ಜಾಕಿ ಜೊತೆ ನಿಧಿ ಸುಬ್ಬಯ್ಯ ಅಜಬ್ ಗಜಬ್ ಲವ್
'ಅಣ್ಣಾಬಾಂಡ್' ಗರ್ಲ್ ಪಂಚರಂಗಿ ಬೆಡಗಿ ನಿಧಿಸುಬ್ಬಯ್ಯಗೆ ಅವಕಾಶಗಳ ಸುರಿಮಳೆಯಾಗುತ್ತಿದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಂತೂ ಖಂಡಿತ ಅಲ್ಲವೇ ಅಲ್ಲ. ಬಾಲಿವುಡ್‌ನಲ್ಲಿ ಚಾನ್ಸ್ ಮೇಲೆ ಚಾನ್ಸ್ ಗಿಟ್ಟಿಸುತ್ತಿದ್ದಾರೆ ನಿಧಿ ಸುಬ್ಬಯ್ಯ. ಮೂಲಗಳ ಪ್ರಕಾರ ಐದು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ನಿಧಿಗೆ ನಿಧಿ ಸಿಕ್ಕಂತಾಗಿದೆ.
ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಜೊತೆಗಿನ 'ಓ ಮೈ ಗಾಡ್' ಚಿತ್ರಕ್ಕೆ ಸಹಿಹಾಕಿದ ಬಳಿಕ ಈಗ ಮತ್ತೊಂದು ಚಿತ್ರ ಹುಡುಕಿಕೊಂಡು ಬಂದಿದೆ. ಆ ಚಿತ್ರದ ಹೆಸರು 'ಅಜಬ್ ಗಜಬ್ ಲವ್'. ಚಿತ್ರದ ನಾಯಕ ನಟ ಜಾಕಿ ಬಗ್‌ನಾನಿ. ಅಕ್ಕಿ ಜೊತೆಗಿನ 'ಓಂ ಮೈ ಗಾಡ್' ಚಿತ್ರ ಹೆಚ್ಚುಕಡಿಮೆ ಯೋಗರಾಜ್ ಭಟ್ಟರ 'ಪಂಚರಂಗಿ' ಚಿತ್ರವನ್ನು ಹೋಲುತ್ತದಂತೆ.

"ಬಾಲಿವುಡ್‌ನಲ್ಲಿ ಬಂದ ಚಿತ್ರಗಳನ್ನೆಲ್ಲಾ ಒಪ್ಪಿಕೊಳ್ಳಲ್ಲ. ವಿಭಿನ್ನ ಪಾತ್ರಗಳುಳ್ಳ ಚಿತ್ರಗಳು ಬಂದರೆ ಬಿಡಲ್ಲ" ಎಂದಿದ್ದಾರೆ ನಿಧಿ ಸುಬ್ಬಯ್ಯ. ಒಟ್ಟಾರೆಯಾಗಿ 'ಅಜಬ್ ಗಜಬ್ ಲವ್' ಚಿತ್ರ ಡಿಫರೆಂಟ್ ಆಗಿದೆಯಂತೆ. ಪುನೀತ್ ರಾಜ್ ಕುಮಾರ್ ಜೊತೆಗಿನ 'ಅಣ್ಣಾಬಾಂಡ್' ಬಳಿಕ ನಿಧಿ ಸುಬ್ಬಯ್ಯ ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











