For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ಡರ್ಟಿ ಪಿಕ್ಚರ್‌ಗೆ ಬೆಸ್ಟ್ ಪಿಕ್ಚರ್ ಅವಾರ್ಡ್

  By Rajendra
  |

  ಏಕ್ತಾ ಕಪೂರ್ ನಿರ್ದೇಶನದ ವಿದ್ಯಾ ಬಾಲನ್ ಮುಖ್ಯಭೂಮಿಕೆಯಲ್ಲಿದ್ದ 'ದಿ ಡರ್ಟಿ ಪಿಕ್ಚರ್' ಚಿತ್ರಕ್ಕೆ ಬೆಸ್ಟ್ ಪಿಕ್ಚರ್ ಅವಾರ್ಡ್ ಲಭಿಸಿದೆ. ವಿದ್ಯಾರ ಬೋಲ್ಡ್ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿಯೂ ಪ್ರಾಪ್ತವಾಗಿದೆ. ಈ ಪ್ರಶಸ್ತಿಯನ್ನು ನ್ಯಾಶನಲ್ ಮೀಡಿಯಾ ನೆಟ್‌ವರ್ಕ್ ಹಾಗೂ ಸ್ವತಂತ್ರ ಪತ್ರಕರ್ತರ ಸಂಘ ಜಂಟಿಯಾಗಿ ನೀಡಿದೆ.

  ಜನವರಿ 21ರಂದು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. 'ದಿ ಡರ್ಟಿ ಪಿಕ್ಚರ್' ಜೊತೆಗೆ 'ಸಿಂಗಂ' ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಅಜಯ್ ದೇವಗನ್ ಹಾಗೂ 'ಡಾನ್ 2' ಚಿತ್ರದ ನಿರ್ದೇಶನಕ್ಕೆ ಫರಾನ್ ಅಕ್ತರ್ ಅವರಿಗೆ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

  ಚಿತ್ರ ನಿರ್ಮಾಪಕ ರಮೇಶ್ ಸಿಪ್ಪಿ, ಗೀತ ಸಾಹಿತಿ ಗುಲ್ಜಾರ್ ಹಾಗೂ ಫಿಲಂ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಟಿ ಪಿ ಅಗರವಾಲ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಾರ್ವಕಾಲಿಕ ಹೀರೋ (ದಿ ಹೀರೋ ಆಫ್ ಆಲ್ ಟೈಮ್) ಪ್ರಶಸ್ತಿಗೆ ಅನಿಲ್ ಕಪೂರ್ ಅವರು ಆಯ್ಕೆಯಾಗಿದ್ದಾರೆ. ಎನ್‌ಡಿಟಿವಿಗೆ 'ಅತ್ಯುತ್ತಮ ಹಿಂದಿ ಚಾನಲ್' ಪ್ರಶಸ್ತಿ ಲಭಿಸಿದೆ. (ಎಜೆನ್ಸೀಸ್)

  English summary
  Ekta Kapoor’s ‘The Dirty Pcture’ is awarded as ‘The Best Picture’ and the the actress Vidya Balan for her mindblowing performance is awarded as ‘The Best Actress’ at The Eighteenth National Media Network Film and TV awards. ವಿದ್ಯಾ ಬಾಲನ್ ಡರ್ಟಿ ಪಿಕ್ಚರ್‌ಗೆ ಬೆಸ್ಟ್ ಪಿಕ್ಚರ್ ಅವಾರ್ಡ್

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X