ಕರೀನಾ ಕಪೂರ್ ಸೈಫ್ ಆಲಿ ಖಾನ್ ಮದುವೆ ಪ್ಲಾನ್
ಸೈಫ್ ಆಲಿ ಖಾನ್ ಜೊತೆ ಕರೀನಾ ಕಪೂರ್ ಇನ್ನೊಂದು ವಾರದಲ್ಲಿ ಲಂಡನ್‌ಗೆ ಹಾರಲಿದ್ದಾರೆ. ರಜಾ ದಿನಗಳನ್ನು ಮಜವಾಗಿ ಕಳೆಯಲು ಇಬ್ಬರೂ ತುದಿಗಾಲಲ್ಲಿ ನಿಂತಿದ್ದಾರೆ. ಇದಕ್ಕಾಗಿ ಕರೀನಾ ಅಭಿನಯಿಸುತ್ತಿರುವ 'ಬಾಡಿಗಾರ್ಡ್' ಚಿತ್ರದ ಡೇಟ್ಸ್ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ ಎಂದು ಸಲ್ಲುರನ್ನು ವಿನಂತಿಸಿಕೊಂಡಿದ್ದರು.
ಮೊದಲೆ ಹೇಳಿ ಕೇಳಿ ನಮ್ಮ ಸಲ್ಲು ಮಿಯಾ ಭಗ್ನ ಪ್ರೇಮಿ. ಪ್ರೇಮಿಗಳ ಮನದಾಳದ ಕಾಮನೆಗಳನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡ ಅಲ್ಲ. ಅದರಲ್ಲೂ ಮುಖ್ಯವಾಗಿ ಪ್ರೇಮಿಗಳೆಂದರೆ ಸಲ್ಲುಗೆ ಎಲ್ಲಿಲ್ಲದ ಕರುಣೆ,ಅನುರಾಗ, ಅನುಕಂಪಗಳು ಹುಟ್ಟಿ ಬರುತ್ತವೆ. ಕರೀನಾ ಕೇಳಿದ್ದೆ ತಡ, ಇಲ್ಲ ಎನ್ನದೆ ಹೋಗಿ ಬಾ ತಂಗಿ ಎಂದಿದ್ದಾನೆ.
ಕರೀನಾ ಕುಟುಂಬ ಮೇಲೆ ಸೈಫ್‌ಗ್ ಇತ್ತಿತ್ತಲಾಗಿ ಎಲ್ಲಿಲ್ಲದ ಅಕ್ಕರೆ ಉಂಟಾಗಿದೆಯಂತೆ. ಇನ್ನು ಕರೀನಾ ಕೂಡ ಸೈಫ್ ಮಕ್ಕಳ ಬಗ್ಗೆ ತುಂಬಾ ಕಾಳಜಿವಹಿಸುತ್ತಿದ್ದಾರಂತೆ. ಒಟ್ಟಿನಲ್ಲಿ ಇಬ್ಬರು ಆದಷ್ಟು ಬೇಗ ಮದುವೆಯಾಗಲು ಪ್ಲಾನ್ ಮಾಡುತ್ತಿದ್ದಾರೆ. ಲಂಡನ್‌ನಿಂದ ಪ್ಯಾರಿಸ್‌ಗೆ ಹಾರಲಿರುವ ಈ ಜೋಡಿಹಕ್ಕಿಗಳು ಇನ್ನೊಂದು ವರ್ಷದಲ್ಲಿ ಗೂಡು ಸೇರಲಿವೆ. (ಏಜೆನ್ಸೀಸ್)


Click it and Unblock the Notifications











