ತಾರೆ ಬಿಪಾಶಾ ಬಸು ಕೆಂಪು ಚೆಡ್ಡಿ ಮತ್ತು ರಸಗುಲ್ಲ
ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಮತ್ತೆ ತಮ್ಮ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಟೊಂಕ ಕಟ್ಟಿದ್ದಾರೆ. ಸಪೂರ ದೇಹಕ್ಕಾಗಿ ಬಿಪಾಶಾ ಸಿಹಿ ತಿನ್ನುವುದನ್ನು ನಿಲ್ಲಿಸಿದ್ದಾರೆ. ಸದ್ಯಕ್ಕೆ ಸಿಹಿಯಿಂದ ದೂರ ಇರುವ ಬಿಪಾಶಾ, ಉಪ್ಪು, ಹುಳಿ, ಖಾರದ ಬಗ್ಗೆ ಚಕಾರವೆತ್ತಿಲ್ಲ.
ಇಷ್ಟಕ್ಕೂ ತಾವು ಯಾವ ಘನಕಾರ್ಯಕ್ಕಾಗಿ ಸಿಹಿ ತಿನ್ನುವುದನ್ನು ಬಿಟ್ಟಿದ್ದೀರಾ ಎಂದರೆ, ಇದೆಲ್ಲಾ ತಮ್ಮ ಮುಂದಿನ ಚಿತ್ರ 'ಪ್ಲೇಯರ್'ಗಾಗಿ ಕಸರತ್ತು ಎಂದಿದ್ದಾರೆ ಬಿಂಕದ ಬಂಗಾರಿ. ಚಿತ್ರದಲ್ಲಿ ಈಕೆ ಬಿಕಿನಿ ಬಾಡಿಗಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಒಟ್ಟು ಆರು ವಾರಗಳ ಕಾಲ ಸಿಹಿಯಿಂದ ಕಿಲೋ ಮೀಟರ್‌ಗಳಷ್ಟು ದೂರ ಸರಿದಿದ್ದಾರೆ.
ಸಾಮಾನ್ಯವಾಗಿ ಬಂಗಾಳಿಗಳಿಗೆ ಸಿಹಿ ತಿನಿಸುಗಳೆಂದರೆ ಪಂಚಪ್ರಾಣ. ಅದರಲ್ಲೂ ರಸಗುಲ್ಲ ಎಂದರಂತೂ ಬಾಯಲ್ಲಿ ರಸದ ಊಟೆ ಉಕ್ಕಿಬರುತ್ತದೆ. ಇಂತಹ ಸಿಹಿ ತಿನಿಸಿನಿಂದಲೂ ಬಿಪಾಶಾ ಬಲು ದೂರ ಉಳಿದಿದ್ದಾರೆ. ಒಟ್ಟಿನಲ್ಲಿ ಈಕೆಯ ಬಾಡಿ ಷೇಪ್ ಜೇಮ್ಸ್ ಬಾಂಡ್ ಚಿತ್ರದಲ್ಲಿನ ಹೇಲ್ ಬೆರ್ರಿ ಮಾಡಬೇಕು ಎಂದು ಶಪಥ ತೊಟ್ಟಂತಿದೆ. (ಏಜೆನ್ಸೀಸ್)


Click it and Unblock the Notifications











