೈಕಾ ಅರೋರಾ ಪ್ರೀತಿಯಿಂದ ಗುರಾಯಿಸುತ್ತಿರುವ ಫೋಟೊ ಮತ್ತು ಹರ್ಷ್ ಮೆಹ್ತಾ ಹಾಗೂ ಮಲೈಕಾ ಕಣ್ಸನ್ನೆಯ ಫೋಟೊ ಮತ್ತು ವಿಡಿಯೋ ವೈರಲ್ ಆಗಿದೆ.

19-year-gap-malaika-arora-finds-new-love-with-harsh-malhotra-viral-video-sparks-dating-rumours

ಆ ಪ್ರಕಾರ ನೋಡುವುದಾದರೆಸಲ್ಮಾನ್ ಖಾನ್ ಮಾಜಿ ಅತ್ತಿಗೆ ಮಲೈಕಾ ಸದ್ಯ ತಮಗಿಂತ 19 ವರ್ಷ ಚಿಕ್ಕವನಾದ ಹರ್ಷ್‌ ಮೆಹ್ತಾಗೆ ಮನ ಸೋತಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಮುಂಬೈನ ಎಂಎಂಆರ್‌ಡಿಎ ಗ್ರೌಂಡ್‌ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕ ಎನ್ರಿಕ್ ಇಗ್ಲೇಷಿಯಸ್ ಅವರ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಅವರು ಹರ್ಷ್ ಮೆಹ್ತಾ ಜೊತೆ ಕಾಣಿಸಿಕೊಂಡಿದ್ಧಾರೆ.

ಇನ್ನೂ ಈ ಸಂಗೀತ ಸಂಜೆಯಲ್ಲಿ ಮಲೈಕಾ ಅರೋರಾ ಅವರ ಹಾವ ಭಾವ - ಕಣ್ಸನ್ನೆ.. ಕಣ್ಣೋಟ.. ಇವೆಲ್ಲವೂ ನೋಡುತ್ತಿದ್ದರೆ, ಸದ್ಯ ಕೇಳಿ ಬರುತ್ತಿರುವ ಮಾತು ನಿಜಾ ಎಂಬ ಭಾವನೆ ಎಂಥವರಲ್ಲಾದರೂ ಬರುತ್ತೆ. ಅಷ್ಟರ ಮಟ್ಟಿಗೆ ಇಬ್ಬರ ನಡುವೆ ಆತ್ಮೀಯತೆ ಕಂಡು ಬಂದಿದೆ. ಸಂತೋಷದಿಂದ ಇಬ್ಬರು ಕಾಲ ಕಳೆಯುತ್ತಿರುವುದನ್ನು ಕಂಡು ಒಂದು ವರ್ಗದ ನಿದ್ದೆಗೆ ಕೊಳ್ಳಿ ಬಿದ್ದಿದೆ.

ಈ ಎಲ್ಲ ಬೆಳವಣಿಗೆಗೆ ಕೈಗನ್ನಡಿ ಎಂಬಂತೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಲೈಕಾ ಮತ್ತು ಹರ್ಷ್‌ ಸಂಬಂಧದ ಕುರಿತು ಚರ್ಚೆಯಲ್ಲಿದೆ. ಅಂದ್ಹಾಗೇ ಮಲೈಕಾ ಮನ ಕದ್ದ ಹರ್ಷ್‌ ವಜ್ರದ ವ್ಯಾಪಾರಿ ಎನ್ನುವ ಮಾಹಿತಿ ಇದೆ. ರಾಷ್ಟ್ರೀಯ ಮಾಧ್ಯಮಗಳು ಕೂಡ ಹರ್ಷ ಅವರನ್ನು ವಜ್ರದ ವ್ಯಾಪಾರಿಯೆಂದೇ ಉಲ್ಲೇಖಿಸಿವೆ. ಈ ಹಿನ್ನೆಲೆ ಹಲವರಲ್ಲಿ ಕುತೂಹಲ ಗರಿಗೇದರಿದೆ. ಇಬ್ಬರ ಈ ಸಂಬಂಧ ಮುಂದುವರೆಯುತ್ತಾ..? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ.

More from Filmibeat

English summary
Malaika Arora is linked to diamond merchant Harsh Malhotra, 19 years her junior, after a viral concert video. See the clip & details!
Read more about: malaika arora love rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X