ಬಾಲಿವುಡ್ ನಲ್ಲಿ ಸಲ್ಮಾನ್ ಬಾಡಿನೇ ಬೆಸ್ಟ್ : ಅಜಯ್ ದೇವಗನ್

By Mahesh

ಸಲ್ಮಾನ್ ಖಾನ್ ಕಂಡ್ರೆ ಯಾಕೋ ಎಲ್ಲರೂ ಕಿಡಿ ಕಾರುವವರೇ, ಆದ್ರೆ, ಯಾರೇ ಕೂಗಾಡಲಿ, ಊರೇ ಹೋರಾಡಲಿ ನಾನು ಹೀಗೆನೇ ಎನ್ನುವ ಜಾಯಮಾನ ಸಲ್ಮಾನದ್ದು. ಇತ್ತೀಚೆಗೆ ಅಸಲಿ ಆಕ್ಷನ್ ಹೀರೋ ಅಜಯ್ ದೇವಗನ್ ಅವರ ಮೈಕಟ್ಟು ನೋಡಿ ಬಾಪ್ ರೇ ಬಾಪ್ ಅಜಯ್ ಬಾಡಿ ಲುಕಿಂಗ್ ಸೂಪರ್ ಎಂದು ಟ್ವೀಟ್ಟರ್ ನಲ್ಲಿ ಸಲ್ಲೂ ಮಿಯಾ ಹಾಡಿ ಹೊಗಳಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಜಯ್, ಸಲ್ಮಾನ್ ಬಾಡಿನೇ ಬಾಲಿವುಡ್ ನಲ್ಲಿ ಬೆಸ್ಟ್ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾನೆ.

ಸಿಂಗಮ್ ಚಿತ್ರದಲ್ಲಿನ ನನ್ನ ಸಿಕ್ಸ್ ಪ್ಯಾಕ್ ನೋಡಿ ಸಲ್ಮಾನ್ ಹೊಗಳಿರುವುದು ಸಂತೋಷ ತಂದಿದೆ. ನಾವಿಬ್ಬರು ಉತ್ತಮ ಗೆಳೆಯರು. ಆದರೆ, ಇಂಡಸ್ಟ್ರಿಯಲ್ಲಿ ಸಲ್ಮಾನ್ ಬಾಡಿನೇ ಬೆಸ್ಟ್ ಎಂದು ಅಜಯ್ ಹೇಳಿದ್ದಾನೆ. ಸಿಂಗಮ್ ಚಿತ್ರದ ಕಥೆಗೆ ತಕ್ಕಂತೆ ಮೈಕಟ್ಟು ಹೊಂದಲು ಸಿಕ್ಸ್ ಪ್ಯಾಕ್ ಗೆ ಮೊರೆ ಹೋದೆ.

ಯಾವ ಟ್ರೆಂಡ್ ಹಿಂದೆ ನಾನು ಬೀಳುವುದಿಲ್ಲ. ಚಿತ್ರದ ಕಥೆ ಮುಖ್ಯ. ದಿನ ನಿತ್ಯ ಮೂರು ಗಂಟೆ ಜಿಮ್ ನಲ್ಲಿ ಬೆವರಿಳಿಸುತ್ತಿದ್ದೆ. ನನ್ನ ಸಮತೋಲನ ಆಹಾರದ ಬಗ್ಗೆ ಕಾಜೋಲ್ ಕೊಂಚ ನಿಗಾ ವಹಿಸಿದ್ದಳು ಅಷ್ಟೇ ಎಂದು ಅಜಯ್ ಹೇಳಿದ್ದಾನೆ.

ಎಂಟು ವರ್ಷ ಮುಂಚೆ ಬಂದ ಕಯಾಮತ್ ಚಿತ್ರದ ನಂತರ ಮತ್ತೊಮ್ಮೆ ಸಾಹಸಭರಿತ ಚಿತ್ರದಲ್ಲಿ ಅಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಗಮ್ ಚಿತ್ರ ಈ ವಾರ ತೆರೆಗೆ ಬರಲಿದ್ದು, ಕಾಜಲ್ ಅಗರ್ ವಾಲ್ ನಾಯಕಿಯಾಗಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಕೂಡ ಇದ್ದಾರೆ.

ತಮಿಳಿನಲ್ಲಿ ಸೂರ್ಯ ಅಭಿನಯಿಸಿದ ಸೂಪರ್ ಹಿಟ್ ಚಿತ್ರ ಸಿಂಗಮ್ ಕನ್ನಡದಲ್ಲಿ ಸುದೀಪ್ ಅಭಿನಯದಲ್ಲಿ ಕೆಂಪೇಗೌಡ ಆಗಿ ಯಶಸ್ವಿಯಾಗಿತ್ತು. ಈಗ ಹಿಂದಿಯಲ್ಲಿ ಇದೇ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ಮಿಸಿದ್ದಾರೆ.

ಈ ಚಿತ್ರದ ಟ್ರೈಲರ್, ಸ್ಟಿಲ್ಸ್ ಯಾವ ಪರಿ ಜನಪ್ರಿಯವಾಗಿದೆ ಎಂದರೆ, ಅಜಯ್ ಮುಖವನ್ನು ಮಾರ್ಫ್ ಮಾಡಿ ಅಲ್ಲಿ ಪ್ರಧಾನಿ ಸಿಂಗ್ ಅವರ ಚಿತ್ರ ಅಂಟಿಸಿರುವ ಕೆಲ ಕುಹಕಿಗಳು ಉತ್ತಮವಾಗಿ ಸಂಯೋಜನೆ ಮಾಡಿ ವೆಬ್ ನಲ್ಲಿ ಹರಿ ಬಿಟ್ಟಿದ್ದಾರೆ.

More from Filmibeat

English summary
Ajay Devgan praises Salman khan in his latest tweet, says he has the best body in Bollywood. Ajay's tweet ed this after salman appreciated Ajay Devgan's six pack muscular body in Singam. Ajay can be seen has action hero after 8 years in Singam releasing this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X