For Quick Alerts
  ALLOW NOTIFICATIONS  
  For Daily Alerts

  ವಿವೇಕ್‌ಗೆ ಕಿಸ್ಸಿಂಗ್ ಎಕ್ಸ್‌ಪರ್ಟ್ ಮಲ್ಲಿಕಾ ಚುಂಬನ ಪಾಠ

  By Rajendra
  |

  ತಾರೆ ಮಲ್ಲಿಕಾ ಶೆರಾವತ್ ಬಾಲಿವುಡ್‌ನಲ್ಲಿ ಕಿಸ್ಸಿಂಗ್ ಎಕ್ಸ್‌ಪರ್ಟ್ ಎಂದೇ ಖ್ಯಾತರಾದವರು. ಇನ್ನು ವಿವೇಕ್ ಒಬೆರಾಯ್‌ಗೆ ಕೈಯಲ್ಲಿ ಗನ್ ಹಿಡಿಯುವುದು ಬಿಟ್ಟರೆ ಕಿಸ್ಸಿಂಗು, ಲಿಪ್‌ ಲಾಕಿಂಗು ವಿಷಯಗಳಲ್ಲಿ ವೀಕು. ಹಾಗಾಗಿ ವಿವೇಕ್‌ಗೆ ಸ್ವತಃ ಮಲ್ಲಿಕಾ ಚುಂಬನ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಚಿತ್ರದ ಹೆಸರು 'ಕಿಸ್ಮತ್, ಪೈಸಾ, ಲವ್,ದಿಲ್ಲಿ'.

  ಹೆಸರು ಒಂಥರಾ ವಿಚಿತ್ರವಾಗಿದ್ದರೂ ಚಿತ್ರದಲ್ಲಿ ಲಿಪ್ ಲಾಕ್ ಸೀನ್‌ಗಳು ಹೇರಳವಾಗಿವೆಯಂತೆ. ನಮ್ಮ ವಿವೇಕ್‌ ಹಿಂದೆಂದೂ ಈ ರೀತಿಯ ಸೀನ್‌ಗಳಲ್ಲಿ ಅಭಿನಯಿಸಿ ಅನುಭವವಿಲ್ಲ. ಹಾಗಾಗಿ ಒಂಥರಾ ಹಿಂಜರಿಕೆ. ಮಲ್ಲಿಕಾಗೆ ಕಿಸ್ಸಿಂಗ್ ಸೀನ್‌ಗಳಲ್ಲಿ ಲೀಲಾಜಾಲ ಅಭಿನಯ. ಇನ್ನು ಲಿಪ್ ಲಾಕಿಂಗ್ ಎಂದರೆ ಒಂದು ಕೈ ಮೇಲೆ. ತುಟಿಗೆ ತುಟಿ ಒತ್ತುವು ಹೇಗೆ ಎಂದು ಹಂತ ಹಂತವಾವಿ ಹೇಳಿಕೊಟ್ಟು ವಿವೇಕ್ ಭಯವನ್ನು ಒದ್ದು ಹೋಡಿಸಿದ್ದಾಳೆ.

  ಚಿತ್ರದಲ್ಲಿ ಒಂದು ಕಡೆ ಇಬ್ಬರೂ ಅಪ್ಪಿ ತಬ್ಬಿ ಮುದ್ದಾಡುತ್ತಾರಂತೆ. ಮೊದಲೇ ಕಿಸ್ಸಿಂಗ್ ಎಕ್ಸ್‌ಪರ್ಟ್ ಆದ ಮಲ್ಲಿಕಾಗೆ ಈ ಸೀನ್ ಅರ್ಥವಾಗಿದೆ. ಆದರೆ ವಿವೇಕ್‌ಗೆ ಅರ್ಥವಾದರೂ ಕೊಂಚ ಮೂತಿ ಸೊಟ್ಟಗೆ ಮಾಡಿದ್ದಾನೆ. ಅಯ್ಯೋ ಕಿಸ್ ಕೊಡಕ್ಕೂ ಬರಲ್ವಾ ಎಂದು ಮಲ್ಲಿಕಾಳೇ ಹೇಳಿಕೊಟ್ಟಿದ್ದಾಳೆ. (ಏಜೆನ್ಸೀಸ್)

  English summary
  Bollywood actress Mallika Sherawat who is expert in kissing her co-star in films will give Vivek Oberoi a lesson as how to lock-lips on screen for their new flick, ‘Kismat, Paisa, Love, Dilli’.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X